ಮನೆ ಪೌರಾಣಿಕ ಪ್ರಚೇತಸರ ತಪೋದೀಕ್ಷೆ: ಭಾಗ 2

ಪ್ರಚೇತಸರ ತಪೋದೀಕ್ಷೆ: ಭಾಗ 2

0

ಭೂದೇವಿಯ ಸಂತ್ವನ ವಾಕ್ಯಗಳಿಂದ ಶಾಂತಿಸಿದ ಪೃಥು ಮುಂದಿನ ಕರ್ತವ್ಯವೇನೆಂಬುದನ್ನು ಪುನರಾಲೋಚಿಸಿದನು. ಚತುಸ್ಸ ಮುದ್ರ ಮುದ್ರಿತವಾದ ಧರಾವಲಯದ ಮೇಲೆ ಗೋಕ್ಷೀರ ಧಾರೆಗಳನ್ನು ಪ್ರವಹಿಸುವಂತೆ ಮಾಡಲು ಬೇಕಾಗುವ ಸಮತಲವಿಲ್ಲವೆಂದು ಆಲೋಚಿಸಿ ಆತನು ಧಾರುಣಿಯ ಮೇಲಿರುವ ಏರಿಳಿತ ಪ್ರದೇಶಗಳನ್ನು ಬೆಟ್ಟ ಗುಡ್ಡಗಳನ್ನು ಸಮತಲ ಮಾಡಬೇಕೆಂದು  ಸಂಕಲ್ಪಿಸಿದನು. ಅಪೂರ್ವವಾದ ತನ್ನ ಬಾಹುಶಕ್ತಿ ಸಂಪತ್ತನ್ನೆಲ್ಲಾ ತನ್ನ ದಕ್ಷಿಣ ಭುಜದೊಳಕ್ಕೆ ಕೇಂದ್ರೀಕರಿಸಕೊಡು, ಮಹಾಬಲದಿಂದ, ವಿಶ್ವಂಭರಾ ಮಂಡಲದಲ್ಲಿನ ಸರ್ವ ಪರ್ವತವನ್ನು ಒಂದೇ ಏಟಿನಿಂದ ಹೊಡೆದಿರುಳಿಸಿ ಸಮಾತಲವನ್ನುಂಟುಮಾಡಿದನು.ಆಯಾ ಸಮತಟ್ಟಾದ ಪ್ರದೇಶಗಳಲ್ಲಿ ನಿವಾಸ ಯೋಗ್ಯವಾದ ಸ್ಥಳಗಳನ್ನು, ಗ್ರಾಮಗಳನ್ನು ಪಟ್ಟಣಗಳನ್ನು ಬೇರ್ಪಡಿಸಿ. ಪ್ರಾಂತ್ರಗಳನ್ನಾಗಿ ವಿಭಾಗಿಸಿ, ಮಾನವರಿಗೆ ಅನ್ನ ಸಂಪಾದನೆಗೆ ಅನುಕೂಲವಾಗುವಂತೆ ಭೂಮಿ ಯೊಳಗೆ ಬಹು ಸಸ್ಯಸಂಪತ್ತನ್ನು ನಿಕ್ಷೇಪಿಸಿದನು.ಎಲ್ಲಾ ರೀತಿಯ ಭೋಗ ಭಾಗ್ಯಗಳಿಗೂ ತಕ್ಕ ಜೀವನೋಪಕರಣಗಳನ್ನು ನೆಲದೊಳಗೆ ಭದ್ರಪಡಿಸಿಟ್ಟನು ಭೂದೇವಿಯು ಬೇಡದಂತೆಯೇ ಸ್ವಯಂಭುಮನವು ವತ್ಸನಾಗಿ ಬಂದು ಗೋವಿನ ಬಳಿಯಲ್ಲಿ ನಿಲ್ಲಲು ಪೃಥು ಚಕ್ರವರ್ತಿಯು ಆಕೆಯ ತುಂಬಿದ ಕೆಚ್ಚಲಿನಿಂದ ಅಮೃತಸಮಾನವಾದ ಅಕ್ಷಯ ದುಗ್ಧಧಾರೆಗಳನ್ನು ಕರೆದನು.ಭೂಮಿಯ ಮೇಲೆ ಆ ಕ್ಷೀರದಾರುಗಳು ಹರಿದ ಕಡೆಗಳಲ್ಲಿ ಬೆಳಗಲು ಬೆಳೆಯಲಾರಂಭಿಸಿದವು.ಮಾನವ ಸಮಾಜವು ಮತ್ತೆ ಸಂಪದ್ಬರಿತವಾಗಿ ಕಳೆಕಳೆಯಿಂದ ತುಂಬಿತು. ಪೃಥುವಿನ  ಪೃಥು ಯತ್ನದಿಂದ ದೇವತೆಗಳು,ದೈತ್ಯರು, ಕಿನ್ನರರು, ಗಂಧರ್ವರು, ಯಕ್ಷರು, ವಿವಿಧ ಜಂತುಗಳು ಸಮಸ್ತ ಜೀವ ಜಾಲವೆಲ್ಲಕ್ಕೂ ಯಥೋಚಿತವಾದ ಖಾದ್ಯ ಖಾದನ ಭೋಜನ ವಸತಿಂದುಂಟಾಗಿ ಆತನು ಅನೇಕ ಸಹಸ್ತ್ರ ಆಯನಗಳು ರಾಜ್ಯವನ್ನಾಳಿ ಧರ್ಮವನ್ನು ರಕ್ಷಿಸಿದನು. ಪೃಥುವಿನ ಕರುಣೆಯಿಂದ ನಾಶವಾಗದೇ ಉಳಿದ ಭೂದೇವಿಗೆ ಆತನ ಹೆಸರಿನಲ್ಲಿ ಪೃಥ್ವಿ ಎಂಬ ನಾಮವು ಸಿದ್ಧಿಸಿತು.

