ಮನೆ ಅಪರಾಧ ಬೆಂಗಳೂರು ಪಬ್‌ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ಯತ್ನ: ಟೆಕ್ಕಿ ಅನುರಾಗ್ ಬಂಧನ

ಬೆಂಗಳೂರು ಪಬ್‌ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ಯತ್ನ: ಟೆಕ್ಕಿ ಅನುರಾಗ್ ಬಂಧನ

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಕೇಸ್ ಗಳು ಹೆಚ್ಚಾಗ್ತಿದ್ದು, ಅದರಲ್ಲೂ ಪಬ್ ಅಂಡ್ ಬಾರ್ ರೆಸ್ಟೋರೆಂಟ್ ಗಳಲ್ಲಿ ಕೆಲ ಕಾಮುಕರು ಹದ್ದು ಮೀರಿ ವರ್ತಿಸುತ್ತಿದ್ದಾರೆ.

ಇದೀಗ ಕಬ್ಬನ್ ಪಾರ್ಕ್ ಬಳಿಯ ಪಬ್‌ ಒಂದರಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಲ್ಲಿ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅನುರಾಗ್ ಎಂದು ಗುರುತಿಸಲಾಗಿದೆ. ಇಬ್ಬರು ಖಾಸಗಿ ಕಂಪನಿಯಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಚಯದ ಮೇಲೆ ಕಬ್ಬನ್ ಪಾರ್ಕ್ ಬಳಿಯ ಪಬ್‌ವೊಂದಕ್ಕೆ ಪಾರ್ಟಿಗೆ ಹೋಗಿದ್ದರು. ಪಾರ್ಟಿ ವೇಳೆ ಕುಡಿತದ ಮತ್ತಿನಲ್ಲಿ, ಯುವತಿ ಮೇಲೆ ದೌರ್ಜನ್ಯವೆಸಗಲು ಅನುರಾಗ್ ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಎಣ್ಣೆ ಏಟಿನಲ್ಲಿ ಅನುರಾಗ್ ಯುವತಿಯನ್ನು ಎಳೆದಾಡಿದ್ದಾರೆ. ಇದ್ರಿಂದ ಮನನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರೋ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.