ಮೈಸೂರು/ಶಿವಮೊಗ್ಗ: ಭಾರತ ಕ್ರಿಕೆಟ್ ತಂಡ ಪ್ರತಿಷ್ಟಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ದುಬೈನಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕ್ರಿಕೆಟಿಗರ ಗುಣಗಾನ ಮಾಡಿ, ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ.
ಮೈಸೂರಿನಲ್ಲಿ ಸಂಭ್ರಮ: ಭಾರತ್ ಸಂಘಟನೆ ವತಿಯಿಂದ ಅಗ್ರಹಾರದ ವೃತ್ತದಲ್ಲಿ ಭಾರತದ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಕೂಗುತ್ತಾ ಅಭಿಮಾನಿಗಳು ಖುಷಿಪಟ್ಟರು.
ಅಂತಾರಾಷ್ಟ್ರೀಯ ವಿಶೇಷಚೇತನ ಕ್ರೀಡಾಪಟು ಅಲೋಕ್ ಜೈನ್, ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ.ನಿಶಾಂತ್, ಮಹಾನ್ ಶ್ರೇಯಸ್, ಸುಚೇಂದ್ರ, ಮಹಾನ್ ಶ್ರೇಯಸ್, ಅಮಿತ್ ಕುಮಾರ್, ಚಕ್ರಪಾಣಿ, ಕರಣ್ ಜೈನ್ ಕೆ.ಜೆ., ಸುಧೀಂದ್ರ, ನವೀನ್, ವಿಶ್ವನಾಥ್ ಹಾಗೂ ಇನ್ನಿತರ ಕ್ರಿಕೆಟ್ ಪ್ರೇಮಿಗಳು ಇದ್ದರು.
ಶಿವಮೊಗ್ಗದಲ್ಲಿ ಸಂಭ್ರಮ: ಶಿವಮೊಗ್ಗದಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಟಿ.ಎಸ್.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಸಿಹಿ ಹಂಚಿ ನೃತ್ಯ ಮಾಡಿದರು. ಕೋಟೆ ರಸ್ತೆ ಸೇರಿದಂತೆ ವಿವಿಧೆಡೆ ಅಭಿಮಾನಿಗಳು ತಮ್ಮ ತಮ್ಮ ಮನೆಗಳ ಮುಂದೆ ಪಟಾಕಿ ಸಿಡಿಸಿ ಖುಷಿ ವ್ಯಕ್ತಪಡಿಸಿದರು.