ಮನೆ ಮನರಂಜನೆ ಹೊಸ ಚಿತ್ರ ಘೋಷಿಸಿದ ತರುಣ್‌ ಸುಧೀರ್‌

ಹೊಸ ಚಿತ್ರ ಘೋಷಿಸಿದ ತರುಣ್‌ ಸುಧೀರ್‌

0

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರೆನಿಸಿಕೊಂಡ ತರುಣ್‌ ಸುಧೀರ್‌ ತಮ್ಮ ನಿರ್ಮಾಣದಲ್ಲಿ ಬರುತ್ತಿರುವ ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದ್ದಾರೆ.

Join Our Whatsapp Group

ಶರಣ್‌ ನಟನೆಯ “ಗುರು ಶಿಷ್ಯರು’ ಚಿತ್ರ ನಿರ್ಮಿಸಿ ಯಶ ಕಂಡಿದ್ದ ತರುಣ್‌ ಅವರು, ಈಗ ಎರಡನೇ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ.

 “ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಪೋಸ್ಟರ್‌ ಸಿನಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆ್ಯಕ್ಸಿಡೆಂಟ್‌ ಆಗಿ ಕೆಳಗೆ ಬಿದ್ದ ಕಾರ್‌, ಅದರಿಂದ ಹೊರಬಂದ ವ್ಯಕ್ತಿಯ ಕೈಗಳು… ಒಂದು ಕೈಯಲ್ಲಿ ಹ್ಯಾಂಡ್‌ ಕಫ್, ಇನ್ನೊಂದು ಕೈಯಲ್ಲಿ ಫೋನ್‌ ಇದು ಪೋಸ್ಟರ್‌ನಲ್ಲಿ ಕಾಣುವ ದೃಶ್ಯ. ಚಿತ್ರತಂಡ ಹೇಳಿಕೊಂಡಂತೆ ಇದು ಪ್ರೇಮಕಥೆಯಾದರೂ, ಇದರಲ್ಲಿ ಸಾಕಷ್ಟು ರೋಚಕ ಅಂಶಗಳಿವೆ ಎಂಬುದನ್ನು ಪೋಸ್ಟರ್‌ ಮೂಲಕ ಅರಿವಿಗೆ ಬರುತ್ತದೆ.

ಈ ಚಿತ್ರವನ್ನು ತರುಣ್‌ ಸುಧೀರ್‌ ಜೊತೆಗೆ ಅಟ್ಲಾಂಟ ನಾಗೇಂದ್ರ ನಿರ್ಮಿಸುತ್ತಿದ್ದಾರೆ. ಪುನೀತ್‌ ರಂಗಸ್ವಾಮಿ ಅವರ ರಚನೆ ಹಾಗೂ ನಿರ್ದೇಶನದ ಚಿತ್ರವಿದು. ಸುಧಾಕರ್‌ ಎಸ್‌. ರಾಜ್‌ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಅವರ ಸಂಕಲನ, ಜಿ.ರಾಜಶೇಖರ್‌ ಅವರ ಕಲೆ ಈ ಚಿತ್ರಕ್ಕಿದೆ.

ಚಿತ್ರದ ತಾರಾಗಣ ಇನ್ನೂ ಆಯ್ಕೆಯಾಗಬೇಕಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ.