ಮೈಸೂರು: 2024-25ನೇ ಸಾಲಿನ ಡಿ.ಇ.ಎಲ್.ಇ.ಡಿ. (ಟಿ.ಸಿ.ಹೆಚ್-ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ) ದಾಖಲಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ದ್ವಿತೀಯ ಪಿ.ಯು.ಸಿ. ಪರೀಕ್ಷಾ ಫಲಿತಾಂಶದಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ. 50 ರಷ್ಟು, ಪ.ಜಾತಿ ಅಥವಾ ಪ.ಪಂಗಡ ವಿದ್ಯಾರ್ಥಿಗಳು ಶೇ. 45 ರಷ್ಟು ಅಂಕಗಳನ್ನು ಪಡೆದಿರಬೇಕು. ಪ.ಜಾತಿ ಅಥವಾ ಪ.ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ರೂ. 3065 ಇರುತ್ತದೆ. (ವಿದ್ಯಾರ್ಥಿವೇತನ ಶುಲ್ಕ ಮರುಪಾವತಿಗೆ ಅವಕಾಶವಿರುತ್ತದೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರೂ. 25000 ಗಳ ವಿದ್ಯಾರ್ಥಿವೇತನ ಇರುತ್ತದೆ.)
ಆಸಕ್ತ ಅಭ್ಯರ್ಥಿಗಳು ಪಿ.ಎಸ್.ಟಿ.ಇ. ನೋಡಲ್ ಅಧಿಕಾರಿಗಳಾದ ಅಮಿತ್. ಡಿ.ಆರ್. ಮೊ.ನಂ: 8971265899 ಮತ್ತು ಸುಷ್ಮ. ಜೆ ಮೊ.ನಂ: 9535565579 ನ್ನು ಸಂಪರ್ಕಿಸಬಹುದು ಎಂದು ಡಯಟ್ ನ ಪ್ರಾಂಶುಪಾಲರು ಹಾಗು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.