ಚಿಕ್ಕಮಗಳೂರು: ಅಡಿಗೆ ಬಿದ್ದ ಬೈಕನ್ನು100 ಅಡಿಯಷ್ಟು ದೂರ ಕಾರು ಎಳೆದುಕೊಂಡು ಹೋದ ಘಟನೆ ರಾಷ್ಟ್ರೀಯ ಹೆದ್ದಾರಿ 173ರ ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಗುದ್ದಿದ ರಭಸಕ್ಕೆ ಬೈಕಿನಲ್ಲಿ ಬೆಂಕಿ ಹತ್ತಿದರೂ ಕಾರು ಚಾಲಕ ನಿಲ್ಲಿಸದೆ ಹೋಗಿದ್ದಾನೆ. ಬೈಕ್ ಸವಾರನನ್ನು ಕೆಳಕ್ಕೆ ತಳ್ಳಿ ಕಾರು ಚಾಲಕ ತನ್ನ ಪಾಡಿಗೆ ತೆರಳಿದ್ದಾನೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿರುವ ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಬದಿ ನಿಂತಿದ್ದ ಜನರ ಕಣ್ಣೆದುರೇ ಅವಘಡ ನಡೆದಿದೆ.