Join Our Whatsapp Group

    ತ್ರಿಲೋಕಗಳಿಗೂ ಅನ್ನದಾತನಾದ ಪೃಥು ಚಕ್ರವರ್ತಿಯ ಪವಿತ್ರ ಚರಿತ್ರೆಯನ್ನು ಕೇಳಿದ ಭಾಗ್ಯಶಾಲಿಗಳಿಗೆ ಸಂಚಿತ ಕರ್ಮ ದೋಷಗಳು ಕಳೆದು ಹೋಗಿ, ಭವ್ಯವಾದ ಸುಖ ಸ್ಥಿತಿಯುಂಟಾಗುತ್ತದೆ. ಅವರಿಗೆ ಪರತ್ಪರನಾದ ಶ್ರೀಮನ್ನಾ ರಾಯಣನು ಆಶ್ವಮೇಧ ಯಾಗವನ್ನು ಮಾಡಿದ ಮಹಾಪುಣ್ಯ ಫಲವನ್ನು ಪ್ರಸಾದಿಸುತ್ತೇನೆ ಎಂದು ಪರಾಶರರು ಮೈತ್ರೇಯಿ ಮುನಿಗಳೊಂದಿಗೆ ಹೇಳಿದರು.

ಮಾರಿಷಳ ಜನ್ಮವೃತ್ತಾಂತ:-

ಪುಣ್ಯಪ್ರದವಾದ ಶ್ರೀ ಮಹಾವಿಷ್ಣು ಪುರಾಣವನ್ನು ಭಕ್ತಿ ಶ್ರದ್ಧೆಯಿಂದ ಕುತೂಹಲಭರಿತನಾಗಿ ಕೇಳುತ್ತಿದ್ದ ಮೈತ್ರೇಯ ಮುನಿಗೆ ಪರಶರರು, ಪ್ರಚೇತಸರಿಗೆ ಚಂದ್ರನು ಹೇಳಿದ ಮಾರಷ ಕಥೆಯನ್ನು ಹೇಳಲು ಆರಂಭಿಸಿದನು.

ಪೂರ್ವಕಾಲದಲ್ಲಿ ಒಮ್ಮೆ ದೈವ ಜ್ಞಾನನಾದ ಕಂಡುಮಹರ್ಷಿಯು ಸಹಕಾರ ವಿಷ್ಣುತೇಜನನ್ನು ದರ್ಶಿಸಬೇಕೆಂದು ಸಂಕಲ್ಪಿಸಿ ಗೋಮತಿ ನದಿಯ ತೀರದಲ್ಲಿನ ಪ್ರಶಾಂತ ಸ್ಥಳದಲ್ಲಿ ಕುಳಿತು ತುಂಬಾ ಕಾಲದವರೆಗೂ ಘೋರ ತಪಸ್ಸನ್ನು ಆಚರಿಸಿದನು. ಆತನ ದೀಕ್ಷಾ ತತ್ಪರತೆಯನ್ನು ಕಂಡು ಭಯಪಟ್ಟ ಇಂದ್ರನು ಮುನೀಂದ್ರನ ತಪಸ್ಸನ್ನು ಭಗ್ನಗೊಳಿಸಬೇಕೆಂದು ಸಂಕಲ್ಪಿಸಿ ಪ್ರಮ್ಲೋಚನ ಎಂಬ ಅಪ್ಸರೆಯನ್ನು ಕರೆಯಿಸಿ ಆಕೆಯೊಂದಿಗೆ “ನಿನ್ನ ಅಪರೂಪವಾದ ಲಾವಣ್ಯದಿಂದ ಆ ಸಂಯಮಿಯ ಚಿತ್ತವನ್ನು ವಶ ಮಾಡಿಕೊಂಡು ಕಾಮ ಮೋಹವನ್ನುಂಟುಮಾಡು. ಆತನ ತಪಸ್ಸು ಭಂಗಪಡಿಸಿ, ಆತನ ಬಲ, ವೀರ್ಯ, ರೂಪ, ಪ್ರಜ್ಞಾ, ಮೇಧಾ,ಧನೋತ್ಸಾಹಗಳನ್ನು ನಿರ್ಮೂಲನೆ ಮಾಡು.ಈ ಕಾರ್ಯದಲ್ಲಿ ನಿನಗೆ ಸಹಕರಿಸುವಂತಹ  ಸಖಿಯರನ್ನು ಸಹ ನಿನ್ನೊಂದಿಗೆ ಕರೆದುಕೊಂಡು ಹೋಗು” ಎಂದು ಆದೇಶಿಸಿದರು.

ಸುರೇಶ್ವರನ ಆಜ್ಞೆಯನ್ನು  ಶಿರಸವಹಿಸಿ ಪ್ರಮ್ಲೋಚನ ಗೋಮತೀ ನದೀ ತೀರದಲ್ಲಿ ಏಕಾಂತವಾಗಿ ಕುಳಿತು ತಪಸ್ಸನ್ನು ಮಾಡುತ್ತಿದ್ದಂತಹ ಕಂಡು ಮಹರ್ಷಿಯ  ಆಶ್ರಮಕ್ಕೆ ಹೋದಲು. ಅಂತರ್ಮುಖನಾಗಿ ನಿಶ್ಚಲ ಧ್ಯಾನ ಸಮಾಧಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದಲ್ಲಿ ಮುಳುಗಿದ್ದ ಆತನ ಸಮ್ಮುಖದಲ್ಲಿ ನಿಲ್ಲಲು ಆಕೆಗೆ ಧೈರ್ಯ ಸಾಕಾಗಲಿಲ್ಲ.ಆದರೂ ಉಲ್ಲಂಘಿಸಲಾರದಂತ ದೇವೇಂದ್ರ ಶಾಸನವನ್ನು ನೆನಪಿಸಿಕೊಂಡು ಮರುದಿನ ಮುಂಜಾನೆಯ ಸಮಯದಲ್ಲಿನ ಸೂರ್ಯ ಕಿರಣಗಳ ಬೆಳಕಿನಲ್ಲಿ ತನ್ನ ಸಖಿಯರೊಂದಿಗೆ ಸೇರಿ ಮಹರ್ಷಿಯ ಪರಿಚರ್ಯೆಗೆಂದು ಉಪಕ್ರಮಿಸಿದಳು.ಆ ಉಷೊದಯ ಸಮಯದಲ್ಲಿ ಮಲಯ ಪರ್ವತ ಶಿಖರಗಳಲ್ಲಿನ ಕಲ್ಲುಬಂಡೆಗಳ ಬೆಟ್ಟಗುಡ್ಡಗಳ ನಡುವೆ ನಡೆದು ಆಯಾಸವಾಗಿದ್ದರಿಂದ ಶ್ರೀಗಂಧದ ಬೆಟ್ಟಗಳಲ್ಲಿ ಹರಿಯುತ್ತಿದ್ದ ನೀರಿನ ಪ್ರವಾಹಗಳ ನಿರ್ಮಲ ಜಲಾ ಶಿಖರಗಳಲ್ಲಿ ಆಯಾತವನ್ನು ಕಳೆದುಕೊಂಡು. ನೆಲಕ್ಕೆ ಉರುಳಿ ಬಿದ್ದ ಸಂಪಿಗೆ ಹೂವಿನಂತೆ, ತಣ್ಣಗೆ ಬೀಸುತ್ತಿದ್ದ ತನ್ಮಯವನ್ನುಂಟು ಮಾಡುವಾಗ ಗಾಳಿಯು, ನಿಧಾನವಾಗಿ ಗೋಮತೀ ನದಿಯ ದಡಕ್ಕೆ ಬಂದು ಸೇರುತ್ತಿತ್ತು.ಕಣ್ಣು ಕುಕ್ಕುವಂತಿರುವ ಲಾವಣ್ಯ ಲಹರಿ ಪ್ರಮ್ಲೊಚನಾ ಅಪ್ಸರೆಯ  ಅತಿಲೋಕ ಶೃಂಗಾರ ಸೌಂದರ್ಯಗಳನ್ನು ಪ್ರದರ್ಶಿಸುತ್ತಾ ನಾಟ್ಯವಾಡಿದಳು. ತನ್ನ ಶರೀರ ಸೌಂದರ್ಯ ಅಂಗಸೌಷ್ಠವಕ್ಕೆ ಸರಿಸಮವಾಗದೇ ಹೋದರೂ ತುಂಬಾ ಸೌಂದರ್ಯವನ್ನು ಸೋಸುವ ಮನ್ಮಥಾಸ್ತ್ರಗಳನ್ನೂ,   ಮಲ್ಲಿಗೆ ಹೂವುಗಳನ್ನೂ ತಂದು ಆತನ ಪಾದಗಳ ಮೇಲೆ ಹಾಕಿ ನಮಸ್ಕರಿಸಿದಳು . ರತಿ ಸಮಯದಲ್ಲಿ ಪರಾಕಷ್ಟಕ್ಕೆ ತಲುಪಿದ ಶೃಂಗಾರ ನಾಯಕಿ ಪರವಶವನ್ನು ಪ್ರದರ್ಶಿಸುವ ಕೋಗಿಲೆಯ ಕಂಟದೊಂದಿಗೆ ಅತಿ ಮನೋಹರವಾದ ಸಂಗೀತ ಮಾಧುರ್ಯವನ್ನು ಪ್ರದರ್ಶಿಸಿದಳು.