ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದ: 7 ಲೇಖಕರ ರಾಜೀನಾಮೆ

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: 7 ಲೇಖಕರ ರಾಜೀನಾಮೆ

0

ಬೆಂಗಳೂರು(Bangalore): ಪಠ್ಯ ಪುಸ್ತಕ ಪರಿಷ್ಕರಣೆ  ವಿವಾದದಲ್ಲಿ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಪಠ್ಯಪುಸ್ತಕದಲ್ಲಿ ಬಸವ ತತ್ವಕ್ಕೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ ಎಂದು ಆರೋಪಿಸಿ ಇಂಟರ್ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ಪರ್ಟ್ ಕಮಿಟಿಯ ಏಳು ಜನ ಲೇಖಕರು ರಾಜೀನಾಮೆ ನೀಡಿದ್ದಾರೆ.

ಸಾಹಿತಿಗಳಾದ ಎಸ್.ಎಂ ಜಮಾದಾರ್, ಐ ಎ ಎಸ್ ಅಧಿಕಾರಿ ಹಾಗೂ ಸಾಹಿತಿ ಡಾ. ಗುರುಪಾದ ಮರಿಗುದ್ದಿ, ಸಾಹಿತಿಗಳಾದ ಡಾ.ಹನುಮಾಕ್ಷಿಗೋಗಿ, ಡಾ. ಬಸವರಾಜ್ ಸಬರಾದ್, ರಂಜಾನ್ ದರ್ಗಾ, ಶಂಕರ್ ದೇವನೂರು,  ಡಾ.ಟಿ.ಆರ್. ಚಂದ್ರಶೇಖರ್ ರವರುಗಳು ರಾಜೀನಾಮೆ ನೀಡಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರ ಇತಿಹಾಸವನ್ನು ತಿರುಚುವ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಹಿಂದಿನ ಲೇಖನಚಿನ್ನಿದಾಂಡು ಆಟದ ವೇಳೆ ಗಲಾಟೆ: ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನಸೋಲಿಗ ಜನರ ನೆರವಿಗೆ ಮಲ್ಟಿ ಪರ್ಪಸ್ ವಾಹನ