ಮನೆ ಜ್ಯೋತಿಷ್ಯ ಆಯದ ಮೇಲಿನ ಬಾಗಿಲು ಇಡುವ ದಿಕ್ಕು

ಆಯದ ಮೇಲಿನ ಬಾಗಿಲು ಇಡುವ ದಿಕ್ಕು

0

       ಧ್ವಜಾಯ ಇರುವ ಮನೆಗೆ ಬೇಕಾದ ನಾಲ್ಕು ದಿಕ್ಕುಗಳಿಗೂ ಬಾಗಿಲ ಇರಬಹುದು. ಸಿಂಹಾಯ ವಿರುವ ಮನೆಗೆ ಪೂರ್ವ, ಉತ್ತರ ದಕ್ಷಿಣ ಈ ಮೂರು ದಿಕ್ಕಿಗೆ ಬಾಗಿಲು ಇಡಲು ಉತಮ. ಆದರೆ ಪಶ್ಚಿಮಕ್ಕೆ ಬಾಗಿಲವಿಟ್ಟರೆ ಪೂರ್ವಕ್ಕೂ ಒಂದು ಬಾಗಿಲು ಇರಬೇಕು. ಅಂದರೆ ಹೆಚ್ಚು ಶುಭವು. ವೃಷಭಾಯವಿರುವ ಮನೆಗೆ ಪೂರ್ವಕ್ಕೆ ಬಾಗಿಲನ್ನು ಹಚ್ಚುವುದು ಅತ್ಯಂತ ಯೋಗ್ಯವು ವೃಷಭಾಯಕ್ಕೆ ಉಳಿದ ಮೂರು ದಿಕ್ಕುಗಳೂ ಸಾಧಾರಣ ಫಲದಾಯಕಗಳಾಗಿವೆ. ಗಜಾಯದ ಮನೆಗೆ ಪೂರ್ವ, ದಕ್ಷಿಣ ದಿಕ್ಕುಗಳಲ್ಲಿ ಬಾಗಿಲು ಹಚ್ಚುವದು ಅತ್ಯುತ್ತಮವು.ಉಳಿದೆರಡು ದಿಕ್ಕುಗಳು ಸಾಧಾರಣ ಫಲದಾಯಕಗಳು. ಧ್ವಜಾಯ,ಸಿಂಹಾಯ ವೃಷಭಾಯ,ಗಜಾಯ ಈ ನಾಲ್ಕು ಆಯಗಳಲ್ಲಿ  ಮನೆಯನ್ನು ಕಟ್ಟಿದರೆ ಮಾತ್ರ ಸರ್ವರಿಗೂ ಸರ್ವ ಪ್ರೀತಿಯಿಂದಲೂ ಸುಖ ಸಂತೋಷಗಳು ಉಂಟಾಗುವವು.

 ನಾಲ್ಕನೇ ವರ್ಗದ ತಿಥಿ ಪಲಾವ್ ವಿಚಾರ :

    ಪೌರ್ಣಮಿ (15) ಅಮಾವಾಸ್ಯೆ (30),1, 4,8,9, 14ನೇ ತಿಥಿಗಳು ಗಣಿತ ರೀತಿಯಿಂದ ಬಂದರೆ ಅ ಶುಭವಾಗುತ್ತದೆ. ಉಳಿದ ತಿಥಿಗಳಾದ2,3,5,6,7, 10, 11, 12, 13 ಈತಿಥಿಗಳು ಬಂದರೆ ಉತ್ತಮ ಸರ್ವ ರೀತಿಯಿಂದಲೂ ಸೌಖ್ಯವು.

