ಮನೆ ರಾಜಕೀಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬಸವರಾಜ ಬೊಮ್ಮಾಯಿ

0

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಾಗಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಆರ್ಥಿಕ ಸ್ಥಿತಿ ಅಯೋಮಯಾಗಿದೆ. ರಾಜ್ಯದ ಬರಗಾಲ ನಿವಾರಣೆಗೆ ಸಭೆ ಮಾಡಿದರಷ್ಟೇ ಸಾಲದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು, ಆಗ ಬದುಕಿಗೆ ಹತ್ತಿರವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣೇಬೆನ್ನೂರು ತಾಲೂಕು ಮಾಕನೂರಿನಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟಿಲ್ ಅವರು ಹೇಳಿದ ಪ್ರತಿ ಮಾತಿಗೆ ಉತ್ತರ ನೀಡಬೇಕೆಂದು ಏನಿಲ್ಲ. ಯಾರ ಬದುಕೆಂದು ಜನರಿಗೆ ಗೊತ್ತಿದೆ ಅವರು ಉತ್ತರ ನೀಡುತ್ತಾರೆ ಎಂದರು.

ಕ್ಷೇತ್ರದ ಎಲ್ಲೆಡೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕ್ಷೇತ್ರ ಜನರ ನಿರೀಕ್ಷೆ ತುಂಬಾ ಇದೆ. ಆ ನಿರೀಕ್ಷೆಯಂತೆ ಕೆಲಸ ಮಾಡುವೆ ಎಂದರು.

ಬಿಜೆಪಿ ಒಡೆದ ಮನೆ, ಬೊಮ್ಮಾಯಿ ಏಕಾಂಗಿ ಪ್ರಚಾರ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಚುನಾವಣೆಯಿದ್ದರೂ ನಾನು ಒಬ್ಬನೇ ಸಾಕು. ನಿನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಎಷ್ಟು ಒಗಟ್ಟಿತ್ತು ಎಂದು ತಿಳಿದಿದೆ. ಸಭೆಯ ಹಾಲ್ ಗಿಂತ ಸಭೆಯ ಪ್ರಮುಖ ವೇದಿಕೆಯಲ್ಲಿ ನಾಯಕರು ಹೆಚ್ಚಿದ್ದರು. ನಿನ್ನೆ ಕಾಂಗ್ರೆಸ್ ಸಭೆ ನೋಡಿದರೆ ಕಾಂಗ್ರೆಸ್ ನಲ್ಲಿ ಒಗಟ್ಟಿಲ್ಲ ಎಂದು ಗೊತ್ತಾಗುತ್ತದೆ ಎಂದರು.

ಸದಾನಂದ ಗೌಡರು ಹಿರಿಯರು ನಮ್ಮ ನಾಯಕರು. ನಾನು ಅವರ ಬಳಿ ಮಾತನಾಡುವೆ. ನೊಂದು ಮಾತನಾಡುವದು ಸಹಜ. ಅದನ್ನು ಕೂತು ಬಗೆ ಹರಿಸುತ್ತೇವೆ ಎಂದರು.

ಬಿಜೆಪಿ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇವೆ. ಅವರು ನಮ್ಮ ಹಿರಿಯರು ಎಂದರು.