ಮೇಘಗಳ ಮಧ್ಯದಿಂದ ಇಳಿದು ಬಂದ ಮಿಂಚಿನಂತೆ ಆತನ ತೊಡೆಯ ಮೇಲೆ ಕುಳಿತು,ಮನ್ಮಥನ ಆವಾಸ ಮಂದಿರದಂತೆ  ತುಂಬಿ ತುಳುಕುತ್ತಿದ್ದಂತಿರುವ ತನ್ನ ಬಿಂಕದ ಸ್ತನದ್ವಯಗಳ ಸ್ಪರ್ಶವು ತಿಳಿಯುವಂತೆ ಗಾಢವಾಗಿ ಆತನನ್ನು ಆಲಿಂಗನ ಮಾಡಿಕೊಂಡಳು. ತನ್ನ ಕೈಬೆರಳುಗಳನ್ನು ಆತನ ಕರಾಂಗುಳದೊಳಕ್ಕೆ ಸೇರಿಸಿ ಬಿಗಿದಪ್ಪಿಕೊಂಡು ದಾಳಿಂಬೆ ಹೂವುಗಳಂತಹ ಕೆಂಪನೆಯ ತನ್ನ ತುಟಿಗಳಿಂದ ಆತನನ್ನು ಚುಂಬಿಸಿ ಅಮೃತದ ರುಚಿಯನ್ನು ಸವಿದಳು. ಪ್ರಮ್ಲೋಚನಾ ದೇವೇಂದ್ರನ ಆಶಯವನ್ನು ಬಯಕೆಯನ್ನು ಸಫಲಗೊಳಿಸಿದಳು. ಆಕೆಯ ಶೃಂಗಾರ ಚೇಷ್ಟೆಗಳಿಗೆ ಎಂದೂ ಇಲ್ಲದ ಅಪರೂಪವಾದ ಆಶ್ಚರ್ಯಕರವಾದ ಪರವಶವನ್ನು ಹೊಂದಿ, ಮದನಾತುರನಾಗಿ ಮಹರ್ಷಿಯು ಕಣ್ಣು ತೆರೆದು ನೋಡಿದನು. ಆಲೋಕಿಕವಾದಂತಹ ಬ್ರಹ್ಮ ಸಂಧಾನುಭವವನ್ನು  ದೇಹ ಸುಖ ಕ್ಕಾಗಿ ಲೋಕಿಕ ಭೋಗಗಳೆಲ್ಲವನ್ನು ತೃಣಪ್ರಾಯವನ್ನಾಗಿ ಪರಿತ್ಯಜಿಸಿದ ಸಂಯಮೀಂದ್ರನು ಆ ಅಪ್ಸರೆಯ ರೂಪ ಲಾವಣ್ಯಗಳಿಗೂ ದೇಹ ಸೌಂದರ್ಯ ಅಂಗಸೌಷ್ಠವಗಳಿಗೂ ಶರಣಾದನು. ಕೂಡಲೇ ಆಕೆಯನ್ನು ಎಳೆದು ತನ್ನ ಬಾಹುಬಂಧನದಲ್ಲಿ ಬಿಗಿದಪ್ಪಿಕೊಂಡು ಮುದ್ದಾಡಿ ಚುಂಬಿಸಿ ಪ್ರೀತಿಯಿಂದ ಲಾಲನೆ ಮಾಡಿ ಮಾತನಾಡಿಸಿದನು. ಸುರತ ಸುಖಗಳೊಂದಿಗೆ ಮನ್ಮಥ ರಹಸ್ಯಗಳನ್ನು ಬಿಚ್ಚಿ ಹೇಳದೇಯಿದ್ದಲ್ಲಿ ನಾನು ಜೀವಿಸುವುದಿಲ್ಲವೆಂದು ಆಕೆಯನ್ನು ಬೇಡಿಕೊಂಡನು ನಂತರ ಮುನಿಯು ಆಕೆಯೊಂದಿಗೆ ನೀನು ಇಲ್ಲದೆ ಈ ಊರ್ಧ್ವ ಲೋಕಗಳನ್ನು ನನಗೇಕೆ? ನಿನ್ನೊಂದಿಗೇ ನನ್ನ  ಜೀವನ, ನಿನ್ನ ಪ್ರೀತಿಯಲ್ಲಿಯೇ ನನಗೆ ಸ್ವರ್ಗಸುಖ, ಸಂತೋಷಗಳೆಂದು ಹೇಳಿ ಅವಸರ ಪಡಿಸಿದನು.

