ಔಷಧೀಯ ಗುಣಗಳು :
1. ಕೆಮ್ಮು, ಗಂಟಲುನೋವು: ಗಂಟಲು ಕೆರೆತಗಳಿರುವಾಗ ಜೇಷ್ಠಮಧುವಿನ ಕಷಾಯ ತಯಾರಿಸಿ ಕುಡಿಯಬೇಕು ಇಲ್ಲವೇ ಒಂದು ಚಮಚೆ ಜೇಷ್ಠಮಧುವಿನ ಪುಡಿಗೆ ಜೇನುತುಪ್ಪ ಬೆರೆಸಿ ಸೇವಿಸಬೇಕು.
2 .ಮೂತ್ರ ಕಟ್ಟಿದ್ದಲ್ಲಿ : ಜೇಷ್ಠಮಧುವಿನ ಕಷಾಯ ಸೇವನೆಯಿಂದ ಸಲೀಸಾಗಿ ಮೂತ್ರ ವಿಸರ್ಜನೆಯಾಗುತ್ತದೆ.
ಸ್ವರ ಒಡೆದಿದ್ದಲ್ಲಿ : ಜೇಷ್ಠಮಧುವಿನ ಪುಡಿಯನ್ನು ಜೇನಿನಲ್ಲಿ ಬೆರೆಸಿ ನೆಕ್ಕಬೇಕು. ತಕ್ಷಣ ನೀರು ಕುಡಿಯಬಾರದು. ಸ್ವಲ್ಪ ಹೊತ್ತು ಅದು ಗಂಟಲಿನಲ್ಲಿಯೇ ಇರುವಂತೆ ನೋಡಿಕೊಳ್ಳ ಬೇಕು. ಸಂಗೀತಗಾರರಿಗೆ ಇದು ಗಂಟಲಿಗೆ ಉತ್ತಮ ಟಾನಿಕ್ ನಂತೆ ಕೆಲಸ ಮಾಡುತ್ತದೆ. ನಿಯಮಿತವಾಗಿ ಜೇಷ್ಠಮಧು ಸೇವಿಸುವುದರಿಂದ ಕಂಠಶುದ್ದಿಯಾಗುತ್ತದೆ.
4. ಜೇಷ್ಠಮಧು : ಮೃದುವಿರೇಚಕವಾಗಿದೆ. ಮಲಬದ್ಧತೆಯ ತೊಂದರೆಯಿರುವವರು ಜೇಷ್ಠಮಧುವಿನ ಕಷಾಯ ಕುಡಿಯುವುದರಿಂದ ಮಲವಿಸರ್ಜನೆ ಸಲೀಸಾಗುತ್ತದೆ.
5. ಜ್ವರ ಇರುವಾಗ : ನಿಂಬೆಯ ಪಾನಕದಲ್ಲಿ ಜೇಷ್ಠಮಧು ಪುಡಿ ಬೆರಸಿ ಕುಡಿಯುವುದರಿಂದ ದಾಹ ನಿವಾರಣೆಯಾಗುತ್ತದೆಯಲ್ಲದೇ ಜ್ವರವೂ ತಗ್ಗುತ್ತದೆ.
6.ಹೊಟ್ಟೆನೋವು, ಹೊಟ್ಟೆಯುಬ್ಬರ : ಇರುವಾಗ
ಕಷಾಯ ಜೇಷ್ಠಮಧುವಿನ ಕುಡಿಯುವುದರಿಂದ ನೋವು ಶಮನವಾಗುತ್ತದೆ. ಜೇಷ್ಠಮಧುವಿಗೆ ಉದರದಲ್ಲಿನ ಆಮ್ಲತೆಯನ್ನು ಕಡಿಮೆ ಮಾಡುವ ಗುಣವಿದೆ.
