ವಿಜಯ್ ಈಗ ರಾಜಕೀಯ ಭಾಷಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನವಾಣೆಯನ್ನು ಗುರಿಯಾಗಿಸಿಕೊಂಡಿರುವ ನಟ ವಿಜಯ್ ರಾಜ್ಯದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಜನ ಸಂಘಟನೆ ಗುರಿಯಾಗಿಸಿಕೊಂಡಿರುವ ವಿಜಯ್‌ಗೆ ಈಗ ಸಿನಿಮಾ ಬಗ್ಗೆ ಯೋಚನೆ ಇಲ್ಲ. ಆದರೆ ದೀಪಾವಳಿಗೆ ಅಭಿಮಾನಿಗಳಿಗೆ “ಗಿಫ್ಟ್” ನೀಡಲಿದ್ದಾರೆ.
ಮುಂದಿನ ವರ್ಷಾರಂಭದಲ್ಲೇ ವಿಜಯ್ ಜನನಾಯಕನ್ ಚಿತ್ರದ ಮೂಲಕ ಚಿತ್ರಮಂದಿರಗಳನ್ನು ಅಲಂಕರಿಸಲಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ಏರ್ಪಡಿಸೋದಕ್ಕೆ ಯೋಜನೆಯೂ ಆಗಿದೆ. ಅದಕ್ಕೂ ಮುನ್ನ ವಿಜಯ್ ಕಡೆಯಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್, ಸರ್ಪ್ರೈಸ್ ಆಗಿ ಪ್ಲ್ಯಾನ್ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಟಿವಿಕೆ ಹೆಸರಲ್ಲಿ ಹೊಸ ಪಕ್ಷ ಕಟ್ಟಿರುವ ವಿಜಯ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ವೇಳೆಯೇ ಸಿನಿಮಾ ಅಭಿಮಾನಿಗಳನ್ನು ಬ್ಯಾಲೆನ್ಸ್ ಮಾಡಲು ವಿಜಯ್ ಇದೇ ದೀಪಾವಳಿಗೆ ಮುಂಬರುವ “ಜನನಾಯಕನ್” ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಿದ್ದಾರೆ. ವಿಶೇಷ ಅಂದ್ರೆ ಇದು ವಿಜಯ್ ಧ್ವನಿಯಲ್ಲೇ ಮೂಡಿ ಬಂದಿದೆ.
ಮಾಸ್ ಪ್ರೇಕ್ಷಕರ ಮಹಾನಟ ವಿಜಯ್ ಫ್ಯಾನ್ಸ್‌ಗಾಗಿ ಈ ಟ್ರೀಟ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಈ ವಿಚಾರವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಮಾಣ ಸಂಸ್ಥೆ ಕಡೆಯಿಂದ ಅಧಿಕೃತವಾಗಿ ಪ್ರಕಟವಾಗಲಿದೆ.















