ಮನೆ ರಾಜ್ಯ ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

0

ಚಿಕ್ಕಮಗಳೂರು: ಕಡೂರು ತಾಲೂಕಿನ ಜೋಡಿ ಲಿಂಗದಹಳ್ಳಿ ಗ್ರಾಮದ ರೈತ ಕೃಷ್ಣನಾಯ್ಕ್ (55) ಸಾಲ ಭಾದೆ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣ ನಾಯ್ಕ್ ಅವರು 3 ಲಕ್ಷ ರೂ. ಸಾಲ ಮಾಡಿ ರಾಗಿ, ಜೋಳ ಬಿತ್ತನೆ ಮಾಡಿದ್ದರು. ಮಳೆ‌‌ ಇಲ್ಲದೆ ಬೆಳೆ‌ ನಾಶವಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಕೊರಳೊಡ್ಡಿದ್ದಾರೆ.

ಕಳೆದ 40 ದಿನಗಳಲ್ಲಿ ಕಡೂರು ತಾಲೂಕಿನಲ್ಲಿ ಐದು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.