ವೇದ ಕಾಲದಿಂದಲೂ ಜೇಷ್ಠ ಮಧುವನ್ನು ವೈದ್ಯರು ಔಷಧಿ ದ್ರವ್ಯವಾಗಿ ಬಳಸುತ್ತಿದ್ದರು. ವಿಷಹರ ದ್ರವ್ಯವಾಗಿ ಅಧಿಕವಾಗಿ ಬಳಸಲಾಗುತ್ತಿತ್ತು ಜೇಷ್ಠ ಮಧುವಿನ ಬೇರು ಮತ್ತು ಗುಪ್ತ ಕಾಂಡಗಳನ್ನು ಸಿಹಿ ತಿಂಡಿಗಳ ತಯಾರಿಕೆ ಮತ್ತು ನಶ್ಯದ ಜೊತೆ ಮಿಶ್ರಣ ಮಾಡಲು ಬಳಸಲಾಗುತ್ತದೆ ಜೇಷ್ಠ ಮಧುವನ್ನು ದೀರ್ಘಕಾಲ ಉಪಯೋಗಿಸುವುದರಿಂದ ಯೌವ್ವನ ಪಡೆಯಬಹುದು ಎಂದು ಚೀನಿಯರ ನಂಬಿಕೆ, ಅತಿಮಧುರ ಎಂದು ಕರೆಯಲ್ಪಡುವ ಜೇಷ್ಠಮಧು ಹೆಸರೇ ಸೂಚಿಸುವಂತೆ ರುಚಿಯಲ್ಲಿ ಸಿಹಿಯಾದುದಾಗಿರುತ್ತೆದೆ.
ಸಸ್ಯವರ್ಣನೆ :
ಲಿಶೋರಿಸ್ (ಗೊಸಿರೈಜ ಗಾಟ), ಜೇಷ್ಠಮಧು ಹೆಸರಿನ ಈ ಸಿಹಿಸಿಹಿ. ಬೇರು ಲೆಗ್ಯುವಿನೆದು ಕುಟುಂಬಕ್ಕೆ ಸೇರಿದೆ. ಇದು ಒಂದು ಬಹುವಾರ್ಷಿಕ ಸಸ್ಯ, ಗಡುತರ ಬೆಳೆಯಾಗಿದ್ದು ನೇರಳ ಬಣ್ಣದ ಹೂಗಳನ್ನು ಬಿಡುತ್ತದೆ ಈ ಬೆಳೆಯ ಬೇರುಗಳನ್ನು ಆಮದು ಮಾಡಿಕೊಳ್ಳುತ್ತಲಿದ್ದು ಅತ್ಯಧಿಕ ವಿದೇಶಿ ವಿನಿಮಯ ಪೋಲಾಗುತ್ತಿದೆ.
ಮಣ್ಣು:
ಈ ಬೆಳೆಗೆ ಒಂದು ಮೀಟರ್ ಆದರೂ ಆಳವಿರುವ ಮೇಲ್ಮಣ್ಣು ಅವಶ್ಯಕ. ಹಗುರವಾದ ಮರಳು ಮಿಶ್ರಿತ ಗೋಡು ಮಣ್ಣು ಬೇರು ಬೆಳವಣಿಗೆಯಾಗಲು ಉಪಯುಕ್ತವಾಗುತ್ತದೆ ಚೌಳು ಭೂಮಿಗೂ ಸೂಕ್ತವಾದ ಬೆಳೆ.
ಹವಾಗುಣ :
ಈ ಬೆಳೆಗೆ ಬೆಚ್ಚಗಿನ ಮತ್ತು ಒಣಹವೆಯುಳ್ಳ ವಾತಾವರಣ ಮುಖ್ಯ. ತೀಕ್ಷ್ಮವಾದ ಚಳಿಗಾಲ ಹಾಗೂ ದೀರ್ಘಾವಧಿಯ ಬೆಳವಣಿಗೆಯ ಹಂತವಿದ್ದಲ್ಲಿ ನೆಲದಿಂದ ಕೆಳಗಿರುವ ಬಹುವಾರ್ಷಿಕ ಬೇರು, ಕಾಂಡಕ್ಕೆ ಮತ್ತು ಎಲೆಗಳಿಗೆ ಆಹಾರ ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಅತಿಮಳೆ ಅಥವಾ ಮಂಜು, ಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.
