ಮನೆ ಮನರಂಜನೆ ಮೇಘನಾ ರಾಜ್ ಬರ್ತ್​’ಡೇಗೆ ‘ತತ್ಸಮ ತದ್ಭವ’ ಪೋಸ್ಟರ್

ಮೇಘನಾ ರಾಜ್ ಬರ್ತ್​’ಡೇಗೆ ‘ತತ್ಸಮ ತದ್ಭವ’ ಪೋಸ್ಟರ್

0

ನಟಿ ಮೇಘನಾ ರಾಜ್ ಅವರು ಇಂದು (ಮೇ 3) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಹಲವು ಕಡೆಗಳಿಂದ ಜನ್ಮದಿನದ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿಗಳು, ಕುಟುಂಬದವರು ಹಾಗೂ ಗೆಳೆಯರು ಮೇಘನಾ ರಾಜ್’​ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

Join Our Whatsapp Group

ಬರ್ತ್​ ಡೇ ಪ್ರಯುಕ್ತ ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಗಿದೆ. ಈ ಪೋಸ್ಟರ್​ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದಾರೆ. ಈ ಪೋಸ್ಟರ್ ಸಾಕಷ್ಟು ಕುತೂಹಲದ ಗೂಡಾಗಿದೆ.

ಮೇಘನಾ ರಾಜ್ ಅವರ ಪತಿ ಚಿರಂಜೀವಿ ಸರ್ಜಾ 2020ರಲ್ಲಿ ಮೃತಪಟ್ಟರು. ಇದು ಅವರಿಗೆ ಶಾಕ್​ ತಂದಿತ್ತು. ಈ ಸಾವನ್ನು ಯಾರೂ ಊಹಿಸಿರಲಿಲ್ಲ. ಇದಾದ ಬಳಿಕ ಮೇಘನಾ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದರು. ಮಗು ರಾಯನ್ ರಾಜ್ ಸರ್ಜಾ ಜನಿಸಿದ ನಂತರದಲ್ಲಿ ಮೇಘನಾ ಅವರ ಬದುಕಲ್ಲಿ ಖುಷಿ ಮೂಡಿದೆ. ಹೀಗಾಗಿ, ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

 ‘ತತ್ಸಮ ತದ್ಭವ’ ಚಿತ್ರದಲ್ಲಿ ಮೇಘನಾ ರಾಜ್​ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಫ್ಯಾನ್ಸ್​’ಗೆ ಇಷ್ಟ ಆಗಿದೆ. ಈ ಪೋಸ್ಟರ್​’ನಲ್ಲಿ ಮೇಘನಾ ಅವರು ತೋಟದ ಮಧ್ಯೆ ಏನನ್ನೋ ಹುಡುಕುವಂತಿದೆ. ಅವರ ಕೈಯಲ್ಲಿ ಟಾರ್ಚ್​ ಇದೆ. ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿಬರುತ್ತಿದೆ. ಎರಡೂ ಭಾಷೆಯಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.

 ‘ತತ್ಸಮ ತದ್ಭವ’ ಚಿತ್ರದಲ್ಲಿ ಮೇಘನಾ ವಿಶೇಷ ಪಾತ್ರ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಈ ಬಗ್ಗೆ ಚಿತ್ರತಂಡ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿತ್ತು.  ಕೆಲವು ವರ್ಷಗಳಿಂದ ನಟಿ ಮೇಘನರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ.

‘ತತ್ಸಮ ತದ್ಭವ’ ಚಿತ್ರವನ್ನು ಮೇಘನಾ ಗೆಳೆಯ ಪನ್ನಗ ಭರಣ ನಿರ್ಮಾಣ ಮಾಡಿದ್ದಾರೆ. ಸ್ಫೂರ್ತಿ ಅನಿಲ್ ಪನ್ನಗ ಭರಣಗೆ ಸಾಥ್ ನೀಡಿದ್ದಾರೆ. ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ. ಪ್ರಜ್ವಲ್ ದೇವರಾಜ್ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಹಿಂದಿನ ಲೇಖನಚಿತ್ರದುರ್ಗ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.39 ಕೋಟಿ ರು. ಮೌಲ್ಯದ ಚಿನ್ನಾಭರಣ ವಶ
ಮುಂದಿನ ಲೇಖನಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ, ತುಳಸಿ ಗೌಡರನ್ನು ಭೇಟಿಯಾದ ನರೇಂದ್ರ ಮೋದಿ