ಮನೆ ರಾಷ್ಟ್ರೀಯ ಮಾತೃಭಾಷೆಯಲ್ಲಿ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣ: ಅಮಿತ್ ಶಾ

ಮಾತೃಭಾಷೆಯಲ್ಲಿ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣ: ಅಮಿತ್ ಶಾ

0

ನವದೆಹಲಿ: ಉತ್ತಮ ತಿಳಿವಳಿಕೆಗಾಗಿ ರಾಜ್ಯಗಳು ಮಕ್ಕಳಿಗೆ ಮಾತೃಭಾಷೆಯಲ್ಲೇ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಹೇಳಿದ್ದಾರೆ.

ಈ ಮೂಲಕ ಇಂಗ್ಲಿಷ್ ಪರಿಣಿತರಲ್ಲದ ವಿದ್ಯಾರ್ಥಿಗಳ ಪ್ರತಿಭೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣದ ಮಹತ್ವವನ್ನು ಉಲ್ಲೇಖ ಮಾಡಿರುವ ಅಮಿತ್ ಶಾ, ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಶಿಕ್ಷಣವನ್ನು ಪಡೆದರೆ ನೈಜ ಆಲೋಚನೆಯನ್ನು ವೃದ್ಧಿಗೊಳಿಸಬಹುದು. ಈ ಮೂಲಕ ಸಂಶೋಧನೆ ಹಾಗೂ ಅವಿಷ್ಕಾರವನ್ನು ಉತ್ತೇಜಿಸಬಹುದು ಎಂದು ಹೇಳಿದರು.

ತಾಂತ್ರಿಕ, ವೈದ್ಯಕೀಯ, ಕಾನೂನು ಹೀಗೆ ಎಲ್ಲವನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು. ಈ ಮೂರು ವಿಷಯಗಳ ಪಠ್ಯಕ್ರಮವನ್ನು ಪ್ರಾದೇಶಿಕ ಭಾಷೆಗಳಲ್ಲಿ ಸರಿಯಾಗಿ ಭಾಷಾಂತರಿಸಲು ಎಲ್ಲ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಮಿತ್ ಶಾ ಹೇಳಿದರು.

ಮಾತೃಭಾಷೆಯಲ್ಲಿ ಶಿಕ್ಷಣ ಸುಲಭ ಹಾಗೂ ವೇಗವಾಗಿ ಪಡೆಯಬಹುದು ಎಂದು ಒತ್ತಿ ಹೇಳಿರುವ ಅವರು, ಈ ಮೂಲಕ ಉನ್ನತ ಶಿಕ್ಷಣದಲ್ಲಿ ದೇಶದ ಪ್ರತಿಭೆಯನ್ನು ಉತ್ತೇಜಿಸಬಹುದು ಎಂದು ತಿಳಿಸಿದರು.

ಹಿಂದಿನ ಲೇಖನಪ್ರೇಮಿಗಳ ಜಗಳ ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನ`ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಕೇಕ್ ಮೇಲೆ ಬರೆಸಿ ಅಭಿಮಾನ ಮೆರೆದ ಅಭಿಮಾನಿಗಳು