ಮಹರ್ಷಿಯ  ಮನಸ್ಸಿನಲ್ಲಿನ ಮದನೋದ್ರೇಕವನ್ನು ಗುರುತಿಸಿದ ಪ್ರಮ್ಲೋಚನಾ ಸಂತೋಷಕ್ಕೆ ಮಿತಿಯೇ ಇಲ್ಲದಂತಾಯಿತು. ಆಕೆ ಮುನಿವರೇಣ್ಯನನ್ನು “ಮೋಕ್ಷ ಪಥದಿಂದ ಭೋಗ ಜೀವನದೊಳಕ್ಕೆ ಮರಳಿಸಿದ ನನ್ನ ಸೌಂದರ್ಯ, ರೂಪ, ಲಾವಣ್ಯವು ಚರಿತಾರ್ಥವಾದುದು. ನಿಮ್ಮ ಬಯಕೆಗಳಿಗನುಗುಣವಾಗಿ ನಡೆದುಕೊಂಡು ನಿಮ್ಮ ಸೇವೆಯಲ್ಲಿ ನಿರತಾಳಾಗುತ್ತೇನೆ ”ಎಂದು ಮಾತು ಕೊಟ್ಟಳು. ಆಗ ಕಂಡು ಮಹರ್ಷಿ ತನ್ನ ತಪೋವನವನ್ನು ಉದ್ಯಾನವನವನ್ನಾಗಿ, ಆಶ್ರಮ ಪ್ರಾಂತವನ್ನು ರತೀ ಕೇಳಿ ವಿಶ್ರಮ ಪ್ರಾಂತವನ್ನಾಗಿ ಬದಲಾಯಿಸಿ ತನ್ನ ಪ್ರೇಯಸಿಯೊಂದಿಗೆ ರತಿ ಕ್ರೀಡೆಯಲ್ಲಿ ಮುಳುಗಿ ಯುಗಗಳನ್ನು ಕ್ಷಣವಾಗಿ ಕಳೆದೆನು. ಆಟಪಾಠಗಳೊಂದಿಗೆ, ಸರಸ ಸಲ್ಲಪ್ಪಗಳೊಂದಿಗೆ ಒಬ್ಬರಿಗೊಬ್ಬರು ಶೃಂಗಾರ ಕ್ರೀಡೆಗಳಲ್ಲಿ ಮುಳುಗಿ ತೇಲುತ್ತಿರಲು ನೂರು ವರ್ಷಗಳು ಕಳೆದು ಹೋದವು. ಇಷ್ಟು ದಿನಗಳು ಕಳೆದ ಕಾಲವನ್ನು ನೆನೆಯುತ್ತಾ ಅಪ್ಸರೆಯು ಮಾಹರ್ಷಿಯಿಂದ ಬಿಳ್ಕೊಡುಗೆಯನ್ನು ಬೇಡಿದಳು. “ನಾನು ದೇವೇಂದ್ರನ ಆಸ್ಥಾನದಲ್ಲಿನ ದೇವ ವೇಶ್ಯೆಯಾದ ಅಪ್ಸರೆ,ನಿಮಗೆ ಇಷ್ಟು ಕಾಲ ಇಷ್ಟ ಭೋಗಗಳನ್ನು ಕೊಟ್ಟು ಮನಸಾರೆ ನಿಮ್ಮನ್ನು ಸೇವಿಸಿದೆನು. ಸ್ವರ್ಗ ವಾಸಿಗಳು ನನಗಾಗಿ ಕಾಯುತ್ತಿರುತ್ತಾರೆ ”ಎಂದು ವಿಜ್ಞಾಪಿಸಿಕೊಂಡಳು. ಆದರೆ ಕಂಡು ಮಹರ್ಷಿಯು ಅದಕ್ಕೆ ಅಂಗೀಕರಿಸಲಿಲ್ಲ ನೀನು ಬಂದು ಒಂದೆರಡು ದಿನಗಳೂ  ಸಹ  ಕಳೆದಂತಾಗಲಿಲ್ಲ.ಈ ಸಮಯದಲ್ಲಿ ನನ್ನನ್ನು ಬಿಟ್ಟು ಹೋದರೆ ಕಾಮನ ಬಾಣಗಳ ರಭಸವನ್ನು ಭರಿಸದೇ ನಾನೇನಾಗಾಬೇಕು?ನೀನು ಇಲ್ಲದೆ ನಾನೇಗೆ ಜೀವಿಸಲಿ? ”ಎಂದನು ಆಕೆ ಆತನ ಮನಸ್ಸನ್ನು ಗ್ರಹಿಸಿ ಮತ್ತೆ ಕೆಲವು ದಿನಗಳು ಆತನೊಂದಿಗೆ ಕಳೆದಳು.

