ಮನೆ ಸ್ಥಳೀಯ ಶಿಕ್ಷಕರು ದೇಶದ ಆಸ್ತಿ: ಗುರುಪಾದ ಸ್ವಾಮಿ

ಶಿಕ್ಷಕರು ದೇಶದ ಆಸ್ತಿ: ಗುರುಪಾದ ಸ್ವಾಮಿ

0

ಮೈಸೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶ ಮುನ್ನಡೆಯಲು ಶಿಕ್ಷಕರ ಪಾತ್ರ ಬಹುಮುಖ್ಯವಾದದು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಗುರುಪಾದ ಸ್ವಾಮಿ  ಹೇಳಿದರು.

ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಶಿಕ್ಷಕರಿಗೆ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಶಿಕ್ಷಕರ ವೃತ್ತಿ ಮಹತ್ವವಾದದ್ದು, ಜಗತ್ತಿನಲ್ಲಿ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದು, ಆದರೆ ಶಿಕ್ಷಣ ಮತ್ತು ಶಿಕ್ಷಕರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಿಕ್ಷಕರು ದೇಶದ ಆಸ್ತಿ ಇದ್ದಂತೆ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಹಾಗಾಗಿ ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠ ವೃತ್ತಿಯಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಥ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ.ಆರ್.ಹೆಚ್ ಪವಿತ್ರ, ಇಂದು ನಮಗೆ ವಿದ್ಯೆ ಹೇಳಿಕೊಟ್ಟ ಗುರುಗಳು ಶ್ರೇಷ್ಠ ಹಾಗೇಯೆ ನಮಗೆ ಜೀವನದಲ್ಲಿ ಮಾರ್ಗದರ್ಶನ ಮಾಡುವ ಗುರು ಗಳು ಕೂಡ ಶ್ರೇಷ್ಠ, ಕ್ರಿಡಾ,ಸಾಮಾಜಿಕ, ಶೈಕ್ಷಣಿಕ, ಮುಂತಾದ ವಿಧಗಳಲ್ಲಿ ಪ್ರತಿ ಯೊಬ್ಬರು ಕೂಡ ಗುರುಗಳನ್ನು ಅವಲಂಬಿತರಾಗಿರುವುದು ಸಹಜ ಹಿರಿಯರು ಹೇಳಿದಂಗೆ ಗುರು ದೇವೊಭವ ಎಂದರೆ ಅದರ ಶಕ್ತಿ ಯೆ ನಮಗೆ ಸ್ಪೂರ್ತಿ ಯಾಗಿರುತ್ತದೆ. ಆದ್ದರಿಂದ  ಇಂದಿನ ಪೀಳಿಗೆಯ ಮಕ್ಕಳು ಗುರುಸ್ಥಾನದಲ್ಲಿರುವ ಹಿರಿಯರಿ ಗೆ ಹೆಚ್ಚಿನ ಗೌರವಿಕೊಡುವ ಮುಖೇನಾ ಮತ್ತು ನಾನಾ ಸಂಘ ಸಂಸ್ಥೆಗಳು ಹಿರಿಯರುಗಳನ್ನು ಗೌರವಿಸುವ ಮುಖೇನಾ ಬೇರೆಯವರಿಗೆ ಮಾದರಿ ಯಾಗಲಿ ಎಂದರು..

ಗುರು ಸೇವಾ ರತ್ನ ಪ್ರಶಸ್ತಿ

ಗುರು ಸೇವಾ ರತ್ನ ಪ್ರಶಸ್ತಿಯನ್ನು ಆರ್ ಎಚ್ ಪವಿತ್ರ (ಶಿಕ್ಷಣ ಕ್ಷೇತ್ರ), ದೀಪಾ ಎನ್ (ಶಿಕ್ಷಣ ಕ್ಷೇತ್ರ), ಅಕ್ಷಯ್ ಮಹಂತ್ (ಕ್ರೀಡಾ ಕ್ಷೇತ್ರ), ವಿದ್ವಾನ್ ಎಸ್ ಕೃಷ್ಣಮೂರ್ತಿ (ಧಾರ್ಮಿಕ ಕ್ಷೇತ್ರ), ಯೋಗಾಚಾರ್ಯ ಬಿ, ಶಾಂತರಾಮ್(ಯೋಗ ಕ್ಷೇತ್ರ), ವಿದುಷಿ ಎಸ್ ಎನ್ ಮೇಘನಾ ರಾವ್ (ಕಲಾ ಕ್ಷೇತ್ರ), ಅಶ್ವಿನಿ ಪಿ ಗೌಡ (ಬ್ಯೂಟಿಷಿಯನ್ ಕ್ಷೇತ್ರ) ರವರಿಗೆ ಪ್ರಶಸ್ತಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಮಾಜಿನಗರ ಪಾಲಿಕಾ ಸದಸ್ಯರಾದ ಗೌರಿ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ, ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ರಾಜೇಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸವಿತಾ ಘಾಟ್ಕೆ, ರಶ್ಮಿ, ಸದಾಶಿವ್, ಪಲ್ಲವಿ, ಸುರೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.