ರಾಯಚೂರು : ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳ 48 ದಿನಗಳ ಚಾತುರ್ಮಾಸ್ಯ ದೀಕ್ಷೆ ಮುಕ್ತಾಯ, ಹಿನ್ನೆಲೆ 13ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭವನ್ನ ಮಂತ್ರಾಲಯದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಇಲ್ಲಿನ ಕೊಂಡಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸೀಮೋಲ್ಲಂಘನ ಆಚರಣೆ ಮಾಡಿದರು. ಪ್ರಾಣದೇವರು, ಮಂಚಾಲಮ್ಮ ದೇವಿ, ಗುರು ರಾಯರ ಹಾಗೂ ಇತರ ಬೃಂದಾವನಗಳಿಗೆ ಮಂಗಳಾರತಿ ಮಾಡಿ ಸೀಮೋಲ್ಲಂಘನಕ್ಕೆ ಚಾಲನೆ ನೀಡಿದರು.
ನೂರಾರು ಭಕ್ತರೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕೊಂಡಾಪುರ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಶ್ರೀಗಳು ಮಠಕ್ಕೆ ಮರಳಿದರು. ಭಕ್ತರಿಂದ ಪುಷ್ಪವೃಷ್ಠಿ, ಗುರುವಂದನೆ ಕಾರ್ಯಕ್ರಮ ನಡೆಯಿತು. ನಂತರ ಸುಬುಧೇಂದ್ರ ತೀರ್ಥ ಸ್ವಾಮಿಗಳು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.