 ಐದನೇ ವರ್ಗದ ವಾರದ ಫಲ ವಿಚಾರ : 

     ವಾರದ ಗಣಿತದಿಂದ ಶೇಷವು ಒಂದು ಉಳಿದರೆ ಇದು ರವಿವಾರ ಅಗ್ನಿ ಭಯವನ್ನುಂಟು ಮಾಡುವದು. ಎರಡು ಉಳಿದರೆ ಸೋಮವಾರ ಅಧಿಕ ವೃದ್ಧಿಯು ಶುಭವು 3 ಉಳಿದರೆ ಮಂಗಳವಾರ ಸುಡುವಾಗದಾಗಲಿ ನಷ್ಟವಾದಾಗಲಿ ಜರಗಿಸುವದು.4 ಉಳಿದರೆ ಇದು ಬುಧವಾರ ಐಶ್ವರ್ಯವನ್ನು ಧನ ಧಾನ್ಯವನ್ನು  ವೃದ್ಧಿಸುವದು 5 ಉಳಿದರೆ ಗುರುವಾರ ಧನ, ಕನಕ, ಮರ್ಯಾದೆ ಮುಂತಾದ ಶುಭ ಫಲಗಳೇ ಲಭಿಸುವವು 6 ಉಳಿದರೆ  ಶುಕ್ರವಾರ ಸಂತಾನ ವೃದ್ಧಿಯನ್ನುಂಟು ಮಾಡುವವರು 0 ಉಳಿದರೆ ಶನಿವಾರ ಸಾಧಾರಣ ಅಶುಭ ಫಲಗಳೇ ಜಾಸ್ತಿ.

 6ನೇ ವರ್ಗದ ನಕ್ಷತ್ರ ಫಲ ವಿಚಾರ :

   ಗಣಿತ ರೀತಿಯಿಂದ ಬಂದ ನಕ್ಷತ್ರಗಳ ಶ್ರೇಷ್ಠ ಸಂಖ್ಯೆಗಳು 4, 5, 8, 12,13, 14,15, 17,21, 22,23, 24, 26,27, ಹೀಗೆ ಬಂದರೆ ಕ್ರಮವಾಗಿ ರೋಹಿಣಿ, ಮೃಗಶಿರ,ಪುಷ್ಯ,ಉತ್ತರ, ಹಸ್ತ, ಚಿತ್ತ,ಸ್ವಾತಿ, ಅನುರಾಧಾ, ಉತ್ತರಾಷಾಢ, ಶ್ರಾವಣ, ಧನಿಷ್ಠ,ಶತತಾರ ಉತ್ತರಾಭಾದ್ರ, ರೇವತಿ ನಕ್ಷತ್ರಗಳೆಂದು ತಿಳಿಯಬೇಕು ಈ ನಕ್ಷತ್ರಗಳೆಂದು ತಿಳಿಯಬೇಕು.ಈ ನಕ್ಷತ್ರಗಳು  ಅನಂತ ರೀತಿಯ ಶುಭಫಲಗಳನ್ನು ನೀಡುವವು.ಇವುಗಳನ್ನು ಹೊರತುಪಡಿಸಿ ಬರುವ ಉಳಿದ ನಕ್ಷತ್ರಗಳು ಬಂದರೆ ಆಶುಭ ಫಲಗಳು ಉಂಟಾಗುತ್ತವೆ.

 7 ವರ್ಗದ ಯೋಗಾಫಲವು :

    27 ಯೋಗದ ಪೈಕಿ ಗಣಿತ ರೀತಿಯಲ್ಲಿ  15, 13, 1, 9 10 6,27,17,19,ಈ ಸಂಖ್ಯೆಗಳು ಬಂದರೆ ಕ್ರಮವಾಗಿ ವಜ್ರ, ವ್ಯಾಘಾತ ವೃಷ್ಕಂಭ ಚಮ ಶೂಲ  ಗಂಡ ಅತಿಗಂಡ ವೈಧೃತ್ತಿ ವೃತ್ತಿಪಾತ,ಪರೀಘ ಯೋಗಗಳೆಂದು ತಿಳಿಯಬೇಕು. ಇವುಗಳೆಲ್ಲವೂ ದುಷ್ಟಗಳನ್ನೇ ಕೊಡುತ್ತವೆ. ಉಳಿದ ಶೇಷ ಸಂಖ್ಯೆಗಳು ಶುಭ ಫಲಗಳನ್ನುಂಟು ಮಾಡುತ್ತವೆ.

 8ನೇ ಕಾರಣ ಫಲವು  :

   ಗಣಿತ ಪ್ರಕಾರ ಶೇಷ 1,2,3,4,5, ಉಳಿದರೆ ಕ್ರಮವಾಗಿ ಬವ, ಬಾಲವ ಕೌಲವ,ತೈತಿಲ ಗರಜ ಕಾರಣಗಳೆಂದು ತಿಳಿಯಬೇಕು.ಇವು ಶುಭ ಫಲಗಳನ್ನು ಕೊಡುತ್ತವೆ. ಉಳಿದ ಶೇಷ ಸಂಖ್ಯೆಗಳು ಕರಣಗಳನ್ನು ಅಶುಭ ಫಲವನ್ನು ಕೊಡುತ್ತವೆ.

 9ನೇ ವರ್ಗದ ಅಂಶ ಫಲವು :

    ಗಣಿತದಿಂದ ಬಂದ ಶೇಷ ಸಂಖ್ಯೆ ಒಂದು ಉಳಿದರೆ ನಷ್ಟವು ಎರಡು ಉಳಿದರೆ ವೃದ್ಧಿಯು, ಮೂರು ಸಂಪತ್ತು, ನಾಲ್ಕು ದುಃಖ ಐದು ಮರಣ ಭೀತಿ, ಆರು ಜೋರಭಯ,ಏಳು ಸಂತಾನವೃದ್ಧಿ. ಎಂಟು ಉಳಿದರೆ ಗೋವು ಪಶುಗಳ ವೃದ್ಧಿಯು ಒಂಬತ್ತು ಸೊನ್ನೆ ಉಳಿದರೆ ಸಂತೋಷವೂ ಉಂಟಾಗುವದು.

 10ನೇ ವರ್ಗದ ಆಯುಷ್ಯ ಸಂಖ್ಯೆಯ ಫಲವು   :

      ಗಣಿತ ರೀತಿಯಲ್ಲಿ ಬಂದ ಆಯುಷ್ಯ ಸಂಖ್ಯೆಯು 60 ಕ್ಕಿಂತ ಹೆಚ್ಚಾಗಿದ್ದರೆ ಯಜಮಾನನಿಗೂ ಅವನ ವಂಶಜರಿಗೂ, ಆ ಮನೆಯಲ್ಲಿ ವಾಸಿಸುವವರಿಗೂ ಶುಭ ಫಲಗಳು ಜರುಗುತ್ತವೆ. 60 ಕ್ಕಿಂತ ಕಡಿಮೆಯಾದರೆ ಸರ್ವ ರೀತಿಯಲ್ಲಿ ಹಾನಿ, ಕಷ್ಟ ತೊಂದರೆ ಯುಂಟಾಗುವು.

 ಹತ್ತನೇ ವರ್ಗದ ದ ದಿಕ್ಪಾಲರದ ಫಲವು :

    ದಿಕ್ಪಾಲಕರ ಗಣಿತದಿಂದ ಶೇಷವು ಒಂದು ಉಳಿದರೆ ಇಂದ್ರನ್ನು ಸಕಲ ಸೌಭಾಗ್ಯವನ್ನುಂಟು ಮಾಡುವವನು ಎರಡು ಉಳಿದರೆ ಅಗ್ನಿಯು ಬೆಂಕಿಯ ಭಯವು ಮೂರು ಉಳಿದರೆ ಯಮನು ಅರಿಷ್ಟವನ್ನುಂಟು ಮಾಡುವನು. 4 ನೈಋತ್ಯನು ಶತೃಭೀತಿಯಂಟು  ಮಾಡುವವನು. ಐದು ವರುಣನ್ನು ಧನಕರುಗಳನ್ನು ವೃದ್ಧಿ ಮಾಡುವುದನ್ನು ವೃದ್ಧಿ ಮಾಡುವನು.ಆರು ವಾಯಾವ್ಯನು ಮಾಡುವನು.7 ಕುಬೇರನು ಧಾನ್ಯ ವೃದ್ಧಿಯನ್ನುಂಟು ಮಾಡುವನು.  ಸೊನ್ನೆ ಉಳಿದರೆ ಈಶಾನ್ಯನು ಮಹಾ ಶುಭ ಫಲದಾಯಕನು.ಹೀಗೆ ಅಷ್ಟ ದಿಕ್ಪಾಲಕರ ತಮ್ಮ ಫಲಾಫಗಳನ್ನು ಕೊಡುವುದು.