ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದಾಸಿರ್ ಎಂಬಾತ ಬಂಧಿತ ಆರೋಪಿ.
ಹಿಂದೂ ಯುವಕನ ಹೆಸರಲ್ಲಿ ಆರೋಪಿ ಮುದಾಸಿರ್ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆ್ಯಪ್ ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೇಜ್ ಕಳಿಸಿದ್ದ. ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು. ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ ಆರೋಪಿ ಮುದಾಸಿರ್, ನಂತರ ಯುವತಿ ಭೇಟಿ ವೇಳೆ ಆತ ಹಿಂದೂ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ತಾಯಿಗೆ ಹುಷಾರಿಲ್ಲವೆಂದು ಯುವತಿ ಬಳಿ 1 ಲಕ್ಷ ಹಣವನ್ನು ಪಡೆದಿದ್ದನಂತೆ. ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದಾನೆ.
ಇನ್ನು ಕೊನೆಗೆ ಸೋದರನನ್ನು ನೋಡಲು ದುಬೈಗೆ ಹೋಗಿ ಬರುತ್ತೆನೆಂದು ಫೋನ್ ಸ್ವಿಚ್ ಆಫ್ ಮಾಡಿ, ಬಳಿಕ ಮುದಾಸಿರ್ ನನ್ನ ಪತ್ತೆ ಹಚ್ಚಿದ ಯುವತಿಗೆ ಅನಿರುದ್ದ್ ಹೆಸರಿನವನು ಮುದಾಸಿರ್ ಅನ್ನೋದರ ಜೊತೆಗೆ ಮುದಾಸಿರ್ ಗೆ ಮತ್ತೊಂದು ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಾರೆಂಬುದು ಗೊತ್ತಾಗಿದೆ.
ಇದರಿಂದ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.