ಮನೆ ಸುದ್ದಿ ಜಾಲ ಮೈಸೂರಿನಲ್ಲಿ ಬಂದ್ ಸಂಪೂರ್ಣ ವಿಫಲ

ಮೈಸೂರಿನಲ್ಲಿ ಬಂದ್ ಸಂಪೂರ್ಣ ವಿಫಲ

0

ಮೈಸೂರು: ಮುಸ್ಲಿಂ ಸಂಘಟನೆಗಳಿಂದ ಇಂದು ಕರೆ ನೀಡಿದ್ದ ಮೈಸೂರು ಬಂದ್ ಸಂಪೂರ್ಣವಾಗಿ ವಿಫಲಗೊಂಡಿದ್ದು, ಮೈಸೂರಿನಾದ್ಯಂತ ಜನ ಜೀವನ ಎಂದಿನಂತಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು, ಮೈಸೂರಿನಲ್ಲಿ ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್ಸ್ ಮೈಸೂರು ಬಂದ್ ಗೆ ಕರೆ ನೀಡಿತ್ತು. ಆದರೆ  ಬಂದ್ ಗೆ ನಿರೀಕ್ಷೆಯಂತೆ ಬೆಂಬಲ ದೊರೆಯದೇ ಸಂಪೂರ್ಣ ವಿಫಲವಾಗಿದೆ.

ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಾದ ಉದಯಗಿರಿ, ರಾಜೀವ್ ನಗರ, ಕೆಸರೆ, ಅಜೀಜ್ ಸೇಠ್ ನಗರ, ಘೌಸಿಯಾ ನಗರಗಳ ಮುಖ್ಯ ರಸ್ತೆಯಲ್ಲಿ ಅಂಗಡಇ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಉಳಿದಂತೆ ಬಸ್  ಸಂಚಾರ ಎಂದಿನಂತಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.

ಅಲ್ಲದೇ ಅಲ್ಲದೇ ಇಂದು ನಟ ಪುನೀತ್ ರಾಜ್ ಕುಮಾರ್ ಜನ್ಮದಿನ ಹಾಗೂ ಜೇಮ್ಸ್ ಚಿತ್ರ ಬಿಡುಗಡೆಗೊಂಡಿರುವುದರಿಂದ ಥಿಯೇಟರ್‍ ಗಳಲ್ಲಿಯೂ ಜನ ಜಂಗುಳಿ ಇತ್ತು. ಮಾರುಕಟ್ಟೆಗಳಲ್ಲಿಯೂ ಎಂದಿನಂತೆ ವ್ಯಾಪಾರ ವಹಿವಾಟು ಕಂಡು ಬಂದಿದ್ದು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಇಂದು ಮೈಸೂರು ಬಂದ್ ಗೆ ಕರೆ ನೀಡಿರುವುದು ಕೂಡ ಸಾರ್ವಜನಿಕ ಗಮನಕ್ಕೆ ಬಂದಂತೆ ಕಂಡುಬರಲಿಲ್ಲ. ಅಲ್ಲದೇ ಮೈಸೂರು ಬಂದ್ ಗೆ ಮುಸ್ಲಿಂ ಸಂಘಟನೆಗಳನ್ನು ಹೊರತು ಪಡಿಸಿದರೆ ಇನ್ಯಾವುದೇ ಸಂಘಟನೆಗಳು ಬೆಂಬಲ ಘೋಷಿಸದೇ ಇರುವುದು ಬಂದ್ ವಿಫಲಗೊಳ್ಳಲು ಕಾರಣವಾಗಿದೆ.