7. ಹೊಟ್ಟೆಹುಣ್ಣಿನ (ಡಿಯೊಡಿನಲ್ ಅಲ್ಸರ್ ) ತೊಂದರೆಯಿಂದ ಬಳಲುವವರಿಗೆ ಜೇಷ್ಠಮಧು ಅತ್ಯಂತ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ. ಜೇಷ್ಠಮಧುವನ್ನು ಹಾಲಿನಲ್ಲಿ ಹಾಕಿ ಕುದಿಸಿ ಅದಕ್ಕೆ ಸಕ್ಕರೆ ಬೆರೆಸಿ ಕುಡಿಯಬೇಕು. ಇದಕ್ಕೆ ಯಷ್ಟಿಮಧು ಕ್ಷೀರಪಾಕ ಎನ್ನುವರು. ಇದನ್ನು ಕ್ರಮಬದ್ಧವಾಗಿ 15 ದಿನ ಇಲ್ಲವೇ 21 ದಿನಗಳ ಕಾಲ ಸೇವನೆ ಮಾಡುವುದರಿಂದ ನೋವು ಉರಿ ಕಡಿಮೆಯಾಗುವುದಲ್ಲದೇ ಹುಣ್ಣು ವಾಸಿಯಾಗುತ್ತದೆ.
8.ನಮ್ಮ ದೇಶದಲ್ಲಿ ದೊರೆಯುವ ಬಹುಪಾಲು ಕೆಮ್ಮಿನ ಔಷಧಿಗಳಲ್ಲಿ ಜೇಷ್ಠಮಧು ಒಂದು ಮುಖ್ಯದ್ರವ್ಯ.
10. ಸಂಧಿವಾತದಿಂದ ಬಳಲುವವರು : ಜೇಷ್ಠಮಧುವನ್ನು ತೇಯ್ದು ನೋವಿರುವ ಜಾಗಕ್ಕೆ ಲೇಪ ಹಾಕಿಕೊಳ್ಳುವುದರಿಂದ ಇಲ್ಲವೇ ಜೇಷ್ಠಮಧುವನ್ನು ಎಳ್ಳೆಣ್ಣೆಯಲ್ಲಿ ಬೆರೆಸಿ ತೈಲ ತಯಾರಿಸಿಟ್ಟುಕೊಂಡು ತೈಲದಿಂದ ನೋವಿರುವ ಜಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ನೋವು, ಊತ ಕಡಿಮೆಯಾಗುತ್ತದೆ.
11 .ತಲೆನೋವಿನಿಂದ ಬಳಲುವವರು : ಜೇಷ್ಠಮಧುವನ್ನು ನೀರಿನಲ್ಲಿ ತೇಯ್ದು ಹಣೆಗೆ ಲೇಪಿಸಿಕೊಳ್ಳಬೇಕು.
ಅಡುಗೆ :
ಕಷಾಯದ ಪುಡಿ : ಧನಿಯಾ 100 ಗ್ರಾಂ, ಸುಗಂಧಿ ಬೇರು 50 ಗ್ರಾಂ, ಜೀರಿಗೆ 50 ಗ್ರಾಂ,ಕಾಳುಮೆಣಸು 50 ಗ್ರಾಂ, ಜೇಷ್ಠಮಧು 50 ಗ್ರಾಂ, ಹಿಪ್ಪಲಿ 50 ಗ್ರಾಂ, ದಾಲ್ಚಿನ್ನಿ 25 ಗ್ರಾಂ, ಒಣಶುಂಠಿ, ಏಲಕ್ಕಿ, ಜಾಪತ್ರೆ, ಜಾಕಾಯಿ 10ಗ್ರಾಂ, ಎಲ್ಲವನ್ನೂ ಸೇರಿಸಿ ನುಣ್ಣಗಿನ ಪುಡಿ ಮಾಡಿಟ್ಟುಕೊಳ್ಳಬೇಕು.
ಬೇಕೆನಿಸಿದಾಗ ಕಷಾಯ ತಯಾರಿಸಿ ಕುಡಿಯಬಹುದು. ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಬೇಕು. ಮೂರಾಲ್ಕು ನಿಮಿಷಗಳ ಕುದಿತದ ನಂತರ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಇಳಿಸಿ, ಬೇಕೆನಿಸಿದಲ್ಲಿ ಹಾಲು ಬೆರೆಸಬಹುದು.
