ಶ್ರೀನಗರ (Srinagar): ಗಡಿಯೊಳಗೆ ನುಸುಳಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಕಮಲ್‌ಕೋಟೆ ಪ್ರದೇಶದ ಮಡಿಯನ್ ನಾನಕ್ ಪೋಸ್ಟ್ ಬಳಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ.
ಸೈನ್ಯ ಮತ್ತು ಬಾರಾಮುಲ್ಲಾ ಪೊಲೀಸರು ಉರಿಯ ಕಮಲ್ ಕೋಟೆ ಸೆಕ್ಟರ್‌ನಲ್ಲಿರುವ ಮಡಿಯನ್ ನಾನಕ್ ಪೋಸ್ಟ್ ಬಳಿ ಮೂವರು ನುಸುಳುಕೋರರನ್ನು ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
Saval TV on YouTube