ಮನೆ ಆಟೋ ಮೊಬೈಲ್ ಎಲೆಕ್ಟ್ರಿಕ್ ವಾಹನಗಳ ಸೇಲ್’ನ್ನು 2027ಕ್ಕೆ ಶೇ.25 ಹಾಗೂ 2030ರ ವೇಳೆಗೆ ಶೇ.50 ಹೆಚ್ಚಿಸಲು ನಿರ್ಧರಿಸಿದ ಟಾಟಾ...

ಎಲೆಕ್ಟ್ರಿಕ್ ವಾಹನಗಳ ಸೇಲ್’ನ್ನು 2027ಕ್ಕೆ ಶೇ.25 ಹಾಗೂ 2030ರ ವೇಳೆಗೆ ಶೇ.50 ಹೆಚ್ಚಿಸಲು ನಿರ್ಧರಿಸಿದ ಟಾಟಾ ಮೋಟಾರ್ಸ್

0

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿ) ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

Join Our Whatsapp Group

ಕೇಂದ್ರ ಸರ್ಕಾರ, ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ 2030ರ ವೇಳೆಗೆ ದೇಶದ ರಸ್ತೆಗಳಲ್ಲಿ ಬಹುತೇಕ ಎಲೆಕ್ಟ್ರಿಕ್ ವಾಹನಗಳು ಇರಲು ಬಯಸಿದೆ. ಅದಕ್ಕೆ ತಕ್ಕಂತೆ ಪ್ರೋತ್ಸಾಹವನ್ನು ನೀಡುತ್ತಿದೆ. ಸದ್ಯ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ನೆಕ್ಸಾನ್ ಇವಿ (ಮ್ಯಾಕ್ಸ್, ಪ್ರೈಮ್), ಟಿಗೊರ್ ಇವಿ ಹಾಗೂ ಟಿಯಾಗೊ ಇವಿಯನ್ನು ಸೇಲ್ ಮಾಡುತ್ತಿದೆ.

ಟಾಟಾ ಕಂಪನಿ, ಮೇ ತಿಂಗಳಲ್ಲಿ (2023) 5,805 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ 66% ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3,505 ಯುನಿಟ್ ಸೇಲ್ ಮಾಡಿತ್ತು. ಟಾಟಾದ ವಾರ್ಷಿಕ ವರದಿ ಪ್ರಕಾರ, ತನ್ನ ಒಟ್ಟು ಮಾರಾಟದಲ್ಲಿ ಈಗಿರುವ 12% ಎಲೆಕ್ಟ್ರಿಕ್ ವಾಹನಗಳ ಸೇಲ್ ಅನ್ನು 2027ಕ್ಕೆ 25% ಹಾಗೂ 2030ರ ವೇಳೆಗೆ 50% ಹೆಚ್ಚಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

024ರ ಹಣಕಾಸು ವರ್ಷದಲ್ಲಿ ಟಾಟಾ ಮೋಟಾರ್ಸ್ ಪ್ರಮುಖವಾಗಿ, ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕೆಗೆ ಸಂಬಂಧಿಸಿದಂತೆ ಬಂಡವಾಳ ಹೂಡಲು ಸಿದ್ಧತೆ ನಡೆಸಿದೆ. ಇವಿ ಮಾರಾಟ, ನೆಟ್‌ವರ್ಕ್ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಮುಂದಿನ 4 ರಿಂದ 5 ವರ್ಷಗಳಲ್ಲಿ ಕನಿಷ್ಠವೆಂದರೂ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆದಿದೆ.

ಮುಖ್ಯವಾಗಿ, ಟಾಟಾ ಪಂಚ್ ಇವಿ, ಆಲ್ಟ್ರೋಜ್ ಇವಿ, ಕರ್ವ್ವ್ ಇವಿ, ಅವಿನ್ಯಾ ಇವಿ, ಸಿಯೆರಾ ಇವಿ, ಸಫಾರಿ ಹಾಗೂ ಹ್ಯಾರಿಯರ್ ಇವಿಗಳು ಲಾಂಚ್ ಆಗಲಿವೆ. ಇದೇ ವರ್ಷದ (2023) ದ್ವಿತೀಯಾರ್ಧದಲ್ಲಿ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ ಪೋದಲ್ಲಿ ಟಾಟಾ, ಹ್ಯಾರಿಯರ್ ಇವಿಯನ್ನು ಪ್ರದರ್ಶಿಸಿತ್ತು. ಇದನ್ನು ಕೆಲವೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ನೀರಿಕ್ಷೆಯಿದೆ.

ಟಿಯಾಗೊ ಇವಿ ಅಗ್ಗದ ಎಲೆಕ್ಟ್ರಿಕ್ ಕಾರೆಂದು ಖ್ಯಾತಿಗಳಿಸಿದೆ. ರೂ.8.69 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು, 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಫುಲ್ ಚಾರ್ಜಿನಲ್ಲಿ 250 km ರಿಂದ 315 km ರೇಂಜ್ ಕೊಡುತ್ತದೆ. ಟಿಯಾಗೊ ಇವಿಗೆ ಸಿಟ್ರಸ್ ಇಸಿ3 ಹಾಗೂ ಎಂಜಿ ಕಾಮೆಟ್ ಇವಿಗಳು ಪ್ರತಿಸ್ಪರ್ಧಿಯಾಗಿವೆ. ಟಿಗೂರ್ ಇವಿ ರೂ.12.49 ಲಕ್ಷದಿಂದ ರೂ.13.75 ಲಕ್ಷ ಬೆಲೆಯಲ್ಲಿ ವಾಣಿಜ್ಯ ಬಳಕೆಗೆ ಮಾತ್ರ ಗ್ರಾಹಕರಿಗೆ ಸಿಗುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡುತ್ತದೆ. ಟಾಟಾ ಕಂಪನಿ ನೆಕ್ಸಾನ್ ಇವಿಯನ್ನು ಮ್ಯಾಕ್ಸ್ ಪ್ರೈಮ್ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ.

ಇವು 14.49 ಲಕ್ಷದಿಂದ ರೂ.17.19 ಲಕ್ಷ ಬೆಲೆಯನ್ನು ಹೊಂದಿವೆ. ನೆಕ್ಸಾನ್ ಇವಿ ರೂಪಾಂತರಗಳಿಗೆ ಅನುಗುಣವಾಗಿ 312 km ರಿಂದ 453 km ರೇಂಜ್ ನೀಡುತ್ತದೆ. ಇನ್ನು, ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನದೇ ದಾರಿಯನ್ನು ಸೃಷ್ಟಿಸಿಕೊಳ್ಳಲು ಬೃಹತ್ ಯೋಜನೆಯನ್ನು ರೂಪಿಸಿದೆ. ಇದು, ಶೂನ್ಯ ಹೊರಸೂಸುವಿಕೆ ವಾಹನಗಳ ಮೂಲಕ ದೇಶದಲ್ಲಿ ಶುದ್ಧ ಪರಿಸರ ನಿರ್ಮಾಣಕ್ಕೂ ಸಹಕಾರಿಯಾಗಲಿದೆ.