ಮಾನ್ಯರೇ, ಯಾವ ಪಂಚಾಂಗಗಳಲ್ಲಿಯೂ ಮಗುವಿನ ಜನನ ಫಲ ವಿಷಯವಾಗಿ ಜಾತಕನ ಅಥವಾ ಜಾತಕಳ ಸ್ಥಿತಿ-ಗತಿ, ನಡೆ-ನುಡಿ, ವಿದ್ಯಾಬುದ್ಧಿ ಇತ್ಯಾದಿಗಳನ್ನು ಬರೆದಿರುವದಿಲ್ಲ. ಏನಿದ್ದರೂ ಅತಿ ಸಂಕ್ಷಿಪ್ತವಾಗಿ ಅಲ್ಲಿ ಒಟ್ಟು ಫಲ ಹೇಳಿರಬಹುದು ಅಷ್ಟೇ ಆದರೆ ನಾವು ಇಲ್ಲಿ ಸಾಮಾನ್ಯ ಓದು ಬರಹ ಬಲ್ಲ ಗೃಹಸ್ಥರಿಗೂ ತಿಳಿಯುವಂತೆ, ಜಾತಕ ಫಲಗಳನ್ನು ಬರೆಯಲು ಬರುವಂತೆ ಸ್ಪಷ್ಟವಾಗಿ, ಮಗುವು ಹುಟ್ಟಿದ ಕೂಡಲೇ ತಾವೇ ಸ್ವತಃ ಈ ಪುಸ್ತಕದ ಸಹಾಯದಿಂದ ತಿಳಿದುಕೊಳ್ಳುವಂತೆ ಫಲಗಳನ್ನು ಬರೆದಿದ್ದೇವೆ. ಇಲ್ಲಿ ನಾವು ಕೆಳಗೆ ಬಾಲಕನ ಜಾತಕ ಫಲವನ್ನೇ ಸರಳವಾಗಿ ಬರೆದಿದ್ದೇವೆ. ಅಲ್ಲದೆ, ಜ್ಯೋತಿಷ್ಯ ಬಲ್ಲವರು ಬಾಲಕನು ಹುಟ್ಟಿದ ಜನ್ಮ ಕುಂಡಲಿಯನ್ನು ಬರೆದು, ಬಾಲಕನ ಜನನ ದಿನದ ಪಂಚಾಂಗದ ಪ್ರಕಾರ ನೋಡಿ, ಅದರಂತೆ ಫಲಗಳನ್ನು ಬರೆದು ಕೊಡಲಿಕ್ಕೆ ಈ ವಿಷಯ ವಿವೇಚನೆ ಕೈಗನ್ನಡಿಯಂತಿದೆ. ಈ ವಿಷಯವನ್ನು ನಾವು ಅನೇಕ ಪುರಾತನ ಪಂಡಿತರ ಜ್ಯೋತಿಷ್ಯ ಗ್ರಂಥಗಳನ್ನು ಪರಿಶೀಲಿಸಿ ನೋಡಿ ಇಲ್ಲಿ ಬರೆದಿದ್ದೇವೆ. ಇದರಿಂದ, ಎಲ್ಲ ಮಹನೀಯರಿಗೂ ಜ್ಯೋತಿಷಿಗಳಿಗೂ ವಿಶೇಷ ಅನುಕೂಲವಾದೀತೆಂದು ನಾವು ನಂಬಿದ್ದೇವೆ.
೬೦ ಸಂವತ್ಸರಗಳ ಜನನ ಫಲ ವಿಚಾರ :
ಶ್ಲೋಕ ||
ಪ್ರಭವ ಶರಧಿ ಜಾತಸ್ಸಾಹಸೀ ಸತ್ಯವಾದೀ ಸಕಲ ಗುಣ ಸಮೇತಃ
ಕಾಲ ವಿದ್ಧರ್ಮಶಾಲೀ ||
*ದಿಭವ ಶರಧಿ ಕಾಮಿನೀ ನಿರ್ಮ ಲೋ ನಿತ್ಯ ತುಷ್ಟಃ ಪ್ರಭಲ ಧನ
ಸಮೇತೋ ಬಂಧು ವಿದ್ಯಾ ಯಶಸ್ವಿ ||
*
ಅರ್ಥ : ೧) ಪ್ರಭವ ಸಂವತ್ಸರದಲ್ಲಿ ಹುಟ್ಟಿದವನು ವಿದ್ಯಾವಂತನಾಗಿ, ವಿಶೇಷವಾಗಿ ಧನ-ಧಾನ್ಯವನ್ನು ಸಂಪಾದಿಸುವನಲ್ಲದೆ, ದಾನ-ಧರ್ಮ ಕಾರ್ಯದಲ್ಲಿ ಆಸಕ್ತಿಯುಳ್ಳವನೂ ಒಳ್ಳೇ ಸತತೋದ್ಯೋಗಿಯೂ, ಕಾರ್ಯನಿರತನೂ, ಮುಂದಾಳವೂ, ಕುಟುಂಬ ವಾತ್ಸಲ್ಯವುಳ್ಳವನೂ, ಆರೋಗ್ಯ-ಬಲವಂತನೂ ಸತ್ಯವಾದಿಯೂ ಆಗಿರುತ್ತಾನೆ. ಆದರೂ ಸ್ವಲ್ಪ ಕೋಪದವನಾಗುತ್ತಾನೆ.
೨) ವಿಭವ ಸಂವತ್ಸರದಲ್ಲಿ ಹುಟ್ಟಿದವನು ಬುದ್ಧಿವಂತ ನೂ ವೀರ ಕಲಾಕೌಶಲ್ಯವುಳ್ಳವನೂ, ಪರೋಪಕಾರಿಯೂ ವಿದ್ವಾಂಸನೂ, ಪುರುಷ ಜಾತಿ ಶ್ರೇಷ್ಠನೂ ಸತ್ಕಾರ್ಯ ಪ್ರೇಮಿಯೂ ಆಗುವನು. ಆದರೆ, ಸ್ತ್ರೀಯರಂತೆ ಸ್ವಲ್ಪು ನಾಚಿಕೆ ಗುಣದವನು ಆಗುತ್ತಾನೆ ಮಾತ್ರ.
೩) ಶುಕ್ಲ ಸಂವತ್ಸರದಲ್ಲಿ ಜನಿಸಿದವನು ಸರ್ವಸುಖಿಯೂ ವಿದ್ಯಾಸಂಪನ್ನನೂ ಹರಿತ ಬುದ್ಧಿಯುಳ್ಳವನೂ ವಿನಯವಂತನಾಗಿದ್ದು, ಶಾಂತ ಸ್ವಭಾದವನೂ, ಬಂಧು ಬಾಂಧವರಿಂದ ಮನ್ನಣೆ ಗಳಿಸುವವನೂ, ಪರೋಪಕಾರಿಯೂ ಲಲಿತ ಕಲೆಗಳಲ್ಲಿ ಆಸಕ್ತನೂ ಆಗುತ್ತಾನೆ. ಆದರೆ, ಸಾಧಾರಣ ಸಿರಿವಂತನಾಗುವನು ಹಾಗೂ ಪರಸ್ತ್ರೀಯರಲ್ಲಿ ಸ್ವಲ್ಪು ಆಸಕ್ತನೂ ಆಗುತ್ತಾನೆ.
೪) ಪ್ರಮೋದೂತ ಸಂವತ್ಸರದಲ್ಲಿ ಜನಿಸಿದವನು ವಿಶೇಷ ಆಹಂಕಾರಿಯೂ ಕೋಪಿಷ್ಠನೂ ಸದಾ ಬಡತನ ಅನುಭವಿಸುವವನೂ, ಕುಟಿಲ ಕಾರಸ್ಥಾನಿಯೂ ನೀಚ ಗುಣವುಳ್ಳವನು. ಬಂಧು ಬಾಂಧವರಲ್ಲಿಯೂ ವೈರತ್ವ ಸಾಧಿಸುವವನೂ, ವಿಶೇಷ ಖರ್ಚಿಕನೂ ಆಗುತ್ತಾನೆ. ಆದರೆ ತನ್ನ ಮರ್ಯಾದೆಗೆ ಕುಂದನ್ನು ಮಾತ್ರ ಕಳೆದುಕೊಳ್ಳದವನಾಗುತ್ತಾನೆ ಮತ್ತು ವಾಕ್ಚಾತುರ್ಯದಲ್ಲಿ ಸಮರ್ಥನೇ ಆಗುತ್ತಾನೆ.
೫) ಪ್ರಜೋತ್ಪತ್ತಿ ಸಂವತ್ಸರದಲ್ಲಿ ಜನಿಸಿದವನು ಗುರು ಹಿರಿಯರಲ್ಲಿ ಒಳ್ಳೇ ಭಕ್ತಿ-ವಿಶ್ವಾಸ-ನಿಷ್ಠೆಯುಳ್ಳವನೂ, ಕುಟುಂಬ ಪ್ರೇಮಿಯೂ ದಾನ ಧರ್ಮಗಳನ್ನು ಮಾಡುವವನೂ, ಅಂತಃ ಕರುಣೆಯೂ ಬುದ್ಧಿವಂತನೂ, ಸುಖ ಸೌಖ್ಯಗಳನ್ನು ಅನುಭವಿಸುವವನೂ, ತನ್ನ ಜಾತಿಯಲ್ಲಿ ಅಭಿಮಾನವುಳ್ಳವನೂ ಒಳ್ಳೇ ಮಾತುಕತೆಗಳ ನ್ನಾಡುವವನೂ ಆಗುತ್ತಾನೆ.
೬) ಆಂಗೀರಸ ಸಂವತ್ಸರದಲ್ಲಿ ಜನಿಸಿದವನು ಬಂಧು ಮಿತ್ರ ಬಳಗದವರಲ್ಲಿ ವಿಶ್ವಾಸವುಳ್ಳವನೂ, ಸುಖಪ್ರೇಮಿಯೂ, ವಿಶೇಷ ಮಾನ ಮರ್ಯಾದೆಯನ್ನು ಹೊಂದುವವನೂ ಗುಣವಂತನೂ, ಸತ್ಯರ್ಮದಲ್ಲಿ ನಿರತನೂ ಆಗಿರುತ್ತಾನೆ. ಆದರೆ ಅತಿಕಾಮುಕನು ಮತ್ತು ನಿಸರ್ಗ ಪ್ರೇಮಿಯು.
೭) ಶ್ರೀಮುಖ ಸಂವತ್ಸರದಲ್ಲಿ ಜನಿಸಿದವನು ಕೀರ್ತಿವಂತನಾಗಿಯೂ ಧನ ಧಾನ್ಯ ಸಂಪದ್ಭರಿತನೂ, ಬುದ್ಧಿವಂತನೂ, ಶಾಸ್ತ್ರ ಪುರಾಣಗಳಲ್ಲಿ ವಿಶ್ವಾಸ, ಪ್ರೇಮವುಳ್ಳವನೂ ಕ್ರಿಯಾನಿಷ್ಟನೂ ಉದಾರ ಮನಸ್ಸಿನವನೂ ಆಗುವನು.
೮) ಭಾವ ಸಂವತ್ಸರದಲ್ಲಿ ಜನಿಸಿದವನು ವಿದ್ಯಾವಂತನೂ, ಧೈರ್ಯವಂತನೂ, ಗುಣವಂತನೂ, ತನ್ನ ಕುಟುಂಬ ಪೋಷಕನೂ ದಾನ ಧರ್ಮಾದಿಗಳಲ್ಲಿ ನಿರತನೂ ಕೀರ್ತಿಶಾಲಿಯೂ ಆಗುತ್ತಾನಲ್ಲದೆ, ಧನವಂತನೂ ಆಗುತ್ತಾನೆ.
