ಮನೆ ಪೌರಾಣಿಕ ಪ್ರಚೇತಸರ ತಪೋದೀಕ್ಷೆ

ಪ್ರಚೇತಸರ ತಪೋದೀಕ್ಷೆ

0

ಕಾಲಕ್ರಮೇಣ ಪೃಥು ಚಕ್ರವರ್ತಿಗೆ ಇಬ್ಬರು ಪುತ್ರರು ಅಂತರ್ಥಿ ಮತ್ತು ವಾರ್ಥಿ ಎಂಬುವರು ಜನಿಸಿದರು. ಅಂತರ್ಥಿಗೆ ಶಿಖಂಡಿಯ ಗರ್ಭದಲ್ಲಿ ಹವಿರ್ದಾನು ಹುಟ್ಟಿದನು. ಅವನಿಗೆ ಅಗ್ನಿವಂಶದಲ್ಲಿ ಹುಟ್ಟಿದ ವಿಷಣ ಎಂಬ ಸೌಭಾಗ್ಯವತಿಯನ್ನು ಕೊಟ್ಟು  ವಿವಾಹ ಮಾಡಿದರು. ಆ ದಂಪತಿಗಳಿಗೆ ಹುಟ್ಟಿದ ಮಗನು ಧರ್ಮನಿರಂತನಾಗಿ ವೇದ ಧರ್ಮವನ್ನು ಸನ್ಮಾರ್ಗದಲ್ಲಿ ಅನುಷ್ಠಾನಪಿಸಿದ ಪುಣ್ಯಶಾಲಿ. ಆತನು ಯಜ್ಞ ಮಾಡುವಾಗ ದರ್ಭೆಗಳ ಅಗ್ರ ಭಾಗವನ್ನು ಪೂರ್ವ ಅಭಿಮುಖವಾಗಿ ಇಟ್ಟಿದ್ದರಿಂದ ಅವನಿಗೆ ಪ್ರಾಚೀನಬ್ರರ್ಹಿ ಎಂಬ ಶುಭನಾಮವುಂಟಾಯಿತು. ಪ್ರಾಚೀನಬ್ರರ್ಹಿನಿಯು ಸಮುದ್ರ ರಾಜನ ಮಗಳಾದ ಸೌವರ್ಣಳನ್ನು ಪರಿಣಯವಾಗಿ ಹತ್ತು ಜನ ಸಂತಾನವನ್ನು ಪಡೆದನು. ಅವರಿಗೆ ಪ್ರಚೇತಸರೆಂಬ ಹೆಸರು ಬಂದಿತು.

Join Our Whatsapp Group

    ಪ್ರಾಚೀನಬರ್ಹಿಯ ಪುತ್ರರಾದ ಪ್ರಚೇತಸರು  ಧನುರ್ವೇದವನ್ನು ಸುಲಲಿವಾಗಿ ಪ್ರಯೋಗ, ಉಪಸಂಹಾರ ಪೂರ್ವಕವಾಗಿ ಅಭ್ಯಸಿಸಿ ಮಹಾಯೋಧರನ್ನು ಸಹ ಸೋಲಿಸಿದರು.ಅವರೆಲ್ಲರೂ ಯಾವುದೇ ಕಳಂಕವಿಲ್ಲದ ಧರ್ಮ ಮಾರ್ಗದೆಡೆಗೆ ತಮ್ಮ ಜೀವನವನ್ನು ಮಾನವೀಯವಾಗಿ ಪರಿವರ್ತಿಸಿಕೊಂಡು ಅತ್ಯೋನ್ನತಿಯನ್ನು ಸಾಧಿಸಿದರು.ಒಮ್ಮೆ ಪ್ರಾಚೀನ ಬರ್ಹಿ ತನ್ನ ಮಕ್ಕಳೆಲ್ಲರನ್ನು ಕರೆಯಿಸಿ“ ಮಕ್ಕಳೇ! ತಂದೆ ತಾಯಿಯರ ಆದೇಶವನ್ನು ಶಿರಸಾ ವಹಿಸಿ ಒಳ್ಳೆಯ ಮಾರ್ಗವನ್ನು    ಅನುಸರಿಸಿ ನಮ್ಮ ವಂಶದಲ್ಲಿ ಜನಿಸಿದ ಮಹಾಪುರುಷರ ಕೀರ್ತಿ ಪ್ರತಿಷ್ಠೆಗಳ  ಅಭಿವೃದ್ಧಿಗೆ ಸಹಕರಿಸಿದ್ದೀರಾ. ನೀವಿನ್ನು ಈ ಲೋಕದಲ್ಲಿ ಸಾಧಿಸುವಂಥದ್ದು ಬಯಸುವಂತಹದ್ದು ಇಲ್ಲವೆಂಬುದಂತೆ ವೈರಾಗ್ಯ ಪಥದಲ್ಲಿ ನಡೆದು ಸೌಖ್ಯವನ್ನು ಸಂಪಾದಿಸಿದ್ದೀರಾ.ನೀವು ರಕ್ಷಿಸಿದ ಧರ್ಮವು ನಿಮ್ಮನ್ನು ರಕ್ಷಿಸುತ್ತದೆ. ರಾಜ್ಯಪಾಲನೆಯ ಈ ಕಠಿಣ ಭಾರವನ್ನು ತ್ಯಾಗಮಾಡಿ, ದೀಕ್ಷಾ ದಕ್ಷರಾಗಿ ಆರ್ತ ತ್ರಾಣ ಪಾರಾಯಣನಾದ ಶ್ರೀಮನ್ನಾರಾಯಣ ದರ್ಶನವನ್ನು  ಪಡೆಯಲಿಕ್ಕಾಗಿ ತಪಸ್ಸನ್ನು ಆಚರಿಸಿರಿ. ಪ್ರಜಾಪತಿಯ ಪದವಿಯನ್ನು ಅರ್ಧಿಸಿ ಮುಂಬರುವ ಕಾಲದಲ್ಲಿ ಚರಾಚರ ಭೂತ ಜಾತಿಯನ್ನು ಸಂಕಲ್ಪ ಸಿದ್ಧವಾಗಿ ರೂಪಿಸಿರಿ ಎಂದು ಭೋದಿಸಿದನು.

