ಮನೆ ಮನರಂಜನೆ ‘ಟೈಗರ್​ 3’ ಸಿನಿಮಾದ ಟೀಸರ್​ ರಿಲೀಸ್

‘ಟೈಗರ್​ 3’ ಸಿನಿಮಾದ ಟೀಸರ್​ ರಿಲೀಸ್

0

ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಸಿನಿಮಾವನ್ನು ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಂಸ್ಥೆಯ ಸಂಸ್ಥಾಪಕ ಯಶ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಸೆಪ್ಟೆಂಬರ್​ 27) ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ.

Join Our Whatsapp Group

ಟೀಸರ್​ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಟೈಗರ್​ 3’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಇಮ್ರಾನ್​ ಹಷ್ಮಿ ಅವರು ಖಳನಾಯಕನ ಪಾತ್ರ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡಗಡೆ ಆಗಲಿದೆ. ಈಗ ಟೀಸರ್​ ಸದ್ದು ಮಾಡುತ್ತಿದೆ. ಇದರಲ್ಲಿ ಟೈಗರ್​ ಒಂದು ಮೆಸೇಜ್​ ನೀಡಿದ್ದಾನೆ.

‘ಏಕ್​ ಥಾ ಟೈಗರ್​’ ಮತ್ತು ‘ಟೈಗರ್​ ಜಿಂದಾ ಹೈ’ ಸಿನಿಮಾದ ಮುಂದುವರಿದ ಭಾಗವಾಗಿ ‘ಟೈಗರ್​ 3’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದ ಕಥೆ ಏನು ಎಂಬುದನ್ನು ಈ ಟೀಸರ್​ನಲ್ಲಿ ವಿವರಿಸಲಾಗಿದೆ. ‘20 ವರ್ಷ ನಾನು ಭಾರತಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಅದರ ಬದಲಿಗೆ ನಾನು ಏನನ್ನೂ ಕೇಳಿಲ್ಲ. ಇಂದು ಕೇಳುತ್ತಿದ್ದೇನೆ. ಟೈಗರ್​ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್​ ಒಬ್ಬ ದ್ರೋಹಿ ಅಂತ ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆ’ ಎಂದು ಸಲ್ಮಾನ್​ ಖಾನ್​ ಹೇಳಿರುವ ಡೈಲಾಗ್​ ಹೈಲೈಟ್​ ಆಗಿದೆ.

ಈ ಬಾರಿ ಟೈಗರ್​ ತನ್ನ ಕ್ಯಾರೆಕ್ಟರ್​ ಏನು ಎಂಬುದನ್ನು ಸಾಬೀತು ಮಾಡಿಕೊಳ್ಳಲು ದೇಶದ ವಿರುದ್ಧವೇ ಹೋರಾಟಕ್ಕೆ ನಿಂತಂತಿದೆ. ‘ಬದುಕಿದ್ದರೆ ಮತ್ತೆ ನಿಮ್ಮೆ ಸೇವೆ ಮಾಡುತ್ತೇನೆ. ಇಲ್ಲದಿದ್ದರೆ ಜೈಹಿಂದ್​’ ಎಂದು ಹೇಳುವ ಮೂಲಕ ಆತ ಯುದ್ಧ ಸಾರಿದ್ದಾನೆ. ಈ ಟೀಸರ್​ನಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳ ಝಲಕ್​ ತೋರಿಸಲಾಗಿದೆ. ‘ಎಲ್ಲಿಯವರೆಗೆ ಟೈಗರ್​ ಸಾಯಲ್ಲವೋ, ಅಲ್ಲಿಯವರೆಗೆ ಸೋಲಲ್ಲ’ ಎಂದು ಸಲ್ಮಾನ್​ ಖಾನ್​ ಮಾಸ್​ ಆಗಿ ಡೈಲಾಗ್​ ಹೊಡೆದಿದ್ದಾರೆ.

ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ‘ಟೈಗರ್​ 3’ ಸಿನಿಮಾ ರಿಲೀಸ್​ ಆಗಲಿದೆ. ‘ಜವಾನ್​’ ಮತ್ತು ‘ಪಠಾಣ್​’ ರೀತಿ ಈ ಸಿನಿಮಾ ಕೂಡ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಾ ಎಂಬುದನ್ನು ಕಾದುನೋಡಬೇಕು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಟೈಗರ್​ 3’ ಟೀಸರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಹಿಂದಿನ ಲೇಖನಶುಕ್ರವಾರದ ಕರ್ನಾಟಕ ಬಂದ್ ​ಗೆ ಚಿತ್ರರಂಗ ಬೆಂಬಲ
ಮುಂದಿನ ಲೇಖನಮೈಸೂರು ಅರಮನೆ ಆವರಣದಲ್ಲಿ ಅರ್ಥಪೂರ್ಣ ವಿಶ್ವ ಪ್ರವಾಸೋದ್ಯಮ ದಿನಾಚರಣೆ