ಮನೆ ಅಪರಾಧ ಫೆ. 15 ರಂದು ಕಾಣೆಯಾಗಿದ್ದ ಯುವಕನ ಮೃತದೇಹ 3 ಭಾಗಗಳಾಗಿ ನದಿಯಲ್ಲಿ ಪತ್ತೆ

ಫೆ. 15 ರಂದು ಕಾಣೆಯಾಗಿದ್ದ ಯುವಕನ ಮೃತದೇಹ 3 ಭಾಗಗಳಾಗಿ ನದಿಯಲ್ಲಿ ಪತ್ತೆ

0

ಬಾಗ್ಪತ್, ಉತ್ತರಪ್ರದೇಶ​,: ಫೆ. 15 ರಂದು ಕಾಣೆಯಾಗಿದ್ದ ಯುವಕನೊಬ್ಬನ ಮೃತದೇಹ ಮೂರು ಭಾಗಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆದಿರುವ ಸ್ಥಿತಿಯಲ್ಲಿ ಉತ್ತರ ಪ್ರದೇಶದ ಬಾಗ್ಪತ್​ನಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

Join Our Whatsapp Group

ಛಪ್ರೌಲಿಯ ಮೊಹಲ್ಲಾ ಖುರೇಷಿಯಾನ್​ ನಿವಾಸಿ ಅಸ್ಗರ್​ ಅವರ ಮಗ ಫೈಸಲ್ (21) ಕೊಲೆಯಾದ ಯುವಕ.

ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಯುವಕ: ಫೈಸಲ್​ ಫೆ.15 ರಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ, ಆತನಿಗಾಗಿ ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಸಿಗದ ಕಾರಣ ಕೊನೆಗೆ ಛಪ್ರೌಲಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದರು. ಯುವಕನನ್ನು ಅಪಹರಿಸಿರುವ ಆರೋಪವೂ ಕೇಳಿ ಬಂದಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಆದರೆ, ಇದೀಗ ಬುಧವಾರ ಸಂಜೆ ಹರ್ಷಿಯಾ ಗ್ರಾಮದ ಬಳಿಯ ಹಿಂದೋನ್​ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿಸಿ ಎಸೆದಿರುವ ರೀತಿಯಲ್ಲಿ ಪತ್ತೆಯಾಗಿದೆ.​ ಮುಂಡ, ಮತ್ತು ಕುತ್ತಿಗೆ ಸೇರಿದಂತೆ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಲಾಗಿದೆ. ಹೊಟ್ಟೆಯನ್ನು ಚೂರಿಯಿಂದ ಸೀಳಿ ಹಾಕಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಫೈಸಲ್​​​​​ನದ್ದು ಎಂದು ಗುರುತಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಘಟನೆ ಬಗ್ಗೆ ಎಸ್​​​​​ಒ ಹೇಳಿದ್ದಿಷ್ಟು: ಈ ಬಗ್ಗೆ ಛಪ್ರೌಲಿ ಎಸ್​ಒ ದೇವೇಶ್​ ಶರ್ಮಾ ಮಾಹಿತಿ ನೀಡಿದ್ದು, “ಯುವಕ ಕಾಣೆಯಾಗಿದ್ದ ಬಗ್ಗೆ ಕುಟುಂಬದವರು ದೂರು ನೀಡಿದ್ದರು. ಪೊಲೀಸರು ಹುಡುಕುತ್ತಿದ್ದರು. ಈಗ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಕುಟುಂಬ ಸದಸ್ಯರ ಆರೋಪಗಳ ಪ್ರಕಾರ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು” ಎಂದು ತಿಳಿಸಿದರು.