ಮನೆ ರಾಜ್ಯ ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ ಎದುರು..!

ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ ಎದುರು..!

0

ಬೆಂಗಳೂರು : ರಾಜಧಾನಿಯಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಜಾತಿಗಣತಿಗೂ ಮುನ್ನ ಬೆಸ್ಕಾ ರೀಡರ್‌ಗಳು ಮನೆ ಮನೆಗೆ ತೆರಳಿ ಯುಹೆಚ್‌ಐಡಿ ಸಂಖ್ಯೆಯನ್ನು ಅಂಟಿಸಿದ್ದರು. ಈ ಸಂಖ್ಯೆ ಹಾಕಿದರೆ ಸೈಟ್‌ ತೆರೆಯುತ್ತಿಲ್ಲ. ಹೀಗಾಗಿ ಈಗ ಗಣತಿದಾರರೇ ಮನೆ ನಂಬರ್‌ ಸೃಷ್ಟಿಸಿ ಸಮೀಕ್ಷೆಗೆ ಮುಂದಾಗಿದ್ದಾರೆ.

ಗಣತಿದಾರರಿಗೆ ಮನೆ ರಿಜಿಸ್ಟ್ರೇಷನ್ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಈಗ ತರಬೇತಿ ನೀಡಲು ಮುಂದಾಗಿದ್ದಾರೆ. ಮುಖ್ಯವಾಗಿ ಬಿಟಿಎಂ ಲೇಔಟ್‌ ಬಹುತೇಕ ಕಡೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಈಗ ಸಮೀಕ್ಷಾ ಸಿಬ್ಬಂದಿಗೆ ಮತ್ತೆ ತರಬೇತಿ ನೀಡಲಾಗುತ್ತಿದೆ.

ಯುಹೆಚ್ ಐಡಿ ನಂಬರ್ ಜನರೇಟರ್ ಆಗುತ್ತಿಲ್ಲ, ಓಟಿಪಿ ಬರುತ್ತಿಲ್ಲ, ಸರ್ವರ್‌ ಡೇಟಾ ತೆಗೆದುಕೊಳ್ಳುತ್ತಿಲ್ಲ, ಸರ್ವೆ ಮಾಡಲು ಆಪ್ ಲಾಗಿನ್ ಆಗುತ್ತಿಲ್ಲ, ಐಪೋನ್ ನಲ್ಲಿ ಆಪ್ ಲಾಗಿನ್ ಆಗುತ್ತಿಲ್ಲ., ಹೀಗೆ ಹಲವು ತಾಂತ್ರಿಕ ಸಮಸ್ಯೆಯ ಬಗ್ಗೆ ಸಮೀಕ್ಷೆ ಮಾಡುತ್ತಿರುವವರ ಅಸಮಾಧಾನ ಹೊರಹಾಕಿದ್ದಾರೆ.

ಇಂದು ವಾಲ್ಮಿಕಿ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಜೆ ಇದ್ದರೂ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ. ಮೂರು ದಿನದಿಂದ ಬೆಂಗಳೂರಿನಲ್ಲಿ ಶುರುವಾಗಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಇಂದು ಮುಂದುವರಿದಿದೆ.