ಮನೆ ಅಪರಾಧ ಬೆಂಗಳೂರಿನ ಈ ಲಾಡ್ಜ್‌ನಲ್ಲೇ ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದು..,

ಬೆಂಗಳೂರಿನ ಈ ಲಾಡ್ಜ್‌ನಲ್ಲೇ ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದು..,

0

ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಲಾಡ್ಜ್ ಒಂದರಲ್ಲಿ ವಿಶೇಷ ತನಿಖಾ ತಂಡ ಮಹಜರು ಪ್ರಕ್ರಿಯೆ ನಡೆಸುತ್ತಿದೆ.

ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದ ಪೊಲೀಸರು ತಡರಾತ್ರಿಯಿಂದ ಲಾಡ್ಜ್‌ನಲ್ಲಿ ಮಹಜರು ಮಾಡುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಬುರುಡೆ ಗ್ಯಾಂಗ್‌ ಸದಸ್ಯರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಬುರುಡೆ ತೆಗೆದುಕೊಂಡು ಬರುವ ಮೊದಲು ಇದೇ ಲಾಡ್ಜ್‌ನಲ್ಲಿ ಹಲವರನ್ನು ಭೇಟಿಯಾಗಿದ್ದ, ಬಗ್ಗೆ ಎಸ್‌ಐಟಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಹೀಗಾಗಿ ಎಸ್‌ಪಿ ಸೈಮನ್ ನೇತೃತ್ವದಲ್ಲಿ ಸುಮಾರು 20 ಮಂದಿ ಅಧಿಕಾರಿಗಳು, ಸಿಬ್ಬಂದಿಯಿಂದ ಮಹಜರು ಪ್ರಕ್ರಿಯೆ ನಡೆಯುತ್ತಿದೆ.

ಈ ಲಾಡ್ಜ್‌ನಿಂದ ಕೇವಲ ಎರಡು ಕಿಲೋಮೀಟರ್ ಹತ್ತಿರದಲ್ಲೇ ಗಿರೀಶ್ ಮಟ್ಟಣ್ಣನವರ್ ವಾಸದ ಫ್ಲ್ಯಾಟ್‌ ಇದೆ. ಚಿನ್ನಯ್ಯನ ಜೊತೆಗೆ ಮಟ್ಟಣ್ಣನವರ್, ಸೇರಿದಂತೆ ಹಲವರು ಇದೇ ಜಾಗದಲ್ಲಿ ಭೇಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.