ಮತ್ತೆ ಎರಡು ನೂರು ವರ್ಷಗಳು ಕಳೆಯುತ್ತಲೇ ಮಹರ್ಷಿಯನ್ನು ಬಿಳ್ಕೊಡುವಂತೆ ಬೇಡಿಕೊಂಡುಳು. ಆಗಲೂ ಸಹ ಕಂಡು ಮಹರ್ಷಿ ಅಂಗೀಕರಿಸಲಿಲ್ಲ ಈ ರೀತಿಯಾಗಿ ಪರಸ್ಪರ ಅನುರಾಗದಿಂದ ಪ್ರೇಮಿಗಳಿಬ್ಬರೂ ಸುಖ ಸಂತೋಷವಾಗಿ ಪ್ರತಿಕ್ಷಣವೂ ನಿತ್ಯ ವಸಂತವಾಗಿ, ಪ್ರತಿ ಅನುಭವ ನಿತ್ಯ ನೂತನವಾಗಿ ಉಲ್ಲಾಸ,ರತೀ, ಕೇಳೀ, ಸರಸ ಸಲ್ಲಾಪ್ಪಗಳೊಂದಿಗೆ ತುಂಬಾ ಸಂತೋಷವಾಗಿ ಕಾಲ ಕಳೆದರು. ಈ ರೀತಿಯಾಗಿ ಪ್ರಮ್ಲೋಚನಾ ಕಂಡಮಹರ್ಷಿಗಳು ವೈರಾಗ್ಯವಿಲ್ಲದ ಪ್ರೀತಿಯಲ್ಲಿ ಮುಳುಗಿರಲು ಒಂದು  ದಿನ ಅಪರ ಸಂಧ್ಯಾ ಸಮಯದಲ್ಲಿ ಕಂಡ ಮಹರ್ಷಿಯು ವರ್ಣ ಶಾಲೆಯ ಹೊರೆಗೆ ಬಂದು ಸಂಧ್ಯಾವಂದನಾ  ವಿಧಿಗಾಗಿ ನದೀ ತೀರಕ್ಕೆ ಹೋಗಲು ಸಿದ್ದನಾದನು. ಆಗ ದೇವ ಕಾಂತೆಯು ಸಮಯವಲ್ಲದ ಸಮಯದಲ್ಲಿ ಮನೆಯನ್ನು ಬಿಟ್ಟು ಈ ರೀತಿಯಾಗಿ ಎಲ್ಲಿಗೆ ಪ್ರಯಾಣವೆಂದು ಆ ಋಷಿಯನ್ನು ಕೇಳಿದಳು.ಅದಕ್ಕೆ ಮುನಿಂದ್ರನು “ಸಾಯಂ ಸಂಧ್ಯಾ ಸಮಯವು ಅತಿಕ್ರಮಿಸುತ್ತದೆ. ಅನುಷ್ಠಾನಗಳನ್ನು ಮುಗಿಸಿ ದೇವ ಕಾರ್ಯಗಳನ್ನು ನಿರ್ವಹಿಸಬೇಕು. ತಾಪಸಿಗಳಿಗೆ ಆಚಾರ ವಿಧಿಗಳನ್ನು ಮರೆತು ಜೀವಿಸುವುದು ಒಳ್ಳೆಯದಲ್ಲವಲ್ಲವೇ? ” ಎಂದು ಆಕೆಯೊಂದಿಗೆ ಹೇಳಿದನು. ಕೂಡಲೇ ದೇವಕಾಂತೆಯ ಕಣ್ಣುಗಳಲ್ಲಿ ಹಾಸ್ಯವು ಎದ್ದು ಕಾಣುತ್ತಿತ್ತು.ದಾಳಿಂಬೆ ಬೀಜಗಳಂತ ತನ್ನ ಹಲ್ಲುಗಳು ಕಣಿಸುವಂತೆ ಕಿಲಕಿಲನೆ ನಕ್ಕಳು ಆಕೆ “ಓಹೋ! ಮಹಾನುಭಾವನೇ! ಎಂದೂ ಇಲ್ಲದ ಕರ್ತವ್ಯವು ನಿಮಗೆ ಇದಿಂಗೆ ನೆನಪಾಯಿತೇ? ಏನಿದು ವಿಶೇಷ?“ ಎಂದು ಕೇಳಿ ಪರಿಹಾಸ್ಯ ಮಾಡಿದಳು.ಮಹರ್ಷಿಗೆ ಆಕೆಯ ಮಾತುಗಳು ಅರ್ಥವಾಗಲಿಲ್ಲ ಮಹರ್ಷಿಯು “ಪದ್ಮಮುಖೀ!ನಾನು ಈ ಗೋಮತೀ ತೀರದಲ್ಲಿ ವಿಷ್ಣುಮೂರ್ತಿಯನ್ನು ಸಂದರ್ಶಿಸಬೇಕೆಂದು ಸಂಕಲ್ಪಿಸಿ ತಪಸ್ಸನ್ನಾಚರಿಸಲು ಬಂದೇನು.ಇಂದು ಬೆಳಿಗ್ಗೆ ನಾನು ಸಂಧ್ಯಾಕೃತ್ಯಗಳನ್ನು ನೆರವೇರಿಸಿ, ಆಶ್ರಮಕ್ಕೆ ವಾಪಸ್ಸು ಬರುತ್ತೀರಲು ನೀನು ಎದುರು ಬಂದೆ. ನಿನ್ನೊಂದಿಗೆ ಪರಿಚಯವೇರ್ಪಟುರ  ಅನುಬಂಧ ಉಂಟಾಗಿ ನಾವಿಬ್ಬರೂ ಈ ದಿನವೆಲ್ಲಾ ಸಂತೋಷವಾಗಿ ಕಳೆದಿದ್ದೇವೆ. ಇದು ಸಾಯಂಕಾಲದ ಸಂದ್ಯ ವೇಳೆ ನಾನು ಮತ್ತೆ ಜಲ ತರ್ಪಣೆಗಾಗಿ ಹೋಗುತ್ತಿದ್ದೇನೆ. ಇದರಲ್ಲಿ ನೀನು ಅಪಹಾಸ್ಯ ಮಾಡಬೇಕಾದ ಅಸಂಗತ ವಿಷಯ ವೇನಿದೇ? ”ಎಂದು ಆಕೆಯನ್ನು ಆಶ್ಚರ್ಯದಿಂದ ಪ್ರಶ್ನಿಸಿದನು. 

