ಮನೆ ಅಪರಾಧ ಟೆಂಪೊ ಟ್ರಾವಲರ್ – ಕ್ಯಾಂಟರ್ ವಾಹನ ನಡುವೆ ಅಪಘಾತ: ಇಬ್ಬರು ಸಾವು

ಟೆಂಪೊ ಟ್ರಾವಲರ್ – ಕ್ಯಾಂಟರ್ ವಾಹನ ನಡುವೆ ಅಪಘಾತ: ಇಬ್ಬರು ಸಾವು

0

ರಾಮನಗರ(Ramanagar): ಟೆಂಪೊ ಟ್ರಾವಲರ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣದ ವೈಶಾಲಿ ಹೋಟೆಲ್ ಮುಂಭಾಗ ಶನಿವಾರ ಬೆಳಿಗ್ಗೆ ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿಕ್ಕಾಡಿ ಗ್ರಾಮದ ಜನರು ತಿರುಪತಿ ಪ್ರವಾಸ ಮುಗಿಸಿ ಸ್ವಗ್ರಾಮಕ್ಕೆ ಟಿ.ಟಿ. ವಾಹನದಲ್ಲಿ ವಾಪಸ್ ಆಗುತ್ತಿದ್ದರು.

ಈ ವೇಳೆ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂದಿನಿಂದ ಟಿ.ಟಿ. ವಾಹನ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಇಬ್ಬರು ಮೃತಪಟ್ಟು, ಇನ್ನೂ ಹಲವರು ಗಾಯಗೊಂಡರು ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಿಂದಿನ ಲೇಖನಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ: ಅಪಾಯದಿಂದ ಪಾರಾದ ಚಾಲಕ
ಮುಂದಿನ ಲೇಖನಫಾಸ್ಟ್’ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಟೋಲ್ ತೆರಿಗೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್