      ಆಗ ಪ್ರಚೇತಸರು ತಂದೆಯ ಆದೇಶವನ್ನು ಶಿರಸಾವಹಿಸಿ ದಕ್ಷಿಣ ದಿಶೆಗೆ ಹೋಗಿ, ಸಮುದ್ರ ಜಲದ ಮಧ್ಯದಲ್ಲಿ ನಿಂತು ಶ್ರೀಮಹಾವಿಷ್ಣುವನ್ನು ಕುರಿತು ತಮ್ಮ ಹೃದಯದಲ್ಲಿ ಸ್ಥಿರಪಡಿಸಿಕೊಂಡು ಸ್ವಸ್ವರೂಪಾನು ಸಂಧಾನದಲ್ಲಿ ಏಕಾಗ್ರ ಚಿತ್ತರಾಗಿ ಹತ್ತು ಸಾವಿರ ವರ್ಷಗಳ ಕಾಲ ತಪಸ್ಸನ್ನು ಆಚರಿಸಿದರು. ಈ ರೀತಿ ಕಠಿಣ ಧ್ಯಾನ ಸಮಾಧಿಯಲ್ಲಿರುವ ತನ್ನ ಭಕ್ತರ ಸಂಕಲ್ಪ ದೀಕ್ಷೆಗೆ ಪ್ರಸನ್ನನಾಗಿ ಶ್ರೀ ಹರಿಯು ಅವರ ಬಯಕೆಗಳನ್ನು ಈಡೇರಿಸುವ ಸಮಯವು ಆಸನ್ನವಾಗಿದೆಯೆಂದು ತಿಳಿದನು. ವಿರಾಜಮಾನನಾದ ನೀಲಮೇಘಶ್ಯಾಮನು, ಕರದೃತ ಸುದರ್ಶನ, ಪಾಂಚಜನ್ಯ ಕೌಮೋಧಕಿ ಶಾರ್ದಕೋದಂಡ ಸುದರ್ಶನೀಯ ತೇಜೋವಿಲಾಸನು, ವಾಸುದೇವನು ತಾಪಸಮಂದಾರನು, ವೈಜಯಂತಿ ಪ್ರಿಯನು,,ಶ್ರೀಧರನು ಆದ ಶ್ರೀ ಮಹಾವಿಷ್ಣು ಗುರುತ್ಮಂತನನ್ನು ಅಧಿರೋಹಿಸಿ, ಜಲದ ಮಧ್ಯದಲ್ಲಿರುವ ಪ್ರಚೇತಸರ ಮುಂದೆ ಪ್ರತ್ಯಕ್ಷನಾದನು. ಪ್ರಚೇತ ಸರು ತಮ್ಮ ಪುಣ್ಯ ಪರಿಪಾಕಕ್ಕೂ ಪ್ರಭುಗಳ ಕರುಣಾಪ್ರಪಾದಕ್ಕೂ ಮನಸಾರಾಗಿ ಈ ಮನ್ನಾ ರಾಯಣನ ದಿವ್ಯ ತೇಜಸ್ಸನ್ನು  ಕಣ್ಣಾರೆ ಕಂಡು ಅಮಿತಾನಂದದೊಂದಿಗೆ ಸ್ತುತಿಸಿದರು.

