ವಿಸ್ತಾರ ವಿಮಾನದೊಳಗೆ ತನ್ನ ಮಗಳ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಮೇಲೆ ತಂದೆ ರೇಗಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ವಿಟರ್ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಆರಂಭದಲ್ಲಿ ಹುಡುಗಿ ಹೌ ಡೇರ್ ಯು ಎಂದು ಕೂಗಾಡೋದು ಕಂಡು ಬಂದಿದೆ. ಆಕೆ ಕಿರುಚಾಟ ಕೇಳಿ ಬೇರೆ ಸೀಟಿನಲ್ಲಿ ಕುಳಿತಿದ್ದ ಹುಡುಗಿಯ ತಂದೆ ವ್ಯಕ್ತಿಯ ಮೇಲೆ ಸಿಟ್ಟಿನಿಂದ ಹರಿಹಾಯ್ದರು.
ವಿಮಾನದಲ್ಲಿ ಗಗನಸಖಿಗಳು ಹುಡುಗಿಯ ತಂದೆಯನ್ನು ಶಾಂತ ಗೊಳಿಸಲು ಹರಸಾಹಸಪಟ್ಟರು. ಕೆಲಕಾಲ ವಿಮಾನದಲ್ಲಿ ಗದ್ದಲ ಏರ್ಪಟ್ಟಿತು.
ಅನೇಕ ಟ್ವಿಟ್ಟರ್ ಬಳಕೆದಾರರು ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡುವ ಮೂಲಕ ವಿಡಿಯೋ ಕಾಮೆಂಟ್ ಮಾಡಿದ್ದಾರೆ.