     ಅದಕ್ಕೆ ಪ್ರಮ್ಲೋಚನ ಸಂತೋಷದಿಂದ ಹೀಗೆಂದಳು “ಆರ್ಯಾ!  ನೀವು ತಪೋದಿಕ್ಷೆಯನ್ನು ತೊರೆದು ಇಂದು ಅಪರ ಸಂಧ್ಯಾ ವೇಳೆಯಲ್ಲಿ ದೇವ ಪೂಜೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಒಂಭತ್ತು ನೂರು ಏಳು ವರ್ಷಗಳು, ಆರು ತಿಂಗಳು ಮೂರು ದಿನಗಳು ಕಳೆದುಹೋಗಿವೆ. ಕಾಮ ವ್ಯಾಮೋಹದಲ್ಲಿ ಮುಳಗಿ ನಿಮಗೆ ದಿನಗಳು ಕಳೆದಿರುವುದೇ ಗೊತ್ತಿಲ್ಲ” ಎಂದು ಉತ್ತರಿಸಿದಳು. ಆಕೆಯ ಮಾತುಗಳನ್ನು ಕೇಳಿ ಕಂಡು ಮಹರ್ಷಿ ಆಶ್ಚರ್ಯ ಚಿಕಿತನಾದನು. “ಅಧಮ ಭೋಗವಾದ ಮದನ ಜಾಲದಲ್ಲಿ ಸಿಲುಕಿಕೊಂಡು ಎಷ್ಟು ಮೌಲ್ಪಯುತವಾದ ಕಾಲವು ಬೂದಿಯಲ್ಲಿ ಸುರಿದ ಪನ್ನೀರಿನಂ ತಾಯಿತು. ನೀನು ಹೇಳುತ್ತಿರುವುದು ಸತ್ಯವೇನಾ? ”ಎಂದು ಮತ್ತೆ ಮತ್ತೆ ಕೇಳಿದನು. ಅದಕ್ಕೆ ಅಪ್ಸರೆಯು “ನೀವು ಬ್ರಹ್ಮಜ್ಞಾನಿಗಳು,ಭೂತ ಭವಿಷ್ಯ ವರ್ತಮಾನಗಳಲ್ಲಿ ನಿಮಗೆ ತಿಳಿಯದ ಸತ್ಯಗಳಿಲ್ಲ ಯೋಗ ದೃಷ್ಟಿಯಿಂದ ಕಳೆದದ್ದನ್ನು ಸ್ಮರಿಸಿ ನೋಡಿ ”ಎಂದು ಅಪ್ಸರೆಯು ಹೇಳಿದಳು. ಇದು ತಪ್ಪದೆ ಈರ್ಷೆೄಯುಳ್ಳ ಆ ದೇವೇಂದ್ರನು ಹೂಡಿದ ಕುತಂತ್ರವೇ ನಿನ್ನನ್ನು ಏನು ಮಾಡಿದರೂ ಪಾಪವಿಲ್ಲ. ದುರಿತ ಕೃತ್ಯವೇ ಆದರೂ ನೀನು ನನಗೆ ದೇಹ ಸುಖವನ್ನು ಹಚ್ಚಿದ್ದೀಯಾ.ಅದ್ದರಿಂದ ನಿನ್ನನ್ನು ದಯೆಯಿಂದ ಬಿಟ್ಟುಬಿಡುತ್ತಿದ್ದೇನು. ನನ್ನ ಮುಖವನ್ನು ನನಗೆ ತೋರಿಸಬೇಡ ”ಎಂದು ಕ್ರೋಧಾವೇಶದೊಂದಿಗೆ ಹೇಳಿದನು. ಕೆಂಡದಂತಿರುವ ಕಣ್ಣುಗಳೊಂದಿಗೆ ಪ್ರಳಯ ರುದ್ರನಂತೆ ಜ್ವಾಲೆಯನ್ನು ಚಿಮ್ಮುತ್ತಿದ್ದ ಮುನಿಯ ಕೋಪವನ್ನು ಕಂಡು ದೇವ ಕಾಂತೆಯು ಬಿರುಗಾಳಿಯಲ್ಲಿನ ದೀಪದಂತೆ ನಡುಗಿದಳು. ಇನ್ನೂ ಇಲ್ಲೇ ನಿಂತರೆ ಆ ಮುನಿಯು ಶಪಿಸಬಲ್ಲನೆಂಬ ಭಯದಿಂದ ವ್ಯಾಕುಲತೆಯನ್ನು ಹೊಂದಿ ಆಕೆಯು ಆಕಾಶಮಾರ್ಗ ಹಾರಲು ಪ್ರಯತ್ನಿಸುತ್ತಿರಲು ಬೆಚ್ಚನೆಯ ಆಕೆಯ ಶರೀರದಿಂದ ಮುನಿವೀರ್ಯವು ಬೆವರಿನ ರೂಪದಲ್ಲಿ ಹೊರಗೆ ಬಂದಿತು. ಆಗ ಆಕೆ ಅಲ್ಲೇ ಪಕ್ಕದಲ್ಲಿದ್ದ ಎಳೇ ಗಿಡಗಳ ಈ ಚಿಗುರೆಲೆಗಳಿಂದ ವೀರ್ಯ ಬಿಂದುಗಳನ್ನು ಒರೆಸಿಕೊಳ್ಳುತ್ತಾ ಅಲ್ಲಿಂದ ದೇವ ವಾಸಕ್ಕೆ ಹೊರಟು ಹೋದಳು.ಕಂಡುಮಹರ್ಷಿಯೂ ಸಹ ಪ್ರದೇಶವನ್ನು ಬಿಟ್ಟು ಪುರುಷೋತ್ತಮ ತೀರ್ಥಕ್ಕೆ ಹೋಗಿ ಪರಸ್ತ್ರೀಯನ್ನು ಸಂಗಮಿಸಿದ ಪಾಪ ಕೃತ್ಯ ಪ್ರಾಯಶ್ಚಿತ್ತವಾಗಿ ಬ್ರಹ್ಮಪಾಠ ಸೋತ್ರಗಳನ್ನು ನಿಯಮ ನಿಷ್ಠೆಗಳೊಂದಿಗೆ ಅನುಷ್ಠಾನ ಮಾಡಿ,ಇಂದ್ರಿಯ ಸುಖವನ್ನು ತ್ಯಜಿಸಿ ಬಾಹುಗಳನ್ನು ಊರ್ಧ್ವ ಮುಖವಾಗಿ ಮೇಲಕ್ಕೆತ್ತಿ ನಿಂತು ಸಂಸಾರ ದುಃಖ ನಿವಾರಕನಾದ ಪರಧಾಮನಾದ ಶ್ರೀ ಮಹಾವಿಷ್ಣುವನ್ನು ಕುರಿತು ಏಕಾಗ್ರತಾ ಚಿತ್ತದೊಂದಿಗೆ ಆರಾಧಿಸುತ್ತಾ ಮತ್ತೆ ತಪಸ್ಸನ್ನು ಆಚರಿಸಲು ಆರಂಭಿಸಿದನು.

       ಎಲೆ ಪ್ರಚೇತಸರೇ! ಪ್ರಮ್ಲೋಚನ ದೇವವಾಸಕ್ಕೆ ಹೊರಟು ಹೋಗುತ್ತಾ ದೇಹವನ್ನು ಚಿಗುರೆಲೆಗಳಿಂದ ಒರೆಸಿಕೊಂಡಿದ್ದರಿಂದ ಕಂಡು ಮಹರ್ಷಿಯ ವೀರ್ಯವು ಎಲೆಗಳಲ್ಲಿ ನಿಂತುಹೋಯಿತು. ಸೂರ್ಯನು ಆಸ್ತಮಿಸಿ ರಾತ್ರಿಯ ವೇಳೆಯಲ್ಲಿ ನಾನು ಉದಯಿಸಿದಾಗ ವಾಯುವಿನ ತಣ್ಣನೆಯ ಗಾಳಿಯಿಂದ ನನ್ನ ಕಿರಣಗಳು ಅದಕ್ಕೆ ತಾಕಿದವು. ಆ ಅಮೃತಸ್ವರ್ಶದಿಂದ ಒಬ್ಬ ಸುಕುಮಾರಿ ಹೆಣ್ಣು ಜನಿಸಿದಳು. ಆದ್ದರಿಂದಲೇ ಈಕೆಯು ಪ್ರಮ್ಲೋಚನಾ, ಕಂಡು  ಮಹರ್ಷಿಗೂ, ವಾಯುವಿಗೂ, ನನಗೂ ಏಕರೀತಿಯಾಗಿ ಮಗಳಾಗುತ್ತಾಳೆ.ಇಂತಹ ವಿಚಿತ್ರವಾದ ಹುಟ್ಟು ತ್ರಿಲೋಕಗಳಲ್ಲಿಯೂ ಅನನ್ಯ.

ಹಿಂದಿನ ಲೇಖನಪಿಎಂ ಕಿಸಾನ್ ಯೋಜನೆ: 17ನೇ ಕಂತಿನ ಹಣ ಬಿಡುಗಡೆ
ಮುಂದಿನ ಲೇಖನಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ: ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ- ಡಿ ಕೆ ಸುರೇಶ್