   “ಪರಂಧಾಮಾ!ಪರಾತ್ವರಾ ಜಗದುತ್ವತ್ತಿ ಸುಸ್ಥತಿ ಲಯಕಾರಕನೇ! ಅಖಿಲಾಂಡ ಬ್ರಹ್ಮಾಂಡನಾಯಕನೇ! ಶುಭಕರಾ!ಕರುಣಾಪಯೋನಿಧಿ! ನಿನ್ನ ದರ್ಶನ ಭಾಗ್ಯವೇ ನನಗೆ ಅಭಿಷ್ಟ್ರವರ ಪ್ರಸಾದ. ಭವಿಷ್ಯತ್ಕಲ್ಪದಲ್ಲಿ ಪ್ರಜಾಪತಿಗಳಾಗಿ ನಿನ್ನ ಸೇವಾ ವಿಧಿಯನ್ನು ನಿರ್ವಹಿಸಿಕೊಳ್ಳುವ ಮಹಾವಕಾಶವನ್ನು ನಮಗೆ ಪ್ರಾರ್ಥಿಸು ಸ್ವಾಮಿ! ”ಎಂದು ಬೇಡಿದರು.

ಅದಕ್ಕೆ ವಿಷ್ಣು “ನೀವು ಜೀವನದ ಸಂಧ್ಯಾಕಾಲದಲ್ಲಿದ್ದೀರಾ!ನಿಮಗೆ ಪುತ್ರನಾಗಿ ಜನಿಸುವ ದಕ್ಷನ್ನು ಮುಂಬರುವ ಕಲ್ಪಾದಿ ಸಮಯದಲ್ಲಿ ಪ್ರಜಾಪತಿ ಪದವಿಯನ್ನು ಪಡೆದು ಸೃಷ್ಟಿಕಾರನಾಗಿ ನಿಮ್ಮ ಬಯಕೆಯನ್ನು ಸಫಲಗೊಳಿಸುತ್ತಾನೆ” ಎಂದು ಹೇಳಿ ಅವರ ಕಲ್ಯಾಣಸಂಕಲ್ಪಕ್ಕೆ ಆಶೀರ್ವದಿಸಿ ಶ್ರೀ ಮಹಾ ವಿಷ್ಣು ಅಂತರ್ಧಾನನಾದನು.