೯) ಯುವ ಸಂಪತ್ಸರದಲ್ಲಿ ಜನಿಸಿದವನು ಶಾಂತನೂ, ಸದ್ಗುಣವಂತನೂ, ಆಚಾರ ವಿಚಾರಶೀಲನು ಇಂದ್ರಿಯ ನಿಗ್ರಹವುಳ್ಳವನೂ ದಯಾ ವಂತನೂ ದೀರ್ಘಾಯು ಷ್ಯವುಳ್ಳವನು ಆಗುತ್ತಾನಲ್ಲದೆ ದಯಾ ದಾಕ್ಷಿಣ್ಯ ಮನಸ್ಸುಳ್ಳುವನಾಗುತ್ತಾನೆ. ಸದಾಚಾರ ಸುವಿಚಾರ ಸಂಪನನೂ ಆಗುತ್ತಾನೆ.
೧೦) ಧಾತುನಾಮ ಸಂವತ್ಸರದಲ್ಲಿ ಹುಟ್ಟಿದವನು ಗುರು ದೇವಾದಿದೇವತೆಗಳಲ್ಲಿ ಭಕ್ತಿಯುಳ್ಳವನೂ ಚಿತ್ರಕಲೆ ಶಿಲ್ಪಕಲೆಗಳಲ್ಲಿ ಕುಶಲನೂ, ವ್ಯವಹಾರ ಚತುರನ್ನೂ, ನೀತಿ ರೀತಿಗಳಲ್ಲಿ ಖ್ಯಾತಿವಂತನೂ, ಸೌಖ್ಯಾನ್ವಿತ ಮಾನವಂತನೂ, ಧರ್ಮರಾಸ್ತ್ರಗಳಲ್ಲಿ ಅಭಿರುಚಿಯುಳ್ಳವನೂ, ಕೀರ್ತಿವಂತನೂ ಆಗುವನು.
೧೧) ಈಶ್ವರ ಸಂವತ್ಸರದಲ್ಲಿ ಜನಿಸಿದವನು ಗುರು ಹಿರಿಯರಲ್ಲಿ ಭಕ್ತಿ ವಿನಯಗಳುಳ್ಳವನೂ ಒಳ್ಳೇ ಪರಾಕ್ರಮಿಯೂ, ಧನವಂತನೂ, ಮರ್ಯಾದೆಯನ್ನು ಗಳಿಗೆ ಉಳಿಸಿಕೊಳ್ಳುವವನೂ, ಗ್ರಾಮಾಧಿಕಾರಿಯೂ, ಲಲಿತ ಕಲೆಗಳಲ್ಲಿ ಕುಶಲತ್ವವುಳ್ಳವನೂ ಆಗುವನು. ಆದರೆ, ಆಗಾಗ್ಗೆ ಅತಿ ಕೋಪವುಳ್ಳವನೂ ಆಗುವನು.
೧೨) ಬಹುಧಾನ್ಯ ಸಂವತ್ಸರದಲ್ಲಿ ಹುಟ್ಟಿದವನು ಧನಧಾನ್ಯ ಸಮೃದ್ಧಿಯುಳ್ಳವನ್ನೂ ವ್ಯಾಪಾರ ಒಕ್ಕಲುತನ ಮೊದಲಾದ ಉದ್ಯೋಗಗಳಲ್ಲಿ ದಕ್ಷನೂ, ನಿಷ್ಟುರ ಸ್ವಭಾವದವನ್ನೂ ಇದರಿಂದ ವಿರೋಧ ಎದುರಿಸುವವನೂ ಆಗುವನು ಗಾಯನ ವಿದ್ಯೆಯಲ್ಲಿ ಪಾರಂಗತನ್ನೂ ಕೈಕೊಂಡ ಕಾರ್ಯದಲ್ಲಿ ಯಶಸ್ವಿ ಹೊಂದುವವನೂ ಆಗುವನು.
೧೩) ಪ್ರಮಾಥಿನಾಮ ಸಂವತ್ಸರದಲ್ಲಿ ಹುಟ್ಟಿದವನು ಧೂರ್ತ ಸ್ವಭಾದವನ್ನೂ ಪರದ್ರವ್ಯ ಪರನಾರಿ ಅಪಹರಿಸುವದರಲ್ಲಿ ನಿಸ್ಸೀಮನೂ ಡಾಂಭಿಕ ಸ್ವಭಾವದವನೂ, ದುರ್ವ್ಯಸನಿಯೂ ಆಗುವನು ಪ್ರೇಮ ಪ್ರಕರಣದಲ್ಲಿ ವೈಭವೋಪೇತ ಜೀವನವುಳ್ಳವನೂ ಆಗುವನು.
