ಮನೆ ಕಾನೂನು ತಾಯಿ ಕೊಂದು ಆಕೆಯ ಅಂಗಾಂಗಗಳನ್ನು ಬೇಯಿಸಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಾಂಬೆ ಹೈಕೋರ್ಟ್​

ತಾಯಿ ಕೊಂದು ಆಕೆಯ ಅಂಗಾಂಗಗಳನ್ನು ಬೇಯಿಸಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಾಂಬೆ ಹೈಕೋರ್ಟ್​

0

ತನ್ನ ತಾಯಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಬೇಯಿಸಿದ್ದ ಮಗನಿಗೆ ಸುಧಾರಣೆಗೆ ಅವಕಾಶವೇ ಇಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್​ ಮರಣದಂಡನೆ ತೀರ್ಪು ಎತ್ತಿಹಿಡಿದಿದೆ. 2017ರಲ್ಲಿ ಕೊಲ್ಹಾಪುರದ ವ್ಯಕ್ತಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದ ಇಷ್ಟೇ ಅಲ್ಲದೆ ಆಕೆಯ ದೇಹದ ಭಾಗಗಳನ್ನು ಬೇಯಿಸಿದ್ದ.

Join Our Whatsapp Group

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು ಆತನನ್ನು ನರಭಕ್ಷನಿಗೆ ಹೋಲಿಸಿದ್ದು, ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಮರಣದಂಡನೆ ಶಿಕ್ಷೆಯೇ ಸರಿ ಎಂದು ಹೈಕೋರ್ಟ್​ ಹೇಳಿದೆ.

2021 ರಲ್ಲಿ ಕೊಲ್ಹಾಪುರ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಕುಚ್ಕೊರವಿ, ನ್ಯಾಯಾಲಯವು ತೀರ್ಪನ್ನು ದೃಢಪಡಿಸಿದ್ದರಿಂದ ಯರವಾಡ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ನ್ಯಾಯಮೂರ್ತಿ ಚವಾಣ್ ಮಾತನಾಡಿ, ಇದು ಅಪರೂಪದ ಪ್ರಕರಣವಾಗಿದೆ, ಏಕೆಂದರೆ ಆತ ಸ್ವಂತ ತಾಯಿಯನ್ನು ಕೊಲೆ ಮಾಡಿ, ದೇಹವನ್ನು ಕತ್ತರಿಸಿ, ಹೃದಯ ತೆಗೆದು ಅದನ್ನು ಕೂಡ ಬೇಯಿಸಿದ್ದ ಎಂದಿದ್ದಾರೆ.

ಈತನಿಗೆ ಮರಣದಂಡನೆ ವಿಧಿಸಿದರಷ್ಟೇ ಬೇರೆಯವರಿಗೆ ಈ ರೀತಿ ತಪ್ಪು ಮಾಡುವ ಧೈರ್ಯ ಬರದು. ಕುಚ್ಕೊರವಿ ತನ್ನ 63 ವರ್ಷದ ತಾಯಿ ಯಲ್ಲಮ್ಮ ರಾಮಾ ಕುಚ್ಕೊರವಿಯನ್ನು ಕೊಂದರು ಮತ್ತು ಆಕೆಯ ದೇಹವನ್ನು ವಿರೂಪಗೊಳಿಸಿದರು ಮತ್ತು ಅವರ ಕೆಲವು ಅಂಗಗಳನ್ನು ಬೇಯಿಸಲು ಪ್ರಯತ್ನಿಸಿದ್ದ.

2021ರಲ್ಲಿ ಕೊಲ್ಲಾಪುರ ನ್ಯಾಯಾಲಯ ಸುನೀಲ್ ಕುಚ್ಕೋರ್ವಿಗೆ ಮರಣದಂಡನೆ ವಿಧಿಸಿತ್ತು. ಅವರನ್ನು ಪುಣೆಯ ಯರವಾಡ ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣ ಅಪರೂಪದ ಪ್ರಕರಣವಾಗಿದ್ದು, ಈ ಹೇಯ ಹತ್ಯೆ ಸಮಾಜದ ಸಾಮಾಜಿಕ ಪ್ರಜ್ಞೆಯನ್ನು ಬುಡಮೇಲು ಮಾಡಿದೆ ಎಂದು ಸೆಷನ್ಸ್ ನ್ಯಾಯಾಲಯ ಅಂದು ಹೇಳಿತ್ತು. ಅಪರಾಧಿ ತನ್ನ ಅಪರಾಧ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ.