ಮೈಸೂರು: ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ರಂಗಭೂಮಿಯು ಸಹ ಮುಖ್ಯವಾಗುತ್ತದೆ. ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮವಾಗಿದೆ. ಮಕ್ಕಳ ರೂಪದಲ್ಲಿ ಆರಂಭ ಮಾಡುತ್ತಿರುವುದು ಒಂದು ಆರೋಗ್ಯಕರವಂತಹ ಬೆಳವಣಿಗೆ ಚಿತ್ರ ನಟ ಪ್ರಕಾಶ್ ರಾಜ್ ಅವರು ಹೇಳಿದರು.
ಮೈಸೂರು ರಂಗಾಯಣದ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ಎಂಬುದು ಒಂದು ಭಾಗ. ನಾವೆಲ್ಲ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಬಾರದು ಇವತ್ತಿಗೂ ಸಹ ಮಕ್ಕಳಿಗೆ ಅವರದೇ ಆದಂತಹ ಪ್ರಪಂಚ ಎಂಬುದು ಇದೆ. ಅದು ಹಸಿರಿನ ಪ್ರಪಂಚ, ಕುತೂಹಲದ ಪ್ರಪಂಚ ಜೊತೆಗೆ ತನ್ನನ್ನು ತಾನು ರೂಪಿಸಿಕೊಳ್ಳುವಂತಹ ಪ್ರಪಂಚ ಇದೆ. ಮಕ್ಕಳನ್ನು ನಾವು ಬೆಳೆಸಬೇಕಾಗಿಲ್ಲ ಬೆಳೆಯುತ್ತಿರುವಂತಹ ಮಕ್ಕಳನ್ನು ನಾವು ಸೂಕ್ಷ್ಮ ಗೊಳಿಸಬೇಕು ಎಂದು ಹೇಳಿದರು.
ಮನೆಯಲ್ಲೇ ಒಂದು ಅದ್ಭುತವಾದ ಕಲಿಕೆ ಇದ್ದರೂ ಸಹ ಶಾಲೆಯಿಂದ ಬಂದಂತ ಮಕ್ಕಳನ್ನ ನಂತರ ಟ್ಯೂಷನ್ ಹಾಕಿ ಅವರಿಗೆ ಒತ್ತಡ ವಾಗುವಂತಹ ರೀತಿಯಲ್ಲಿ ನಾವು ತೊಡಗಿಸುತ್ತಿದ್ದೇವೆ. ಮಕ್ಕಳ ಬಗ್ಗೆ ಪೋಷಕರು ಸಹ ಯೋಚನೆ ಮಾಡಬೇಕು ಅವರ ಬಗ್ಗೆ ಗಮನ ಕೊಡಬೇಕು ಎಂದು ತಿಳಿಸಿದರು.
ಮಕ್ಕಳನ್ನು ನಾವು ಒಂದು ಸಮುದಾಯದ ಒಳಗೆ ಬೆಳೆಸಿದರೆ ಮಕ್ಕಳು ಮೌನವಾಗಿ ಇದ್ದು ಬಿಡುತ್ತಾರೆ. ನಾವು ಎಳೆ ಮನಸ್ಸಿಗೆ ಬೇಕಾದಂತಹ ಕುತೂಹಲಕಾರಿ ಶಕ್ತಿಯನ್ನು ನೀಡಬೇಕು. ಮಕ್ಕಳನ್ನು ಹಾರುವುದಕ್ಕೆ ಬಿಡುವುದಕ್ಕೆ ನಾವು ಆರು ದಿಗಂತಗಳನ್ನು ಬಳಸುತ್ತಿದ್ದೇವೆ ಅದನ್ನು ಮಾಡುವುದು ತಪ್ಪು. ಈ ನಿಟ್ಟಿನಲ್ಲಾದರೂ ನಾವು ಒಂದು ಆರೋಗ್ಯಕರವಾದಂತಹ ಸಮಾಜವನ್ನು ಕಟ್ಟಲಿಕ್ಕೆ ಸಹಾಯವಾಗುತ್ತದೆ ಈಗಲಾದರೂ ನಾವು ಎಚ್ಚೆತ್ತುಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಭಾಷೆಯನ್ನ ಮಾತನ್ನು ಅವರ, ನೋಟವನ್ನು, ಕುತೂಹಲವನ್ನು ನಾವು ಆಲಿಸಬೇಕು ಎಂದು ಹೇಳಿದರು.
ಈ ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮವಾಗಿದೆ ಇದನ್ನ ನಾವು ಬೆಳೆಸುತ್ತಾ ಮುಂದೇನು ಬೆಳೆಸೋಣ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ ಡಿ ಸುದರ್ಶನ್ ಅವರು ಉಪಸ್ಥಿತರಿದ್ದರು.