ಬೆಂಗಳೂರು: ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ನಾಯಕರು ನಾಳೆ ಕರೆ ಕೊಟ್ಟಿದ್ದ ಬಂದ್ ಹಿಂಪಡೆದಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ನಾಳೆ ಬೆಳಿಗ್ಗೆ 9 ರಿಂದ 11ಗಂಟೆವರೆಗೆ ಅಂದರೆ ಎರಡು ಗಂಟೆಗಳ ಕಾಲ ಬಂದ್ ಗೆ ಕಾಂಗ್ರೆಸ್ ನಾಯಕರು ಕರೆ ನೀಡಿದ್ದರು.
ಆದರೆ ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುವ ಹಿನ್ನೆಲೆ ಬಂದ್ ಅನ್ನು ಕಾಂಗ್ರೆಸ್ ನಾಯಕರು ಹಿಂಪಡೆದಿದ್ದಾರೆ.