ಮನೆ ಅಪರಾಧ ಮರಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಕ್ಸ್: 7 ಜನರ ಸಾವು

ಮರಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಕ್ಸ್: 7 ಜನರ ಸಾವು

0

ಧಾರವಾಡ(Dharawad): ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಾಡ ಕ್ರಾಸ್ ಬಳಿ ನಡೆದಿದೆ.

ಮನಸೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ರಾತ್ರಿ 2ರ ಸುಮಾರಿಗೆ ಬೆನಕನಕಟ್ಟಿಗೆ ಮರಳುತ್ತಿದ್ದರು. 21 ಜನರಿದ್ದ ವಾಹನ ನಿಗದಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಇದ್ದಾರೆ.

ಅನನ್ಯಾ (14), ಹರೀಶ್ (13), ಶಿಲ್ಪಾ (34), ನಿಲವ್ವ (60), ಮಧುಶ್ರೀ (20), ಮಹೇಶ್ವರ (11), ಶಂಭುಲಿಂಗಯ್ಯ (35) ಮೃತಪಟ್ಟರು.13 ಜನರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಿಂದಿನ ಲೇಖನಪಿಎಸ್‌ಐ ನೇಮಕಾತಿ ಹಗರಣ: ಬಂಧಿತರಿಂದ 2.46 ಕೋಟಿ ರೂ. ಜಪ್ತಿ; ಮಾಹಿತಿ ಪಡೆದ ಇಡಿ, ಎಸಿಬಿ
ಮುಂದಿನ ಲೇಖನಯೋಗ ದಿನಾಚರಣೆ -2022: ಮೈಸೂರಿಗೆ ಪ್ರಧಾನಿ ಮೋದಿ ಆಗಮನ