ಮನೆ ರಾಜ್ಯ ಹಳದಿ ಮಾರ್ಗದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ; 19 ನಿಮಿಷದ ಅಂತರದಲ್ಲಿ ಸಂಚಾರ..!

ಹಳದಿ ಮಾರ್ಗದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ; 19 ನಿಮಿಷದ ಅಂತರದಲ್ಲಿ ಸಂಚಾರ..!

0

ಬೆಂಗಳೂರು : ತಾಂತ್ರಿಕ ಸಮಸ್ಯೆಯಿಂದ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಇಂದು ಸಂಜೆ ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದು, ಸಾಮಾನ್ಯ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದರಿಂದ ಈ ಮಾರ್ಗದಲ್ಲಿ 15 ನಿಮಿಷದ ಬದಲಾಗಿದೆ. 19 ನಿಮಿಷದ ಅಂತರದಲ್ಲಿ ರೈಲುಗಳು ಈಗ ಸಂಚರಿಸುತ್ತಿವೆ. ದುರಸ್ಥಿ ಮಾಡಿದ ಬಳಿಕ ಎಂದಿನಂತೆ 15 ನಿಮಿಷದಲ್ಲಿ ರೈಲು ಸಂಚಾರ ಮಾಡಲಿದೆ ಎಂದು ತಿಳಿಸಿದೆ.