೧೪) ವಿಕ್ರಮ ಸಂವತ್ಸರದಲ್ಲಿ ಜನಿಸಿದವನು ನೀಚೆ ಕೃತ್ಯಗಳನ್ನು ಮಾಡುವದರಲ್ಲಿ ಮನಸ್ಸುಳ್ಳವನೂ, ಕೋಪಿಯೂ ಸ್ವತಂತ್ರ ಬುದ್ದಿಯುಳ್ಳವನೂ, ವ್ಯಸನಿಯೂ ಆಗುವನು. ಪರರ ಮಾತಿನಲ್ಲಿ ಹೆಚ್ಚಿನ ವಿಶ್ವಾಸವಿಡದೆ ಸ್ವ-ವಿಚಾರದಲ್ಲಿ ಅಭಿರುಚಿಯುಳ್ಳವನೂ ಆಗುವನು.
೧೫) ವಿಷು ಸಂವತ್ಸರದಲ್ಲಿ ಹುಟ್ಟಿದವನು ಅಲ್ಪಲೋಭಿಯು, ದ್ರವ್ಯ ಸಂಪಾದನೆಯಲ್ಲಿ ನಿಷ್ಣಾತನು ಅನ್ಯಾಯ, ಪಾಪ ಕಾರ್ಯಗಳಿಂದ ದೂರವಿರುವವನು. ಆದರೆ ಪೌರುಷದ ಮಾತುಗಳನ್ನು ಮಾತ್ರ ವಿಶೇಷ ಆಡುವನು ವ್ಯವಸಾಯ, ಒಕ್ಕಲುತನದಲ್ಲೂ ಆಸಕ್ತನು ಸತ್ಕಾರ್ಯ, ಪರೋಪಕಾರ ಕಾರ್ಯಗಳನ್ನು ಮಾಡುವದರಲ್ಲಿ ವಿಶೇಷ ಆಸಕ್ತನು
೧೬) ಚಿತ್ರಭಾನು ಸಂವತ್ಸರದಲ್ಲಿ ಹುಟ್ಟಿದವನ್ನು ಬೆಲೆಯುಳ್ಳ ವಸ್ತ್ರಾಭರಣಗಳನ್ನು ಧರಿಸಿಕೊಳ್ಳುವದರಲ್ಲಿ ಸುಗಂಧ ಲೇಪನಗಳನ್ನು ಧರಿಸಿಕೊಳ್ಳುವದರಲ್ಲಿ ವಿಶೇಷ ಪ್ರೇಮವುಳ್ಳವನು ದೇವತಾದಿ ಗುರು ಹಿರಿಯರಲ್ಲಿ ಒಳ್ಳೇ ಶೃದ್ದೆಯನ್ನು ಹೊಂದಿರುವವನು ಆಗುತ್ತಾನೆ. ಆದರೆ ಸ್ವಲ್ಪು ಅಹಂಕಾರಿಯು
೧೭) ಸ್ವಭಾನು ಸಂವತ್ಸರದಲ್ಲಿ ಹುಟ್ಟಿದವನು ಸತ್ಕಾರ್ಯದಲ್ಲಿ ವಿಶೇಷ ಆಸಕ್ತನು. ಶತೃ ಮಿತ್ರರಲ್ಲಿಯೂ ವಿಕೋತ್ತರ ಭಾವನೆಯಿಂದ ನಯ ವಿನಯದಿಂದ ನಡೆದುಕೊಂಡು ತನ್ನ ಕಾರ್ಯ ಸಾಧಿಸಿಕೊಳ್ಳುವದದಲ್ಲಿ ನಿಮನುಸ್ಸೀ ಸಾಧಾರಣ ಶ್ರೀಮಂತನಾಗಿದ್ದರೂ ಹೆಚ್ಚು ಆಡಂಬರವುಳ್ಳವನು, ತನ್ನ ಕುಟುಂಬ ಪೋಷಣೆಯಲ್ಲಿ ಶೃದ್ದೆಯುಳ್ಳವನು..