 ಪ್ರಚೇತಸರು ತಪಸ್ಸನ್ನು ಮುಗಿಸಿ ಜಲದ ನಡುವೆಯಿಂದ ಹೊರಗೆ ಬರುವಷ್ಟರಲ್ಲಿ ರಾಜ್ಯದಲ್ಲಿ ಅಪನೀತಿ, ಅರಾಜಕತೆಯು ಸಂಪೂರ್ಣವಾಗಿ ವ್ಯಾಪಿಸಿ ಜನಪದ ಗಳೆಲ್ಲವೂ ನಿರ್ಜಲಗಳಾಗಿದ್ದವು.ಹಚ್ಚ ಹಸುರಿ ಗೆ ಇದ್ದಂತಹ ಹೊಲಗಳಲ್ಲಿ ದಂಡ ಕಾರಣ್ಯಗಳು ನೆಲೆಸಿದವು. ಹತ್ತು ಸಾವಿರ ವರ್ಷಗಳ ಕಾಲ ರಾಜರಿಲ್ಲದೇಯಿದ್ದುದರಿಂದ ಪ್ರಜಾವಾಸಿಗಳು ಜಂತು ಪ್ರಾಣಿಗಳಿಗೆ ಆಹಾರವಾಗತೊಡಗಿದರು.  ಎತ್ತ ನೋಡಿದರೂ ಗಿಡಮರಗಳು ದಟ್ಟವಾಗಿ ಹಬ್ಬಿಕೊಂಡು ಎಲ್ಲವೂ ಆಗಮ್ಯ ಗೋಚರವಾಗಿತ್ತು.ಪ್ರಚೇತಸರು ತಮ್ಮ ತಪೋಮಹಿಮೆಯಿಂದ ಒಂದು ತೀವ್ರ ಪ್ರಕೋಪವನ್ನು ಕಲ್ಪಿಸಿ ಜನಸ್ಥಾನಗಳಿಗೆ ಅಡ್ಡವಾಗಿದಂತಹ ವೃಕ್ಷಮೂಲಗಳನ್ನು ಕ್ಷಣದಲ್ಲಿ ಕಿತ್ತು ಹಾಕಿಸಿದರು. ತಮ್ಮ ಅಪ್ರತಿಮವಾದ ಕೋಪಾಗ್ನಿಯನ್ನೇ ಸಾಧನವನ್ನಾಗಿಸಿ ಆ ವೃಕ್ಷ ಸಂತತಿಯನ್ನು ದಗ್ಧಗೊಳಿಸುವುದಕ್ಕೆ ಉಪಕ್ರಮಿಸಿದರು. ಆ ರೀತಿ ದಹಿಸಲ್ಪಟ್ಟು ಉಳಿದಿರುವ ಕೇವಲ ವೃಕ್ಷಗಳ ಆವೇಶಗಳಿಂದ ವನ ವಿಭನಾದ ಸೋಮದೇವನು ಅವತರಿಸಿ ಕ್ರೋಧಭರಿತವಾದ ಪ್ರಚೇತಸರನ್ನು ತನ್ನ ತಣ್ಣನೆಯ  ನೋಟದಿಂದ ಉಪಶಮನಗೊಳಿಸಿದನು. ತಮ್ಮ ಕರುಣೆಯಿಂದ ಉಪಜೀವಿಸುವ ತರುಲತೆ ಕದಂಬಗಳನ್ನು ಸಂರಕ್ಷಿಸಿ ಸುಶಾಂತಿಯನ್ನು ಕಲ್ಪಿಸುವಂತೆ ಆತನು ಅವರನ್ನು ಆದೇಶಿಸಿದನು. ನಂತರ ಸೋಮದೇವನು ಶ್ರೀಮನ್ನಾರಾಯಣನನ್ನು ದಕ್ಷ ಪ್ರಜಾಪತಿಯನ ಜನನಕ್ಕಾಗಿ ಪ್ರಾರ್ಥಿಸಿದ ವರವನ್ನು ನೀವು ಸಾರ್ಥಕ ಮಾಡಬೇಕು. ನೀವು ವಿವಾಹಿತರಾಗಿ ಗೃಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸಿ ಪಾಣಿಗೃಹತಿಯ ಗರ್ಭದಲ್ಲಿ ನಿಮ್ಮ ದಿವ್ಯ ತೇಜಸ್ಸನ್ನು ಪ್ರವೇಶಪಡಿಸಿರಿ ಎಂದು ಹೇಳಿ ಶೀತಕಿರಣನು ಲೋಕೋತ್ತರ ಸೌಂದರ್ಯವತಿ ಯಾದಂತಹ ಒಬ್ಬ ಕನ್ಯಾ ಶಿರೋ ರತ್ನವನ್ನು ಅವಿರ್ಭವಿಸುವಂತೆ ಮಾಡಿದನು. ನಂತರ ಚಂದ್ರನು ನೀವಿಲ್ಲದ ಸಮಯದಲ್ಲಿ ಜನ ಸಮೂಹವನ್ನು ನೋಯಿಸಿ ಭೂಮಿ ಜಗಳನ್ನು ನಿಮ್ಮ ಕ್ರೋಧಾಗ್ನಿಯಿಂದ ದಹಿಸಿದಿರಿ. ತಪಸ್ವಿಗಳಾದ ನಿಮಗೆ ದೀರ್ಘ ಕೋಪಇರುವುದು ಸಮಚಿತವಾದುದಲ್ಲ.ಈ ಲ್ಯಾವಣ ರಾಶಿಯು ನಿಮಗಾಗಿ ವಹಿಸಿರುವ ತೇಜದೊಂದಿಗೆ ಅವತರಿಸಿದ ಪುಣ್ಯವತಿ. ಈಕೆಯ ಹೆಸರು ಮಾರಿಷ. ಈಕೆಯನ್ನು ವಿವಾಹವಾದ ಮೇಲೆ ನಿಮಗೆ ಹುಟ್ಟುವ ಸುತನಿಗೆ ಅಮೃತಾಂಶನ ತೇಜಾಂಶನ,ಪ್ರಚೇತರ ತೇಜಾಂಶ ಆಕೆಯ ಶಕ್ತಿಗಳಾಗಿ ಬರುತ್ತವೆ ಎಂದು ಹೇಳಿದ ಚಂದ್ರನ ಮಾತುಗಳಿಗೂ ಆಶ್ಚರ್ಯ ಚಕಿತರಾಗಿ ಪ್ರಚೇತರು ”ಸುಧಾಕರಾ! ಭೂರುಹರಿಗೆ ಈ  ಜ್ಯೋತಿರ್ವಯಿ ಜನಿಸಿದ ಉದಂತವು ನಮಗೆ  ಅಚ್ಚರಿಯನ್ನುಂಟುಮಾಡುತ್ತಿದೆ.  ಕೃಪಾಕಲಿತನಾಗಿ ನಮಗೆ ಆಕೆಯ ಜನ್ಮ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳು” ಎಂದು ಕುತೂಹಲದಿಂದ ಕೇಳಿದರು.

ಹಿಂದಿನ ಲೇಖನಸಚಿವ ನಾಗೇಂದ್ರ  ರಾಜಿನಾಮೆ ಕೇಳಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಶಿವಮೊಗ್ಗ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು