ರಾಯಚೂರು: ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಟಾಟಾ ಏಸ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಸ್ಮಾಯಿಲ್(25), ಚನ್ನಬಸವ(26), ಅಂಬರೀಶ್(20), ರವಿ(21) ಮೃತ ದುರ್ವೈವಿಗಳು.
ಮೃತ ನಾಲ್ವರು ಮದುವೆ ಸಮಾರಂಭ ನಿಮಿತ್ತವಾಗಿ ಡೆಕೊರೇಶನ್ ಹಾಗೂ ಶಾಮಿಯಾನ ಹಾಕಲು ಟಾಟಾ ಏಸ್ ನಲ್ಲಿ ಸಿಂಧನೂರಿನಿಂದ ಮಸ್ಕಿ ತಾಲ್ಲೂಕಿನ ಮದ್ಲಾಪುರ ಗ್ರಾಮಕ್ಕೆ ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಪಗಡದಿನ್ನಿ ಕ್ಯಾಂಪ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಇನ್ನು ಘಟನೆಯಲ್ಲಿ ಸಮೀರ್ ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಮೃತದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಬಗ್ಗೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube