ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್ 10 ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್’ಫೋನ್ ದೀರ್ಘ ಬಾಳಿಕೆ ಬೊಂಬಾಟ್ ಬ್ಯಾಟರಿಯನ್ನು ಹೊಂದಿದೆ.
ಸ್ಮಾರ್ಟ್’ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್’ಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ ಕಂಪನಿ ಇದೀಗ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್’ಫೋನ್ ಒಂದನ್ನು ಅನಾವರಣ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್ 10 ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್’ಫೋನ್ ದೀರ್ಘ ಬಾಳಿಕೆ ಬೊಂಬಾಟ್ ಬ್ಯಾಟರಿ ಬ್ಯಾಕಪ್ ಹೊಂದಿದ್ದು ಕೃತಕ ಬುದ್ಧಿಮತ್ತೆ ಆಧಾರಿತ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ. 90Hz ರಿಫ್ರೆಶ್ ರೇಟ್ ಡಿಸ್’ಪ್ಲೇ ಈ ಫೋನಿನ ಮತ್ತೊಂದು ಹೈಲೇಟ್.
ಟೆಕ್ನೋ ಸ್ಪಾರ್ಕ್ 10 (4G) ಸ್ಮಾರ್ಟ್’ಫೋನ್ ಭಾರತಕ್ಕೆ ಇನ್ನಷ್ಟೆ ಕಾಲಿಡಬೇಕಿದೆ. ದೇಶದಲ್ಲಿ ಇದರ ಬೆಲೆ 15,000 ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಮೆಟಾ ವೈಟ್, ಮೆಟಾ ಬ್ಲೂ ಮತ್ತು ಮೆಟಾ ಬ್ಲ್ಯಾಕ್ ಬಣ್ಣಗಳ ಮೂಲಕ ಅನಾವರಣಗೊಂಡಿದೆ. ಈ ಫೋನಿನ ಫೀಚರ್ಸ್ ನೋಡುವುದಾದರೆ, ಇದು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ HD+ ಡಿಸ್’ಪ್ಲೇಯನ್ನು ಹೊಂದಿದೆ. ಈ ಡಿಸ್’ಪ್ಲೇ 90Hz ರಿಫ್ರೆಶ್ ರೇಟ್, 120Hz ಟಚ್ ಸ್ಯಾಪ್ಲಿಂಗ್ ರೇಟ್’ನಿಂದ ಕೂಡಿದೆ.














