ಮನೆ ಅಪರಾಧ ಅಪಘಾತ ಮಾಡಿ ಆಸ್ಪತ್ರೆಗೆ ಬಾಲಕನ್ನು ಸೇರಿಸಿ ಪೊಲೀಸರಿಗೆ ಶರಣಾದ ಚಾಲಕ

ಅಪಘಾತ ಮಾಡಿ ಆಸ್ಪತ್ರೆಗೆ ಬಾಲಕನ್ನು ಸೇರಿಸಿ ಪೊಲೀಸರಿಗೆ ಶರಣಾದ ಚಾಲಕ

0

ಬೆಳಗಾವಿ: ಅಪಘಾತ ಮಾಡಿದ್ದಲ್ಲದೇ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಬಳಿಕ ತಾನೇ ಹೋಗಿ ಚಾಲಕ ಪೊಲೀಸರಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಅಪಘಾತದಲ್ಲಿ ಬಾಲಕ ವಿನಯ್ ಲಕ್ಷ್ಮಣ್ ಕೆಂಚನ್ನವರ್(8) ಮೃತಪಟ್ಟಿದ್ದಾರೆ. ನಾಗನೂರು ಬಳಿ ಬಾಲಕ ರಸ್ತೆ ದಾಟುವಾಗ ಕಾರು ಗುದ್ದಿದೆ. ಅಪಘಾತವಾದ ಬಳಿಕ ತನ್ನದೇ ವಾಹನದಲ್ಲಿ ಚಾಲಕ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ ಬಾಲಕ ಮೃತಪಟ್ಟಿರುವುದಾಗಿ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಲ್ಲಿಂದ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆ ಒಳಗೆ ಪೋಷಕರು ಬಾಲಕನನ್ನ ತೆಗೆದುಕೊಂಡು ಹೋಗುತ್ತಿದ್ದಂತೆ ಇತ್ತ ಚಾಲಕ ಪೊಲೀಸ್​ ಠಾಣೆಗೆ ಓಡಿ ಹೋಗಿ ಶರಣಾಗಿದ್ದಾನೆ.

ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.