ಈ ಜಗತ್ತು ಪಂಚಭೂತಗಳಿಂದ ಹೇಗೆ ರೂಪಿತವಾಗಿದೆಯೋ ಹಾಗೆಯೇ ಈ ನಮ್ಮ ದೇಹವು ಸಹ ಪಂಚಭೂತಗಳಿಂದ ನಿರ್ಮಿತವಾಗಿದೆ. ಈ ನಮ್ಮ ದೇಹವು ಅಗ್ನಿ ವಾಯು, ಜಲ, ಆಕಾಶ ಮತ್ತು ಪೃಥ್ವಿರ್ ಸ್ವರೂಪದ ಮಾಂಸಖಂಡಗಳನ್ನು ಹೊಂದಿದೆ. ನಮ್ಮ ದೇಹದ ಪ್ರತಿಯೊಂದು ಅಂಗಾಂಗವೂ ರಚಿಸಲ್ಪಟ್ಟಿದೆ.
ಈ ಮಾಂಸ ಕಣಗಳಿಂದ ರೂಪಿತವಾದ ಅಂಗಾಂಗವು, ಮಿಲಿಯನ್ ಎಷ್ಟು ಜೀವಕೋಶಗಳಿಂದ ರಚಿಸಲ್ಪಟ್ಟಿದೆ. ಈ ಜಗತ್ತಿನಲ್ಲಿನ ಸೃಷ್ಟಿಯಲ್ಲಿ ಯಾವ ಪ್ರತಿಯೊಂದು ಪ್ರಾಣಿ-ಕೀಟ ಗಿಡ ಮರಗಳು ಈ ಜೀವಕೋಶಗಳಿಲ್ಲದೆ ಬೆಳೆಯಲಾರವು. ನಮ್ಮ ದೇಹವು ಹೇಗೆ ಹಗಲಿರುವ ಉಸಿರಾಡುತ್ತಾ ಪ್ರಾಣದಿಂದ ಇದೆಯೋ ಹಾಗೆ ಈ ಜೀವಕೋಶಗಳು ಸಹ ನಾವು ತಿನ್ನುವ ಆಹಾರದಲ್ಲಿ ಮತ್ತು ನಾವು ಪಡೆಯುವ ಆಮ್ಲಜನಕದ ಪಾಲಿನಿಂದ ಶಕ್ತಿ ಪಡೆದು ಉಸಿರಾಡುತ್ತಾ ಅಂಗಾಂಗಗಳನ್ನು ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಜೀವಕೋಶಗಳ ಸಂಖ್ಯೆ
ಒಂಟಿ ಜೀವಕೋಶಗಳು ಹಲವು ಸಣ್ಣ ಸಸಿಗಳು ಮತ್ತು ಪ್ರಾಣಿಗಳು ಕೇವಲ ಒಂದು ಜೀವಕೋಶದಿಂದ ಉತ್ಪತ್ತಿಯಾಗುತ್ತದೆ. ಉದಾರಣೆಗೆ ಬ್ಯಾಕ್ಟೀರಿಯಗಳು, ಈಸ್ಟ್ ಅಮೀಬಾ ಎಂಬ ಸಸ್ಯ.
ಕೆಲವು ಜೀವಕೋಶಗಳು ಕೆಲವು ಸಣ್ಣ ಅಂಗಾಂಗವು ಕೆಲವು ಜೀವಕೋಶಗಳು ಅಥವಾ ಸಸ್ಯ ಅಥವಾ ಜಂತುಗಳು ಕೇಲವು ಮಾತ್ರ ಅಂದರೆ ಹಲವು 100ಗಳು ಜೀವಕೋಶಗಳು ಹೊಂದಿದೆ.
ಉದಾಹರಣೆಗೆ -ಸ್ಪಿರೋಗ್ಯಾರ ಮತ್ತು ವೋಲ್ಟೋಕ್ಸ್.
