ಮನೆ ರಾಷ್ಟ್ರೀಯ ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ.

ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ.

0

ನವದೆಹಲಿ: ಶಾಸಕರ ಸಂಬಳ ಅತಿ ಕಡಿಮೆ ಇದೆ ಎನ್ನುವ ವಿಚಾರ ಅಲ್ಲಿನ ವಿಧಾನಸಭೆಯಲ್ಲಿ ಸದ್ದು ಮಾಡುತ್ತಿದೆ. ಶಾಸಕರಿಗೆ ಅತಿ ಕಡಿಮೆ ಸಂಬಳ ನೀಡುವ ರಾಜ್ಯಗಳಲ್ಲಿ ದೆಹಲಿಯೂ ಒಂದು. ಶಾಸಕರ ಮೂಲವೇತನ ಕೇವಲ 30,000 ರೂ ಮಾತ್ರವೇ. ಒಟ್ಟು ಮಾಸಿಕ ಸಂಬಳ ಒಂದು ಲಕ್ಷ ರೂಗಿಂತಲೂ ಕಡಿಮೆ. ಕೇರಳ ರಾಜ್ಯದ ಶಾಸಕರದ್ದು ಇನ್ನೂ ಕಡಿಮೆ ಸಂಬಳ.

ಇವರ ಮೂಲವೇತನ ಕೇವಲ 2,000 ರೂ ಎಂದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ. ಶಾಸಕರಿಗೆ ಅತ್ಯಂತ ಕಡಿಮೆ ಸಂಬಳ ಹೊಂದಿರುವ ರಾಜ್ಯಗಳಲ್ಲಿ ಕೇರಳ ಇದೆ. ಈ ದಕ್ಷಿಣ ತುದಿಯ ರಾಜ್ಯದ ಎಂಎಲ್​​ಎಗಳಿಗೆ ಮೂಲವೇತನ ಕೇವಲ 2,000 ರೂ ಅಂತೆ. ಇದು ಅಚ್ಚರಿ ಎನಿಸಿದರೂ ನಿಜ. ಬೇಸಿಕ್ ಸ್ಯಾಲರಿ ಎರಡು ಸಾವಿರ ರೂ ಮಾತ್ರವೇ ಇದ್ದರೂ ಬೇರೆ ಬೇರೆ ಭತ್ಯೆಗಳನ್ನು ಸೇರಿಸಿದರೆ ಕೇರಳ ಶಾಸಕರ ಒಟ್ಟು ಸಂಬಳ 70,000 ರೂ ಆಗುತ್ತದೆ. ಆದರೂ ಕೂಡ ಬೇರೆ ಹೆಚ್ಚಿನ ರಾಜ್ಯಗಳಿಗೆ ಹೋಲಿಸಿದರೆ ಇವರ ಸಂಬಳ ಕಡಿಮೆ ಎನಿಸುವುದು.

ದೆಹಲಿ ರಾಜ್ಯದಲ್ಲಿ ಶಾಸಕರಿಗೆ ಸಿಗುವ ಸಂಬಳ ತಿಂಗಳಿಗೆ 90,000 ರೂ ಮಾತ್ರ. ರಾಷ್ಟ್ರ ರಾಜಧಾನಿಯ ಜನಪ್ರತಿನಿಧಿಗಳಿಗೆ ಇಷ್ಟು ಕಡಿಮೆ ಸಂಬಳ ಇರುವುದು ಅಚ್ಚರಿಯ ಸಂಗತಿ. ದೆಹಲಿ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.