ಜೇಷ್ಠ ಮಧುವಿನ ಸೂಪ್ :ಹೆಸರುಬೇಳೆ ಎರಡು ಚಮಚೆ ತೊಗರಿಬೇಳೆ ತೊಗರಿಬೇಳೆ ಮತ್ತು ಟೊಮಾಟೋ ಹಣ್ಣು ಎರಡು ಜೇಷ್ಠ ಮಧು 100 ಗ್ರಾಂ ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲದ ಪುಡಿ ಸ್ವಲ್ಪ,ಕಾಳು ಮೆಣಸಿನ ಪುಡಿ ರುಚಿಗೆ ತಕ್ಕಷ್ಟು
ಜೇಷ್ಠ ಮಧುವನ್ನು ಜಜ್ಜಿ ಹೆಸರುಬೇಳೆ, ತೊಗರಿ ಬೇಳೆ ಮತ್ತು ಟಮೊಟೊ ಹಣ್ಣಿನೊಂದಿಗೆ ಸಾಕಷ್ಟು ನೀರಿನಲ್ಲಿ ಬೇಯಿಸಬೇಕು ಬೆಂದಿರುವ ಜೇಷ್ಠಮಧುವಿನಿಂದ ರಸ ಹಿಂಡಿ ತೆಗೆದು ನಾರಿನಂತಹ ಭಾಗವನ್ನು ಎಸೆದು ನಡಬೇಕು. ನಂತರ ಬೆಂದಿರುವ ಎಲ್ಲ ಪದಾರ್ಥವನ್ನೂ ನುಣ್ಣಗೆ ರುಬ್ಬಿಕೊಳ್ಳಬೇಕು ಇದಕ್ಕೆ ಎರಡು ಬಟ್ಟಲು ನೀರು ಸೇರಿಸಿ ಉಪ್ಪು ಬೆಲ್ಲ ಸೇರಿಸಿ ಮತ್ತೆ ಒಲೆಯ ಮೇಲಿಟ್ಟು ಕುದಿಸಬೇಕು. ಕುದಿದ ನಂತರ ಒಲೆಯಿಂದ ಇಳಿಸಿ ಕಾಳು ಮೆಣಸಿನಪುಡಿ ಬೆರೆಸಿ ಬಿಸಿಯಾಗಿರುವಾಗಲೇ ಕುಡಿಯಬೇಕು. ಈ ಸೂಪ್ ಅಜಿರ್ನಾ ಕೆಮ್ಮು, ಗಂಟಲುನೋವು ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.
ಅಡಿಕೆ ಪುಡಿ : ಬಡೇಸೋಪು 200 ಗ್ರಾಂ, ಅಡಿಕೆ 200 ಗ್ರಾಂ, ಜೇಷ್ಠಮರು 100 ಗ್ರಾಂ. ಏಲಕ್ಕೆ, ಲವಂಗ 10 ಗ್ರಾಂ ಒಣಕೊಬ್ಬರಿ ತುರಿ 100 ಗ್ರಾಂ, ಜಾಕಾಯಿ, ಜಾಪತ್ರೆ 5 ಗ್ರಾಂ, ಕಲ್ಲಂಗಡಿ ಬೀಜ 50 ಗ್ರಾಂ, ಕರಬೂಜು ಬೀಜ 50 ಗ್ರಾಂ, ತುಪ್ಪ, ಪಚ್ಚಕರ್ಪೂರ ಸ್ವಲ್ಪ
ಅಡಿಕೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬಡೆನೋವನ್ನು ಹುರಿದುಕೊಳ್ಳಬೇಕು. ಆವಂಗವನ್ನು ಹುರಿದುಕೊಳ್ಳಬೇಕು. ನಂತರ ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಜೇಷ್ಠಮಧುವನ್ನು ಪುಡಿ ಮಾಡಿ ಒಣಕೊಬ್ಬರಿ ತುರಿ, ಕಲ್ಲಂಗಡಿ ಬೀಜ, ಕರಬೂಜು ಬೀಜ, ಪಚ್ಚಕರ್ಪೂರ, ಬೇಕೆನಿಸಿದಲ್ಲಿ ಸ್ವಲ್ಪ ಸಕ್ಕರೆ ಪುಡಿ ಬೆರೆಸಿಟ್ಟಲ್ಲಿ ರುಚಿಕರ ಅಡಿಕೆಪುಡಿ ಸಿದ್ದ ಊಟದ ನಂತರ ಸ್ವಲ್ಪ ಬಾಯಿಗೆ ಹಾಕಿಕೊಂಡಲ್ಲಿ ಆಹಾರ ಜೀರ್ಣಿಸಲು ಸಹಾಯವಾಗುವುದಲ್ಲದೇ ಬಾಯಿಯೂ ಘಮಘಮಿಸುತ್ತದೆ.