ಕೋಟ್ಯಂತರ ಜೀವಕೋಶಗಳು ನಾವು ಮತ್ತು ನಮ್ಮ ಸುತ್ತಾ ಕಣ್ಣಿಗೆ ಬೀಳುವ ಅನೇಕ ಪ್ರಾಣಿ ಮತ್ತು ಮರ ಬಳ್ಳಿಗಳು ಅನೇಕ ಕೋಟ್ಯಾಂತರ ಜೀವಿ ಕೋಶಗಳಿಂದ ಅವುಗಳ ದೇಹವು ರಂಜಿತವಾಗಿದೆ. ಮನುಷ್ಯ ತನ್ನ ತಾಯಿಯ ಗರ್ಭದಲ್ಲಿ ಅಂಡಾಣು ಮತ್ತು ವೀರ್ಯಾಣು ಸೇರಿ ಒಂದು ಜೀವಕೋಶವಾಗಿ ಜನ್ಮ ತಳೆಯುತ್ತಾನೆ. ಅದು ದಿನದಿಂದ ದಿನಕ್ಕೆ ಹಲವು ಲಕ್ಷ ಕೋಟಿ ಜೀವಕೋಶಗಳಾಗಿ ಪಿಂಡವಾಗಿ ಬೆಳೆಸುತ್ತದೆ. ಕೇವಲ 21ನೇ ದಿನಕ್ಕೆ ಆ ಪಿಂಡದಲ್ಲಿ ಪುಟ್ಟ ಹೃದಯವನ್ನು ಹೊಂದಿ, ಅದು ಕೇವಲ ಮೂರು ತಿಂಗಳಲ್ಲೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.ಬಹಳ ಬೇಗ ಈಜೀವಕೋಶಗಳು ಮಗುವಿನ ದೇಹವನ್ನು ಬೆಳೆಸುತ್ತಾ. ಒಂದೊಂದು ಅಂಗವನ್ನು ದೇಹದಲ್ಲಿಯೇ ಕಾರ್ಯ ನಿರ್ವಹಿಸುವಂತೆ ಮಾಡುತ್ತಾ ಹೋಗುತ್ತದೆ.
ಮಾನವನ ದೇಹದಲ್ಲಿ ಎಷ್ಟು ಜೀವಕೋಶಗಳಿವೆ.
ಪ್ರಾಪ್ತ ವಯಸ್ಕ ಮನುಷ್ಯರ ದೇಹದಲ್ಲಿ 1000 ವಿಲಿಯನ್ ವಿಲಿಯನ್ ಜೀವಕೋಶಗಳು ಮಾನವನ ಒಟ್ಟು ದೇಹದ ರಚನೆಗೆ ಅಡಕವಾಗಿದೆ.
10,000ಮಿಲಿಯನ್ ನರಕೋಶಗಳು ನಮ್ಮ ಮಿದುಳಿನಲ್ಲಿ ಅಡಕವಾಗಿದೆ.
25 ಮಿಲಿಯನ್ ಮಿಲಿಯನ್ ಕೆಂಪು ರಕ್ತ ಕಣಗಳು ನಮ್ಮ ರಕ್ತದಲ್ಲಿ ಅಡಕವಾಗಿದೆ.
30,000 ಮಿಲಿಯನ್ ಬಿಳಿ ರಕ್ತ ಕಣಗಳು ನಮ್ಮ ದೇಹದಲ್ಲಿ ಅಡಕವಾಗಿದೆ.
