ಮನೆ ರಾಜಕೀಯ ಆರ್ಥಿಕ ಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ: ಚಿದಂಬರಂ

ಆರ್ಥಿಕ ಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ: ಚಿದಂಬರಂ

0

ಉದಯಪುರ(Udayapura): ದೇಶದ ಆರ್ಥಿಕತೆಯ ಸ್ಥಿತಿಯು ತೀವ್ರ ಕಳವಳಕ್ಕೆ ಕಾರಣವಾಗಿದೆ. ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ಆರ್ಥಿಕ ನೀತಿಗಳ ಮರುಹೊಂದಿಕೆಯನ್ನು ಆಲೋಚಿಸುವುದು ಅಗತ್ಯವಾಗಬಹುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿದಂಬರಂ, ಕಳೆದ ಎಂಟು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯು ಪ್ರಸ್ತುತ ಸರ್ಕಾರದ ಹಾಲ್‌ಮಾರ್ಕ್ ಆಗಿದೆ ಮತ್ತು ಸಾಂಕ್ರಾಮಿಕ ನಂತರದ ಚೇತರಿಕೆಯು ಅಲಸ್ಯ ಹಾಗೂ ಸ್ಥಗಿತಗೊಂಡಿದೆ ಎಂದರು.

ಮೂರು ದಿನಗಳ ‘ಚಿಂತನ ಶಿಬಿರದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿರುವ ಆರ್ಥಿಕತೆಯ ಸಮಿತಿಯ ಮುಖ್ಯಸ್ಥರಾಗಿರುವ ಚಿದಂಬರಂ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸಿನ ಸಂಬಂಧಗಳ ಸಮಗ್ರ ಪರಿಶೀಲನೆಗೆ ಸಮಯ ಪಕ್ವವಾಗಿದೆ ಎಂದು ಹೇಳಿದರು.

ಹಿಂದಿನ ಲೇಖನಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಮುಂದಿನ ಲೇಖನಆ್ಯಸಿಡ್ ದಾಳಿ ಪ್ರಕರಣ: ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