ಮನೆ ರಾಷ್ಟ್ರೀಯ ಭೀಕರ ರಸ್ತೆ ಅಪಘಾತ: 4 ಮಂದಿ ಸಾವು

ಭೀಕರ ರಸ್ತೆ ಅಪಘಾತ: 4 ಮಂದಿ ಸಾವು

0

ಒಡಿಶಾ: ಪುರಿಗೆ ಬರುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಖುರ್ದಾ ರಾಷ್ಟ್ರೀಯ ಹೆದ್ದಾರಿ 16ರ ಬದ್ಪೋಖಾರಿಯಾ ಬಳಿ ನಡೆದಿದೆ.

ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದು, ಎಲ್ಲರೂ 25 ರಿಂದ 35 ವಯಸ್ಸಿನೊಳಗಿನವರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಮೃತರು ಪುರಿಯ ಜಗನ್ನಾಥ ದೇವರ ದರ್ಶನಕ್ಕೆಂದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಖುರ್ದಾ ಕಡೆಗೆ ಬರುತ್ತಿದ್ದಾಗ ಬಡಪೋಖಾರಿಯಾ ಬಳಿ ರಸ್ತೆಯಲ್ಲಿ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ.

ಈ ಎರಡೂ ವಾಹನಗಳು ಆಂಧ್ರಪ್ರದೇಶದ ಪಾಸಿಂಗ್​ ಹೊಂದಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ.

ಹಿಂದಿನ ಲೇಖನನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ದೇವೇಗೌಡ ದಂಪತಿ
ಮುಂದಿನ ಲೇಖನಬೆಂಗಳೂರು: ಕುಡುಕನ ಬಳಿ ದಾಖಲೆ ಇಲ್ಲದ ಕೆಜಿಗಟ್ಟಲೇ ಚಿನ್ನಾಭರಣ, ನಗದು ಪತ್ತೆ