ಮನೆ ಸುದ್ದಿ ಜಾಲ ಟೆಕ್ಕಿ ಕೊಲೆ ಪ್ರಕರಣ; ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಅರೆಸ್ಟ್‌..!

ಟೆಕ್ಕಿ ಕೊಲೆ ಪ್ರಕರಣ; ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಅರೆಸ್ಟ್‌..!

0

ಬೆಂಗಳೂರು : ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ, ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಶರ್ಮಿಳಾ ಫೋನ್ ನೀಡಿದ ಸುಳಿವಿನಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಮಂಗಳೂರಿನವರಾದ ಶರ್ಮಿಳಾ ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು.

ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆ ಎನ್ನುವ ರೀತಿ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಶರ್ಮಿಳಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಮೊಬೈಲ್ ಆನ್ ಆಗಿತ್ತು. ಈ ವೇಳೆ ಅನುಮಾನಗೊಂಡ ಪೊಲೀಸರು, ಆ ಮೊಬೈಲ್‌ನ ಟವರ್ ಲೊಕೇಷನ್ ಪರಿಶೀಲಿಸಿದಾಗ ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದ ಮನೆ ತೋರಿಸಿತ್ತು. ಆಗ ಪೊಲೀಸರು ತಕ್ಷಣ ಆರೋಪಿ ಕರ್ನಲ್ ಕುರಯ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಘಟನೆ..? – ಜ.3ರ ರಾತ್ರಿ ಘಟನೆ ನಡೆದಿದ್ದು, ಜ.5ರಂದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲ್ಯಾಟ್‌ನ ರೂಮ್‌ವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತ್ತು. ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು.

ಟೆಕ್ಕಿ ಶರ್ಮಿಳಾನ್ನು ಕೊಲೆ ಮಾಡಿದ ಆರೋಪಿ ಕೇರಳ ಮೂಲದ ಹದಿನೆಂಟು ವರ್ಷದ ಕರ್ನಲ್ ಕುರಯ್. ಶರ್ಮಿಳಾ ಹಾಗೂ ಆರೋಪಿ ಅಕ್ಕಪಕ್ಕದ ನಿವಾಸಿಗಳು. ಮೃತ ಶರ್ಮಿಳಾಗಿಂದ ಆರೋಪಿ 16 ವರ್ಷ ಚಿಕ್ಕವನು. ಸಾಮಾನ್ಯವಾಗಿ ಆರೋಪಿ ಕರ್ನಲ್ ಎದುರು ಬಂದಾಗ ಶರ್ಮಿಳಾ ಸ್ಮೈಲ್‌ ಕೊಟ್ಟು ಮಾತನಾಡಿಸುತ್ತಿದ್ದಳು. ಇದನ್ನೇ ಪ್ರೀತಿ ಎಂದುಕೊಂಡಿದ್ದ ಆರೋಪಿ ಆಕೆಯನ್ನು ನಿಜವಾಗಿಯೂ ಪ್ರೀತಿಸಲು ಆರಂಭಿಸಿದ್ದ.

ಈ ಘಟನೆ ನಡೆದ ದಿನ ರಾತ್ರಿ ಆರೋಪಿ ಮನೆಯ ಟೆರೇಸ್ ಮೂಲಕ ಶರ್ಮಿಳಾ ಪ್ಲಾಟ್‌ಗೆ ಬಂದಿದ್ದ. ಮನೆಯ ಒಳಗೆ ಬಂದವನೇ ಏಕಾಏಕಿ ಶರ್ಮಿಳಾ ಜೊತೆಗೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದ. ಗಾಬರಿಯಾದ ಶರ್ಮಿಳಾ ಆತನನ್ನು ತಳ್ಳಿ ಕಿರುಚಾಡಿದ್ದಳು. ಇದರಿಂದ ಕೋಪಗೊಂಡ ಆರೋಪಿ ಹಲ್ಲೆ ಮಾಡಿ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ವಿಜ್ಞಾನ ವಿದ್ಯಾರ್ಥಿಯಾಗಿದ್ದ ಆರೋಪಿ ಬೆಂಕಿಯಲ್ಲಿ ಸುಟ್ಟರೇ ಸಾಕ್ಷ್ಯ ಉಳಿಯಲ್ಲ ಎಂದು ಭಾವಿಸಿ ದಿಂಬು, ಬೆಡ್‌ಶೀಟ್, ಕೃತ್ಯದ ವೇಳೆ ಬಳಸಿದ ಎಲ್ಲ ವಸ್ತುಗಳನ್ನ ರೂಂನಲ್ಲಿ ಹಾಕಿ ಬೆಂಕಿ ಹಚ್ಚಿದ್ದ. ಬಳಿಕ ಹೋಗುವಾಗ ಶರ್ಮಿಳಾ ಫೋನ್ ತೆಗೆದುಕೊಂಡು ನಾನು ಸಿಕ್ಕಿ ಹಾಕಿಕೊಳ್ಳಲು ಸಾಧ್ಯವೇ ಇಲ್ಲ ಎಂದುಕೊಂಡು ಎಸ್ಕೇಪ್ ಆಗಿದ್ದ. ಘಟನೆಯಾದ ಬಳಿಕ ಹತ್ಯೆಗೂ ನನಗೂ ಏನು ಸಂಬಂಧವಿಲ್ಲದಂತೆ ಡ್ರಾಮಾ ಮಾಡಿದ್ದ.

ಶರ್ಮಿಳಾ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಹಾಗೂ ಫೋನ್ ಕಾಲ್ ಪರಿಶೀಲನೆ ಮಾಡಿದಾಗ ಎಲ್ಲಿಯೂ ಆರೋಪಿಯ ಸುಳಿವು ಇರಲಿಲ್ಲ. ಆದರೆ ಶರ್ಮಿಳಾ ಫೋನ್ ತನ್ನ ಬಳಿಯೇ ಇಟ್ಟುಕೊಂಡಿದ್ದ. ಘಟನೆಯಾದ ಮೂರು ದಿನದ ಬಳಿಕ ಫೋನ್ ಆನ್ ಮಾಡಿ ತನ್ನ ಸಿಮ್ ಹಾಕಿದ್ದಾನೆ. ಫೋನ್ ಆನ್ ಆಗುತ್ತಿದ್ದಂತೆ ಆಕ್ಟೀವ್ ಆದ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.