ಜೀವಕೋಶದ ಆಕಾರ
1. ಜೀವಕೋಶ ಬಹಳ ಸುಷ್ಮವಾಗಿದ್ದು ಇದು ಸೂಕ್ಷ್ಮದರ್ಶಕ ಯಂತ್ರದಿಂದ ಮಾತ್ರ ನೋಡಲು ಸಾಧ್ಯ. ಮಾನವನದೇಹದ ರಕ್ತದಲ್ಲಿರುವ ಕೆಂಪುರಕ್ತಕಣ ಪುರುಷನ ವೀರ್ಯಾಣುಗಳು ಪ್ರತಿ ಮಿಲಿಟರಿನಲ್ಲಿ 100 ಮಿಲಿಯನ್ ಏಕ ಜೀವಕೋಶ ಹೊಂದಿದ್ದ ವೀರ್ಯಾಣುಗಳು
2. ಅತಿ ಉದ್ದದ ಜೀವಕೋಶ ನರಕೋಶಗಳಲ್ಲಿರುತ್ತದೆ. ಇದರಲ್ಲಿ ಕೆಲವು ಮಿಲಿ ಮೀಟರ್ ಗಿಂತ ಕಡಿಮೆ ಉದ್ದವಾಗಿದ್ದರೆ,ಮತ್ತೆ ಕೆಲವು ಒಂದು ಮೀಟರ್ ಡಗೂ ಅಧಿಕವಾಗಿ ಉದ್ದವಾಗಿರುತ್ತದೆ. ಇದು ಮಿದುಳಿನಿಂದ ದೇಹದ ಇತರ ಭಾಗಗಳಿಗೂ ಮತ್ತು ದೇಹದ ಇತರ ಭಾಗಗಳಿಂದ ಮೆದುಳಿಗೂ ಸಂದೇಶವನ್ನು ರವಾನಿಸುವ ನರಕೋಶಗಳಾಗಿರುತ್ತದೆ.
3. ಅತಿ ದಪ್ಪವಾದ ಜೀವಕೋಶ ಪ್ರಾಣಿಗಳ ಮೊಟ್ಟೆಯಲ್ಲಿರುವ ಹಳದಿ ಬಣ್ಣದ ಜೀವಕೋಶ ಇದು ಜಗತ್ತಿನಲ್ಲಿ ಇದುವರೆಗೆ ದೊರಕಿದ್ದ ಅತ್ಯಂತ ದೊಡ್ಡದಾದ ಜೀವಕೋಶವಾಗಿದೆ.
4. ವಿವಿಧ ಆಕಾರವನ್ನು ಈ ಜೀವಕೋಶಗಳು ತಮ್ಮ ನಿತ್ಯ ಕಾರ್ಯ ನಿರ್ವಹಣೆಗೆ ತಕ್ಕಂತೆ ಹೊಂದಿರುತ್ತದೆ.
5. ಮಾನವನ ದೇಹದ ಕೆಂಪು ರಕ್ತಕಣಗಳು ಒಂದು ರೀತಿಯ ಜೀವಕೋಶಗಳಾಗಿದ್ದು ವೃತ್ತಾಕಾರವಾಗಿ ಮಧ್ಯಭಾಗದಲ್ಲಿ ತಗ್ಗಾಗಿದ್ದು ಅದು ರಕ್ತನಾಳಗಳಲ್ಲಿ ಸುಲಭವಾಗಿ ಹರಿದು ಹೋಗುತ್ತಾ ಅದರ ಜೊತೆ ಆಮ್ಲಜನಕವನ್ನು ತನ್ನಲ್ಲಿ ಸಾಗಿಸುತ್ತಾ ಹೋಗುತ್ತದೆ. ಅದು ದೇಹದ ಅಂಗಾಂಗದ ತುದಿಯ ಭಾಗದವರೆಗೂ ರಕ್ತದ ಜೊತೆ ಸಂಚರಿಸುತ್ತಾ ಅಂಗಾಂಗದಲ್ಲಿರುವ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕ ಸರಬರಾಜು ಮಾಡುತ್ತದೆ.
6. ಬಿಳಿ ರಕ್ತಕಣಗಳು ರಕ್ತನಾಳ ಗಳ ಗೋಡೆಯಲ್ಲಿ ಅಂಟಿಕೊಂಡಿರುತ್ತದೆ. ಇದು ಎರಡು ವಿಧದಲ್ಲಿ ಇರುತ್ತದೆ ಏಕಬೀಜ ಮತ್ತು ಹಲವು ಬೀಜಗಳಿಂದ ಕೂಡಿದ ಜೀವಕೋಶಗಳ ಬಿಳಿರಕ್ತ ಕಣಗಳಾಗಿರುತ್ತದೆ.