ಬೆಂಗಳೂರು : ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ವೇಳೆ ಸೀಬರ್ಡ್ ಚಾಲಕ ಬೆಂಗಳೂರಿನ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೊಸ ವರ್ಷಕ್ಕೆ ಕೇವಲ 4 ದಿನಗಳ ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ 140ಕ್ಕೂ ಹೆಚ್ಚು ಜಾಗಗಳಲ್ಲಿ ಪೊಲೀಸರು ತಪಾಸಣೆಗೆ ಇಳಿದಿದ್ದರು. ಈ ವೇಳೆ ಗೋವಾಗೆ ತೆರಳುತ್ತಿದ್ದ ಸೀಬರ್ಡ್ ಬಸ್ ಚಾಲಕ ಕುಡಿದಿರುವುದು ಆಲ್ಕೋಮೀಟರ್ನಲ್ಲಿ ದೃಢಪಟ್ಟಿದೆ.
ಬೆಂಗಳೂರಿನಿಂದ ಗೋವಾಗೆ ಈ ಬಸ್ಸಿನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಉಪ್ಪಾರಪೇಟೆ ಪೊಲೀಸರು ಚಾಲಕ ದಿನೇಶ್ನನ್ನು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಸುಮಾರು 500ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು ಕಳೆದ 3 ದಿನಗಳಲ್ಲಿ 1500ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಕುಡಿದು ಚಾಲನೆ ಮಾಡಿದವರ ವಾಹನಗಳನ್ನು ಜಪ್ತಿ ಮಾಡಲಾಗಿದೆ.















