ಥಾಣೆ(ಮಹಾರಾಷ್ಟ್ರ): ಇಂದು ಬೆಳಗ್ಗೆ ಥಾಣೆ ಪೊಲೀಸ್ ಕಮಿಷನರೇಟ್ ಪೊಲೀಸ್ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿದೆ.
ವೆಬ್‌ಸೈಟ್ ಹ್ಯಾಕ್ ಮಾಡಿದ ಬಳಿಕ, ಹ್ಯಾಕರ್‌ಗಳು ಭಾರತ ಸರ್ಕಾರದಿಂದ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ. ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ
ನೀವು ಇಸ್ಲಾಂ ಧರ್ಮದ ಬಗ್ಗೆ ಪದೇ ಪದೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೀರಿ. ನಿಮಗೆ ಸಹಿಷ್ಣುತೆ ತಿಳಿದಿಲ್ಲ. ಶೀಘ್ರದಲ್ಲೇ ಕ್ಷಮೆಯಾಚಿಸಿ. ನಮ್ಮ ಧರ್ಮ ಪ್ರಚಾರಕರನ್ನು ಅವಮಾನಿಸಿದಾಗ ನಾವು ಸುಮ್ಮನಿರುವುದಿಲ್ಲ ಎಂದು ಹ್ಯಾಕರ್ಸ್ಗಳು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.