ನವದೆಹಲಿ: ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜನಪ್ರಿಯ ಅಪ್ಲಿಕೇಶನ್ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಸೇವೆಯಲ್ಲಿ ಬುಧವಾರ ಮಧ್ಯಾಹ್ನ ತಾತ್ಕಾಲಿಕ ವ್ಯತ್ಯಯ ಕಂಡುಬಂದಿದೆ.
ಈ ಎರಡು ಅಪ್ಲಿಕೇಶನ್ಗಳು ಅರ್ಧ ಗಂಟೆ ಕಾಲ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಸೇವೆ ವ್ಯತ್ಯಯದ ಬಗ್ಗೆ ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಮೂಲಕ ದೂರು ನೀಡಿದ್ದಾರೆ. ಬಳಕೆದಾರರಿಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ, ಜೊಮ್ಯಾಟೊ ಕಂಪನಿಗಳು ತಾತ್ಕಾಲಿಕ ತಾಂತ್ರಿಕ ದೋಷವನ್ನು ಎದುರಿಸುತ್ತಿರುವ ಕುರಿತು ತಿಳಿಸಿವೆ.