ಮೈಸೂರು: ಶ್ರೀ ಕೈವಾರ ತಾತಯ್ಯ ಬಣಜಿಗ (ಬಲಿಜ) ಸಂಘದ ವತಿಯಿಂದ ಡಿ. ದೇವರಾಜ ಅರಸು ರಸ್ತೆಯಲ್ಲಿ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯ ರವರ ೨೯೯ನೇ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಲಾಡು ಹಾಗೂ ಮಜ್ಜಿಗೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ಸಾಹಿತಿ ಹಾಗೂ ಅಂಕಣಕಾರ ಗುಬ್ಬಿಗೂಡು ರಮೇಶ್, ಮಹನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೆ ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಅರ್ಥಪೂರ್ಣಗೊಳಿಸಬೇಕು. ಜೀವನ ಸಾರ್ಥಕತೆಗಾಗಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಯನಗರ ಬಲಿಜಿ ಸಂಘದ ಗೌರವಾಧ್ಯಕ್ಷರಾದ ಮೀನಾ ತೂಗುದೀಪ್, ಸಾಹಿತಿಗಳಾದ ಗುಬ್ಬಿಗೂಡು ರಮೇಶ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ನಗರ ಪಾಲಿಕಾ ಮಾಜಿ ಸದಸ್ಯ ಪ್ರಶಾಂತ್ ಗೌಡ, ಆನಂದ್ ಶೆಟ್ಟಿ, ಜಿ. ಶ್ರೀನಾಥ್ ಬಾಬು, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕ ಪ್ರೇಮ್ ಕುಮಾರ್, ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಸಮಾಜದ ಮುಖಂಡರಾದ ಗುರುರಾಜ್ ಶೆಟ್ಟಿ, ಎಸ್.ಎನ್. ರಾಜೇಶ್, ಶೇಖರ್, ಉಮೇಶ್, ರಮೇಶ್, ಶೇಖರ್, ನಿತಿನ್, ಗುರುಪ್ರಸಾದ್, ಕಿರಣ್, ಉಮೇಶ್, ರಘು, ಸಂತೋಷ್ ನಾಯ್ಡು, ಹರೀಶ್ ನಾಯ್ಡು, ಹಾಗೂ ಸಮಾಜದ ಮುಖಂಡರುಗಳು ಭಾಗಿಯಾಗಿದ್ದರು.