೧೮) ತಾರಣ ಸಂವತ್ಸರದಲ್ಲಿ ಹುಟ್ಟಿದವನು ಜನಪ್ರೇಮಿಯು, ಒಳ್ಳೆ ಉತ್ಸಾಹದಿಂದ ಕಾರ್ಯ ಕೈಕೊಳ್ಳುವವನೂ, ಧರ್ಮ ಕಾರ್ಯಗಳಲ್ಲಿ ಆಸಕ್ತನೂ, ಗುರು ಹಿರಿಯರಲ್ಲಿ ದೇವರಲ್ಲಿ ಭಯ ಭಕ್ತಿಯುಳ್ಳವನು ಆಗಿರುವನಲ್ಲದೆ, ಪಾಪಭೀರುವು ಆಗಿರುತ್ತಾನೆಂದು ಕೆಲವು ಗ್ರಂಥದಲ್ಲಿ ಹೇಳಿದ್ದರೆ ಜಾತಕಾಭರಣ ಎಂಬ ಗ್ರಂಥದಲ್ಲಿ, ಈತನು ಕ್ರೂರಿಯೂ, ಪಾಪಕಾರ್ಯಾಸಕ್ತನೂ, ಸ್ತ್ರೀ ಲಂಪಟನೂ ದರಿದ್ರನೂ, ಚಂಚಲ ಮನಸ್ಸುಳ್ಳವನೂ ಎಂದು ಹೇಳಲಾಗಿದೆ. ಆದರೂ ಸಂತೋಷಭರಿತನು.
೧೯) ಪಾರ್ಥಿವ ಸಂವತ್ಸರದಲ್ಲಿ ಜನಿಸಿದವನು ಸುಖಜೀವನ ನಡೆಸುವನು ಈತನು ಅಧಿಕ ಕೀರ್ತಿವಂತನಾಗುತ್ತಾನಲ್ಲದೆ, ತನ್ನವರಿಗೂ ಪರರಿಗೂ ತನ್ನ ಶ್ರೇಷ್ಠ ಗುಣ ನಡತೆಗಳಿಂದಾಗಿ ಬೇಕಾದವನಾಗುತ್ತಾನೆ. ಚತುರನೂ, ವಿದ್ಯಾವಂತನೂ, ಸಭಾಭೂಷಣನೂ, ಕಾರ್ಯ ತತ್ಪರನೂ ಆಗುವನು. ಅಂತೂ ಜನಪ್ರಿಯನಾಗಿ ಬಾಳುವನು.
೨೦) ವ್ಯಯ ಸಂವತ್ಸರದಲ್ಲಿ ಜನಿಸಿದವನು ಮೇಲಿಂದ ಮೇಲೆ ಕಷ್ಟಕ್ಕೆ ಈಡಾಗುವನು. ದುಂದುಗಾರನೂ, ಸ್ತ್ರೀ ಲಂಪಟನೂ ಹಟವಾದಿಯೂ ಆಗುವನೆಂದು ದೈವಜ್ಞ ವಿಲಾಸ ಎಂಬ ಗ್ರಂಥದಲ್ಲಿ ಹೇಳಿದ್ದರೂ ಮಾನಸಾಗರ ಹಾಗೂ ಯವನೇಶ್ವರ ಎಂಬ ಗ್ರಂಥದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ, ಈ ಸಂವತ್ಸರದಲ್ಲಿ ಜನಿಸಿದವನು ರಾಜಸಮಾನವಾದ ಕಾಂತಿಯುಳ್ಳವನು, ಮಾನ ಮರ್ಯಾದೆಯುಳ್ಳ ಅಧಿಕಾರಿಯೂ, ಸದಾ ವಾಹನದಲ್ಲಿ ಕುಳಿತು ಅಧಿಕಾರ ನಡೆಸುವವನೂ, ಸುಖಿಯೂ, ಶ್ರೇಷ್ಠ ಮಾನವತಾಗುಣವುಳ್ಳವನೂ ಆಗುವನೆಂದು ಹೇಳಿರುತ್ತವೆ.