“ಮಾಯೆ ಅಂಡ್ ಕಂಪೆನಿ’ ಎಂಬ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಸೆನ್ಸಾರ್ ಪಾಸ್ ಆಗಿ ಬಿಡುಗಡೆಯ ಹಂತಕ್ಕೆ ಬಂದಿದೆ.
ಈ ಚಿತ್ರವನ್ನು ಮಾತೃಶ್ರೀ ವಿಷನ್ ಬ್ಯಾನರ್ ನಡಿ ಎಂ.ಎನ್.ರವೀಂದ್ರ ರಾವ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
ಕ್ರೈಂ, ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾವನ್ನು ಸಂದೀಪ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಕಿಶೋರ್, ನವೀನ್, ಯಶ್ವಿನಿ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ, ಸಾಹಿತ್ಯ ಡಾ.ವೆಂಕಟೇಶ್ ಮೂರ್ತಿ ಅವರದದು.














