ಹುಬ್ಬಳ್ಳಿ: ಚಾಕೊಲೇಟ್, ಹಣದ ಆಮಿಷ ತೋರಿಸಿ ಬಾಲಕರನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಒಡಿಶಾ ಮೂಲದ ಇಲ್ಲಿನ ಪ್ರತಿಷ್ಠಿತ ಹೊಟೇಲ್ ನ ಕುಕ್ ಒಬ್ಬರನ್ನು, ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಸಿದ್ಧಲಿಂಗೇಶ್ವರ ಕಾಲೋನಿಯ ವಾಸವಿದ್ದ ಕುಕ್ ಬಡಾವಣೆಯ ಅಪ್ರಾಪ್ತರಿಗೆ ಚಾಕೊಲೇಟ್, ಐಸ್ ಕ್ರೀಂ, ಹಣದ ಆಮಿಷ ತೋರಿಸಿ ಪುಸಲಾಯಿಸುವ ಮೂಲಕ ತನ್ನ ರೂಮ್ ಗೆ ಕರೆದೊಯ್ಯುವುದು, ಬಾಲಕರನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದನಲ್ಲದೆ, ಅದನ್ನು ವಿಡಿಯೋ ಮಾಡಿ ಅಶ್ಲೀಲ ಜಾಲತಾಣಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.
ವಿಷಯ ತಿಳಿದ ಸ್ಥಳೀಯರು ಕುಕ್ ನನ್ನು ಥಳಿಸಿದ್ದಾರಲ್ಲದೆ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.