ಸಸ್ಯಾಭಿವೃದ್ಧಿ:
ಸಸ್ಯಾಭಿವೃದ್ಧಿಯನ್ನು ಬೇರುಗಳ ಮೂಲಕ ವೃದ್ಧಿ ಮಾಡಬಹುದು. ಒಂದು ಪದರ ಮೀಟರ್ ಭೂಮಿಯನ್ನು ಸಿದ್ದಪಡಿಸಿ 30 ಸೆಂ.ಮೀ. ಅಂತರದಲ್ಲಿ ನೆಡಬೇಕು. ಈ ಬೇರಿನ ತುಂಡುಗಳನ್ನು 5ರಿಂದ 7 ಸೆಂ.ಮೀ.ರವರೆಗೆ ಮಣ್ಣಿನಿಂದ ಮುಚ್ಚಿ ತುಂಡುಗಳನ್ನು ನೆಟ್ಟಾಗ ಹಾಗೂ ನಂತರದ ಕೆಲವು ತಿಂಗಳವರೆಗೆ ಒಣ ವಾತಾವರಣ ಇದ್ದಲ್ಲಿ ಈ ತುಂಡುಗಳು ಶೀಘ್ರವಾಗಿ ಚಿಗುರುತ್ತವೆ.
ನೀರಾವರಿ :
ಹವಾಗುಣಕ್ಕನುಗುಣವಾಗಿ ನೀರನ್ನು ಹಾಕಬೇಕು. ಬೇಸಿಗೆಯ ತಿಂಗಳುಗಳಲ್ಲಿ ವಾರಕ್ಕೊಮ್ಮೆ ನೀರಾವರಿಯ ಅವಶ್ಯಕತೆ ಇದೆ. ಕೊಟ್ಟಿಗೆ ಗೊಬ್ಬರ ಪ್ರತಿಗಿಡಕ್ಕೆ 2 ಕೆ. ಜಿ. ಯಷ್ಟನ್ನಾದರೂ ನೀಡಬೇಕು.
ಕಳೆ ನಿಯಂತ್ರಣ :
ಬೆಳೆಯುವ ಅವಧಿಯಲ್ಲಿ ಭೂಮಿಯಿಂದ ಆಗಾಗ್ಗೆ ಕಳೆಯನ್ನು ತೆಗೆಯುವುದರ ಮೂಲಕ ಸ್ವಚ್ಛವಾಗಿರಬೇಕು ಹೂ ಬಿಡುವ ರಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಇಲ್ಲದಿದ್ದಲ್ಲಿ ಕೀಳು ದರ್ಜೆಯ ಗಿಡಗಳು ಕಾಣಿಸಿಕೊಳ್ಳುತ್ತವೆ.
ಕೀಟ ಮತ್ತು ರೋಗಗಳು :
ಕೀಟಗಳು : ಗೆದ್ದಲು.
ರೋಗಗಳು : ಎಲೆಚುಕ್ಕೆ ರೋಗ ಹಾಗೂ ಬೇರು ಕೊಳೆ ರೋಗ.
ಕೊಯ್ದು ಮತ್ತು ಇಳುವರಿ :
ಮಳೆಗಾಲದ ನಂತರ ಸೆಪ್ಟೆಂಬರ್ ತಿಂಗಳಿನಿಂದ ಬೇರುಗಳ ಸಹಿತ ಕೊಯ್ದು ಮಾಡಬೇಕು. ಆ ನಂತರ ಸಿಪ್ಪೆ ಸುಲಿದ ಜೇಷ್ಠ ಮಧುವನ್ನು 15ರಿಂದ 29 ಸೆಂ.ಮೀ. ತುಂಡುಗಳಾಗಿ ಮಾಡಿ ಬಿಸಿಲು ಮತ್ತು ನೆರಳಿನಲ್ಲಿ ಇಟ್ಟು ಒಣಗಿಸಬೇಕು. ಈ ಒಣಗಿಸುವಿಕೆಯನ್ನು ಒಣಗು ಯಂತ್ರಗಳ ಮೂಲಕ 3000 40 ಸೆ. ಶಾಖದಲ್ಲೂ ಒಣಗಿಸಬಹುದು. ನಾಟಿ ಮಾಡಿದ 15 ತಿಂಗಳುಗಳ ನಂತರ ಒಂದು ಚದರ ಮೀಟರ್ ನಿಂದ 300 ಗ್ರಾಂ.ನಷ್ಟು ಒಣಗಿದ ಜೇಷ್ಠಮಧುವನ್ನು ಪಡೆಯಬಹುದು.
ಉಪಯುಕ್ತ ಭಾಗಗಳು : ಬೇರು ಮತ್ತು ಗುಪ್ತಕಾಂಡ.
ರಾಸಾಯನಿಕ ಘಟಕಗಳು : ಗೈಸಿರಿಜಿನ್, ಗ್ಲಿಸಿರಿಜಿಕ್ ಆಮ್ಲ ಮತ್ತು ಗ್ಲೈಸಿರೆಟೆನಿಕ್ ಆಮ್ಲಗಳಿರುತ್ತವೆ.