ಮನೆ ರಾಜ್ಯ ಕಲ್ಲಿನಿಂದ ತಲೆ ಜಜ್ಜಿ ದೇಗುಲದ ಅರ್ಚಕನ ಬರ್ಬರ ಹತ್ಯೆ

ಕಲ್ಲಿನಿಂದ ತಲೆ ಜಜ್ಜಿ ದೇಗುಲದ ಅರ್ಚಕನ ಬರ್ಬರ ಹತ್ಯೆ

0

ವಿಜಯಪುರ : ಜಿಲ್ಲೆಯ ಅರಕೇರಿ ಅಮೋಘಸಿದ್ಧ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ, ಯುವಕನ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಯುವಕನನ್ನು ಅಮಸಿದ್ಧ ಬಿರಾದಾರ (35) ಎಂದು ಗುರುತಿಸಲಾಗಿದೆ.

ಮೃತ ಯುವಕನನ್ನು ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಅಮೋಘಸಿದ್ಧ ದೇವಸ್ಥಾನದ ಬಳಿಯೇ ಹತ್ಯೆ ಮಾಡಲಾಗಿದೆ. ಭಾನುವಾರ (ನ.9) ತಡರಾತ್ರಿ ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಕಲ್ಲಿನಿಂದ ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆಗೈದು, ಪರಾರಿಯಾಗಿದ್ದಾರೆ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡಸಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.