ದೆಹಲಿ: ವಿಶ್ವದಾದ್ಯಂತ ಮಿಲಿಯನ್ ಗಟ್ಟಲೇ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಆನ್ ಲೈನ್ ವಿಡಿಯೋ ಪ್ಲಾಟ್ ಫಾರ್ಮ್ ಯೂಟ್ಯೂಬ್ ಕಂಪನಿಯು ತನ್ನ ಪ್ರಸಿದ್ಧ ಫೀಚರ್ ವೊಂದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
ಸ್ಟೋರೀಸ್ ಫೀಚರ್ ಗೆ ವಿದಾಯ ಹೇಳಲಿರುವ ಯೂಟ್ಯೂಬ್, ಜೂನ್ 26ರಿಂದ ಇದನ್ನು ಬಂದ್ ಮಾಡಲಿದೆ. ಸ್ಟೋರಿಸ್ ಫೀಚರ್ ಎಂಬುದು ತಾತ್ಕಾಲಿಕ ಪೋಸ್ಟ್ ಫಾರ್ಮ್ಯಾಟ್ ಆಗಿದ್ದು, ಬಳಕೆದಾರರು ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್ ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಈಗಾಗಲೇ ಮಾಡಿರುವ ಪೋಸ್ಟ್ಗಳು ಕೂಡ ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ.
ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಹೊರತುಪಡಿಸಿ, ಇತರ ಸಾಮಾಜಿಕ ಜಾಲತಾಣಗಳು ಸ್ಟೋರಿಸ್ ಎಂಬ ವೈಶಿಷ್ಟ್ಯದೊಂದಿಗೆ ಯಶಸ್ಸನ್ನು ಕಂಡಿಲ್ಲ. ಈ ಹಿಂದೆ ಟ್ವಿಟ್ಟರ್ 2021ರಲ್ಲಿ ಫ್ಲೀಟ್ಸ್ ಎಂಬ ಇದೇ ರೀತಿಯ ವೈಶಿಷ್ಟ್ಯವನ್ನು ಪ್ರಾರಂಭಿಸಿ ಅದೇ ವರ್ಷ ಮತ್ತೆ ಹಿಂತೆಗೆದುಕೊಂಡಿತ್ತು.